ಡಾ.ರೇಖಾ ಉದಯ್ ಅವರ ಗಜಲ್
ಕಾವ್ಯ ಸಂಗಾತಿ ಡಾ.ರೇಖಾ ಉದಯ್ ಗಜಲ್ ಕೂಡಿಟ್ಟ ದುಃಖವ ಹೊರ ಹಾಕಿದ್ದೇನೆ ನೀ ಕಂಡ ಕ್ಷಣದಲ್ಲಿಹಿಡಿದಿಟ್ಟ ನೋವಿನಿಂದ ಅತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕು ಶೂನ್ಯತೆಯ ಭಾವ ಮರೆಸಿ ಹೊಸತನ ಮೂಡಿಸಿದೆ ಈಗನೀ ಬಿಟ್ಟ ಸವಿ ನೆನಪುಗಳಿಂದ ನಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಎಷ್ಟೋ ಮಾತುಗಳು ಹೇಳದೆ ಮೌನದಲ್ಲಿ ಮರೆಯಾಗಿವೆನೋಡಬಾರದೆಂದಾಗಲೇ ಸಿಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಆಗಸದ ನಕ್ಷತ್ರಕ್ಕೂ ಒಮ್ಮೊಮ್ಮೆ ಕರಿಛಾಯೆ ಬಿಳಬಹುದು ಉಸಿರು ಬಿಗಿ ಹಿಡಿದು ಬದುಕಿ ಸತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕಿನ ರಂಗಮಂದಿರದಲ್ಲಿ ಅವನೇ ಖಳನಾಯಕನಂತಾಗಿಹರೇಖೂ ಬಾಳ ನೌಕೆಯಲಿ ಗೆದ್ದು ಸೋತಿದ್ದೇನೆ ನೀ ಕಂಡ ಕ್ಷಣದಲ್ಲಿ ಡಾ.ರೇಖಾಉದಯ್
ಡಾ.ರೇಖಾ ಉದಯ್ ಅವರ ಗಜಲ್ Read Post »









