ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ಅವ್ವ ನೀನಿನ್ನು ಇರಬೇಕಿತ್ತು.” ಮಕ್ಕಳೆಲ್ಲ ತವರಿಗೆ ಬಂದರೆಏನ್ ಸಡಗರ ಈ ಅವ್ವಗವಯಸ್ಸು ಮರುತ ಸಣ್ಣ ಹುಡುಗಿ ಆಗಿಬಿಡುತ್ತಿದ್ಲುರವೆ ಉಂಡೆ ಖಾರದ ಮಂಡಾಳ ಮುಂದಿಟ್ಟು ತಿನ್ನು ತಿನ್ನು ಅಂತಒಂದೇ ವರಾತ ಹಚ್ಚತಿದ್ಲು ಅವ್ವ ಅದಕ್ಕೆ ನೀನು ಇನ್ನಷ್ಟು ದಿನ ಇರಬೇಕಿತ್ತು. ಈಗ ಅಲ್ಲಿ ರವೆ ಉಂಡಿನೂ ಇಲ್ಲ ಮಂಡಾಳನು ಇಲ್ಲ ಬರೀ ಶೂನ್ಯ ನಿನ್ನ ಕೈ ರುಚಿ ತಿನ್ನೋ ಭಾಗ್ಯನು ಇನ್ನಿಲ್ಲ ಏನ್ ಚಂದ ನಿನ್ ಮಾತು ಏನ್ ಚೆಂದ ನಿನ್ನ  ನಗುಹಣೆ ತುಂಬಾ ಕುಂಕುಮ ತಲೆ ತುಂಬಾ ಸೆರಗು ತುರುಬಿನಲ್ಲಿ ಸದಾ ಹೂವಿನ ಮಾಲೆ. ನಿನ್ ನೋಡೋದೇ ಒಂದು ಸಡಗರ. ಅವ್ವ ಅದಕ್ಕೆ  ನೀನಿನ್ನು ಇರಬೇಕಿತ್ತು. ಆಷಾಢ ಮಾಸಾ ಶ್ರಾವಣ ಮಾಸ ಅಂತಉಡಿ ತುಂಬಿ ಹರಿಸಿ ಹಾರೈಸಿ ಕಳಿಸ್ತಿದ್ದೆನಿನ್ನಲ್ಲಿರೋದನ್ನೆಲ್ಲ ಮಕ್ಕಳಿಗೆ ಕೊಟ್ಟು ಪ್ರೀತಿಯ  ಅಮೃತದಾರೆ ಹರಿಸುತ್ತಿದ್ದೆ.ಅವ್ವ ನಿನ್ನ ಆಶೀರ್ವಾದ ಬಲದಿಂದ ಅಸಾಧ್ಯವೆಲ್ಲ ಸಾಧ್ಯವಾಗಿದ್ದು ಸತ್ಯ  ಅವ್ವ ಅದಕ್ಕೆ ನೀನಿನ್ನು  ಇರಬೇಕಿತ್ತು. ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ನಿನ್ನ ಸಂಭ್ರಮಕ್ಕೆ ಮಿತಿಯೇ ಇಲ್ಲ  ನಿನ್ನ ಜೀವನ ಪ್ರೀತಿಗೆ ಸಾಟಿಯೇ ಇಲ್ಲ. ನೀನು ಇಷ್ಟು ಬೇಗ ಅಗಲಿ ಅಂತ ನಾವೆಲ್ಲ ಅಂದುಕೊಂಡೆ ಇರಲಿಲ್ಲ ಅಪ್ಪನಗಲಿ ಒಂದು ದಿನ ಇದ್ದವಳಲ್ಲ ಈಗ ಅಪ್ಪ ಆಕಾಶ ದಿಟ್ಟಿಸತ್ತಾ ಮೌನವಾಗಿ ಕಣ್ಣೀರ್ ಆಗ್ತಾರೆ .  ಅವ್ವ ಅದಕ್ಕೆ ನೀನಿನ್ನು ಇರಬೇಕಿತ್ತು.  ಅವ್ವ ಎಲ್ಲರ ಸ್ಥಾನ ತುಂಬುತ್ತಾಳೆ  ಆದ್ರೆ ಅವ್ವನ ಸ್ಥಾನ ಯಾರು ತುಂಬೋಕಾಗಲ್ಲ ಅಂತ ಅರ್ಥ ಆಗಿದೆ.ನೀನಿಲ್ಲದ ಮನೆ ಮನೆಯೇ ಅಲ್ಲ ನೀರಿಲ್ಲದ ಕೆರೆಗೆ ಕರು ಹೋಗಿ  ಬಂದಂತೆ ಆಗಿದೆ ಮಕ್ಕಳ ಸ್ಥಿತಿ.  ನಿನ್ನ ಬಳೆಗಳ ಸದ್ದಿಲ್ಲದ ಅಡುಗೆ ಮನೆ ಮೌನವಾಗಿ ಮಲಗಿದೆ.ತಾಯಿ ಇದ್ರೆ ತವ್ರೆಚ್ಚು ಅದಕ್ಕೆ  ನೀನಿನ್ನು ಇರಬೇಕಿತ್ತು ಅವ್ವ. ಫೋನ್ ಹಚ್ಚಿ ಕೊಡಿ ಹಚ್ಚಿ ಕೊಡಿ ಅಂತ ಅಪ್ಪಗ ದುಂಬಾಲು ಬೀಳ್ತಿದ್ದೆ.ಫೋನ್ ಹಚ್ಚಿ ಕೊಟ್ರೆ ಮುಗಿಯಿತು ಗಂಟೆಗಟ್ಟಲೆ ಎಲ್ಲವನ್ನು ವಿಚಾರಸ್ತಿದ್ದೆ.ಈಗ್ ನಿನ್ ಫೋನು ಮಾತು ನಗುನಿನ್ನ ಸಾಮಿಪ್ಯ ಎಂದೆಂದಿಗೂ ದೂರಾದವು.ಅವ್ವ ಅದಕ್ಕೆ ನೀನು ಇನ್ನಷ್ಟು ದಿನ  ಇರಬೇಕಿತ್ತು. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.” Read Post »

ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಅವರ”ಮಳೆಗೊಂದು ಮನವಿ”

ಕಾವ್ಯ ಸಂಗಾತಿ ಮಾಲಾ ಚೆಲುವನಹಳ್ಳಿ “ಮಳೆಗೊಂದು ಮನವಿ” ಬಾ ಮಳೆಯೇ ಬಾಕಂಗಾಲಾದ ರೈತರಬದುಕಿಗೆ ಬೆಂಗಾವಲಾಗಿ ಬಾ ಮಿಂಚುತ್ತಾ, ಗುಡುಗುತ್ತಾಆಮಿಷ ತೋರದೇ ಬಾ, ತೋರುತ್ತಾ, ಹಾರುತ್ತಾಹಂಗಿಸಿ, ಅಣಕಿಸದೇ ಬಾ, ನೊಂದು ಹೋದ  ರೈತರಬೆಂದೆದೆಯ ಬೃಂದಾವನ ಮಾಡು ಬಾ ನಿಕೃಷ್ಟವಾದ ಬಡವರಬದುಕ ಉಥ್ಕೃ ಷ್ಟವಾಗಿಸಲು ಬಾ, ಮೇರೆ ಮೀರಿ ಮೆರೆಯುತ್ತಿರುವಸೂರ್ಯನ ತಾಪ ನೀಗಿಸಲು ಬಾ, ಇಳೆಯರಸಿ ನಾ ಕಾಯುತಿರುವೆಮಳೆಯರಸ ನೀ ಬಂದು ಸೇರೆನ್ನ ಮಾಲಾ ಚೆಲುವನಹಳ್ಳಿ

ಮಾಲಾ ಚೆಲುವನಹಳ್ಳಿ ಅವರ”ಮಳೆಗೊಂದು ಮನವಿ” Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯಸಂಗಾತಿ ಹಮೀದಾಬೇಗಂ ದೇಸಾಯಿ ಗಜಲ್ ಮರಳ  ಹೆಜ್ಜೆಗಳನು ಕಡಲು ಅಳಿಸಿದಂತಾಗಿದೆ  ಈ ಬದುಕುಇರುಳು ಕಂಡ ಬಾವಿಗೆ  ಹಗಲು  ಬಿದ್ದಂತಾಗಿದೆ ಈ ಬದುಕು ತಣ್ಣಗೆ  ಉರಿಯುವ  ಬೂದಿಮುಚ್ಚಿದ  ಕೆಂಡ  ಇದಲ್ಲವೇಕೆಸರಿನಲಿ ಅವಿತ ಮುಳ್ಳಿನ ಮೊನೆಯಂತಾಗಿದೆ  ಈ ಬದುಕು ಸಂತೈಸುವ ಕೈಗಳೇ  ಬಸಿರಿಗೆ ಕೊಳ್ಳಿ ಇಟ್ಟು ನಗುತಿವೆಕತ್ತಲೆಯ ಗರ್ಭದಿ ಬೆಳಕು ಕಳೆದಂತಾಗಿದೆ ಈ ಬದುಕು ಹಗಲು ವೇಷಧಾರಿಗಳ ಮೋಜು ಬಲುಜೋರು ಇಲ್ಲಿಸತ್ತ ಹೆಣಗಳ ಸಿಂಗಾರ ನೋಡುವಂತಾಗಿದೆ ಈ ಬದುಕು ಭಾವಗಳ ರೆಕ್ಕೆ  ಮುರಿದು ಬೆತ್ತಲೆಯಾಗಿವೆ ನೊಂದು ಬೇಗಂಪ್ರೀತಿಯನು ಎದೆಯ ಗೋರಿಯಲಿ ಹುಗಿದಂತಾಗಿದೆ ಈ  ಬದುಕು ಹಮೀದಾಬೇಗಂ ದೇಸಾಯಿ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

“ಶಿರಬಾಗಿದರೆ ಆಶೀರ್ವಾದ” ಕವಿತಾ ಶ್ರೀನಿವಾಸ್ ನಾಯಕ್ 

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್  “ಶಿರಬಾಗಿದರೆ ಆಶೀರ್ವಾದ” ​ಶಿರಬಾಗಿದರೆ ಆಶೀರ್ವಾದ ಈ ನಾಲ್ಕು ಪದಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ದೊಡ್ಡ ತತ್ವ ಅಡಗಿದೆ. ಹಿರಿಯರು, ಗುರುಗಳು ಮತ್ತು ದೇವರಿಗೆ ತಲೆಬಾಗಿ ನಮಸ್ಕರಿಸುವುದು ಕೇವಲ ಒಂದು ಪದ್ಧತಿಯಲ್ಲ, ಅದು ನಮ್ಮ ಅಂತರಂಗದ ಅಹಂಕಾರವನ್ನು ಅಳಿಸಿ, ದೊಡ್ಡವರ ಜ್ಞಾನ ಮತ್ತು ಶಕ್ತಿಯನ್ನು ನಮ್ಮದಾಗಿಸಿಕೊಳ್ಳುವ ಒಂದು ಪ್ರಕ್ರಿಯೆ.​ಅಹಂಕಾರದ ವಿಸರ್ಜನೆ :-​ಮನುಷ್ಯನ ಶಿರಸ್ಸು ಅಹಂಕಾರದ ಕೇಂದ್ರ ಎಂದು ಹೇಳಲಾಗುತ್ತದೆ. ನಾನು, ನನ್ನದು ಎಂಬ ಭಾವನೆಗಳು ನಮ್ಮ ತಲೆಯಲ್ಲಿ ತುಂಬಿರುತ್ತವೆ. ನಾವು ಯಾವಾಗ ಹಿರಿಯರ ಮುಂದೆ ತಲೆಬಾಗುತ್ತೇವೆಯೋ, ಆಗ ನಮ್ಮ ಅಹಂಕಾರವನ್ನು ಅವರ ಪಾದಗಳಿಗೆ ಸಮರ್ಪಿಸುತ್ತೇವೆ. ಅಹಂಕಾರ ಕರಗಿದಾಗ ಮಾತ್ರ ಮನಸ್ಸು ತಿಳಿಯಾಗುತ್ತದೆ.​ಗುರುಗಳ ಮುಂದೆ ಶಿಷ್ಯನು ಶಿರಬಾಗುವುದು ಅಜ್ಞಾನದಿಂದ ಜ್ಞಾನದ ಕಡೆಗೆ ನಡೆಯುವ ಮೊದಲ ಹೆಜ್ಜೆ. ಜಲಪಾತದ ನೀರು ಕೆಳಗಿರುವ ಕಣಿವೆಯತ್ತ ಹರಿಯುವಂತೆ, ಜ್ಞಾನವು ಎತ್ತರದ ವ್ಯಕ್ತಿಯಿಂದ ನಮ್ರತೆಯಿಂದ ಇರುವ ವ್ಯಕ್ತಿಗೆ ಹರಿಯುತ್ತದೆ. ತಲೆಬಾಗುವುದು ಅಂದರೆ ನಾನು ಕಲಿಯಲು ಸಿದ್ಧನಿದ್ದೇನೆ ಎಂದು ಒಪ್ಪಿಕೊಳ್ಳುವುದು.​ಕೃತಜ್ಞತಾ ಭಾವನೆ:-​ನಮಸ್ಕಾರ ಮಾಡುವುದು ನಮಗೆ ನೆರವಾದವರಿಗೆ, ನಮ್ಮನ್ನು ಸಾಕಿ ಸಲಹಿದವರಿಗೆ ತೋರುವ ಕೃತಜ್ಞತೆಯ ಸಂಕೇತ. ತಂದೆ-ತಾಯಿಯ ಪಾದಗಳಿಗೆ ಶಿರಬಾಗಿದಾಗ, ಅವರು ನಮಗಾಗಿ ಮಾಡಿದ ತ್ಯಾಗಕ್ಕೆ ನಾವು ಗೌರವ ಸಲ್ಲಿಸುತ್ತೇವೆ. ಈ ಕೃತಜ್ಞತಾ ಭಾವನೆಯೇ ಜೀವನದಲ್ಲಿ ಶಾಂತಿಯನ್ನು ತರುತ್ತದೆ.​ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ತಲೆಬಾಗುತ್ತೇವೆ. ಇದು ನಮ್ಮ ಮಿತಿಯನ್ನು ಒಪ್ಪಿಕೊಂಡು, ನಮಗಿಂತ ದೊಡ್ಡದಾದ ದೈವಿಕ ಶಕ್ತಿಯ ಮೇಲೆ ಶರಣಾಗತಿಯನ್ನು ತೋರಿಸುತ್ತದೆ. ಭಕ್ತಿಯಿಂದ ಶಿರಬಾಗಿದಾಗ, ದೇವರ ಕೃಪೆ ಮತ್ತು ಆಶೀರ್ವಾದ ನಮಗೆ ಲಭಿಸುತ್ತದೆ.​ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದಲೂ ನಮ್ರತೆ ಅತಿ ಮುಖ್ಯ ಗುಣ. ಜ್ಞಾನ ಹೆಚ್ಚಾದಂತೆ ವ್ಯಕ್ತಿ ನಮ್ರನಾಗುತ್ತಾನೆ. ಅತಿಯಾಗಿ ತಲೆಬಾಗದ ಮರ ಮುರಿದುಬೀಳಬಹುದು, ಆದರೆ ಬಾಗಿದ ಬಿದಿರು ಎಂತಹ ಚಂಡಮಾರುತವನ್ನೂ ತಡೆದುಕೊಳ್ಳುತ್ತದೆ. ನಮ್ರತೆ ನಮ್ಮನ್ನು ಇತರರ ಪ್ರೀತಿಗೆ ಪಾತ್ರರಾಗುವಂತೆ ಮಾಡುತ್ತದೆ.​ಲೇಖನದ ಸಾರಾಂಶ:​ಶಿರಬಾಗುವುದು ದೌರ್ಬಲ್ಯದ ಸಂಕೇತವಲ್ಲ, ಬದಲಾಗಿ ಅದು ಆಂತರಿಕ ಶಕ್ತಿ ಮತ್ತು ಸಂಸ್ಕಾರದ ಪ್ರದರ್ಶನ. ನಾವು ಹಿರಿಯರ ಮುಂದೆ ತಲೆಬಾಗಿದಾಗ, ಅವರು ನೀಡುವ ಆಶೀರ್ವಾದವು ನಮ್ಮನ್ನು ಜೀವನದ ಕಠಿಣ ಹಾದಿಯಲ್ಲಿ ಮುನ್ನಡೆಸುವ ದಾರಿದೀಪವಾಗುತ್ತದೆ.“ನಮಸ್ಕಾರ ಮಾಡುವವನಿಗೆ ನಮ್ರತೆಯ ಸಂಸ್ಕಾರವಿರಲಿ, ಆಶೀರ್ವದಿಸುವವನಿಗೆ ಮಮತೆಯ ಸಂಸ್ಕಾರವಿರಲಿ. ಶಿರಬಾಗಿದಾಗ ಕೈಗಳು ಆಶೀರ್ವದಿಸದಿದ್ದರೆ, ಅಲ್ಲಿ ಸಂಸ್ಕಾರವು ಪೂರ್ಣಗೊಳ್ಳುವುದಿಲ್ಲ.”ನಮ್ರತೆಯಿಂದ ಶಿರಬಾಗಿ, ನಾವೆಲ್ಲರೂ ಆಶೀರ್ವಾದದ ಮಳೆಯಲ್ಲಿ ಮೀಯೋಣ. ಲೇಖನ : ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳಉಡುಪಿ ಜಿಲ್ಲೆ.

“ಶಿರಬಾಗಿದರೆ ಆಶೀರ್ವಾದ” ಕವಿತಾ ಶ್ರೀನಿವಾಸ್ ನಾಯಕ್  Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ ಅವರ ಕವಿತೆ “ಮಳೆಗೆ ನೆಲದ ಮೇಲೆ ಪ್ರೇಮವಿತ್ತೋ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ಮಳೆಗೆ ನೆಲದ ಮೇಲೆ ಪ್ರೇಮವಿತ್ತೋ” ಅಗೋ ಅದಾವ ಮೋಡ ಮೊದಲು ಕಣ್ಣೀರಿಟ್ಟಿತೊ?ಅದಾವ ಗಾಳಿ ಅದನ್ನು ಹೊತ್ತು ತಂದಿತೊ?ಅದಾವ ಎಲೆ ಚಿಗುರು ಮೊದಲು ತೇವಗೊಂಡಿತೊ?ಅದಾವ ಮಣ್ಣು ಅದನ್ನು ತನ್ನದಾಗಿಸಿಕೊಂಡಿತೊ?ಜಾರಿದ ಹನಿಗಳ ಲೆಕ್ಕ ಹಿಡಿದಷ್ಟುಸುಲಭವಲ್ಲಆಕಾಶದ ಮನಸ್ಸಿನ ಆಳ ಅಗಲ ಅರಿಯುವುದು! ತೇಲಿದ್ದು ಸಾಕೆಂದು ಸುರಿದವೊ?ಬರುವ ದಾರಿಯಲ್ಲೇ ಕರಗಿದವೊ?ಎಲೆಯ ತುದಿಯಲ್ಲಿ ನಿಂತು ತೂಗುವಹನಿಗಳ ನಡುಕವನ್ನು ಓದಿದಷ್ಟುಸುಲಭವಲ್ಲಬೀಳದ ಹನಿಯ ಕನಸು ಅರ್ಥಮಾಡಿಕೊಳ್ಳುವುದು! ನೆಲ ಮುಟ್ಟದ ಮಳೆಹನಿಯ ವ್ಯಥೆಮೋಡದೊಳಗೆ ಉಳಿದ ಮಳೆಹನಿಯ ಮಾತುಯಾರ ಕಿವಿಗು ಸಂಪೂರ್ಣ ಕೇಳುವುದಿಲ್ಲ! ಯಾರೋ ಕೊಡೆ ಬಿಚ್ಚಿ ಹಿಡಿದು ನಡೆದರು!ಯಾರೋ ಕೈಚಾಚಿ ನೆನೆಯುತ್ತ ನಿಂತರು!ಯಾರೋ ಮನೆಮಬೆಯ ಕಿಟಕಿಯ ಗಾಜಿನ ಮೇಲೆತಮ್ಮ ಏಕಾಂತ ಬರೆದು ಜಾರಿಹೋದರು!ಮಳೆ ಸದಾ ಏಕಾಂಗಿಮಳೆಯಿಂದ ಒದ್ದೆಯಾದನೆಲದ ಮನ ಮನೆಗಳ ಕಥೆಗಳು ಮಾತ್ರ ಬೇರೆ ಬೇರೆ! ಮಳೆಗೆ ನೆಲದ ಮೇಲೆ ಪ್ರೇಮವಿತ್ತೊ?ಬರುವ ಬಾನ ದಾರಿಯಲ್ಲೇ ಕರಗುವ ಆಸೆಯಿತ್ತೊ?ಭುವಿಯಲ್ಲಿ ನದಿಯಾಗುವ ದಾಹವಿತ್ತೊ?ಸಮುದ್ರ ಸೇರುವ ಪ್ರತಿಜ್ಞೆಯಿತ್ತೊ?ಮಳೆಯ ಉನ್ಮಾದ ಉಮ್ಮೇದುಗಳ ಬಲ್ಲವರಾರು?ಮಳೆಯಲ್ಲಿ ಸುಮ್ಮನೆ ನೆನೆದವರುಮತ್ತೆ ಮತ್ತೆ ಮಳೆಯನ್ನು ಕಾಯುವರು!ಅರ್ಧ ನೆನೆದವರುಆಕಾಶವನ್ನೇ ದೂರುವರು!ಮೋಡಗಳನ್ನೇ ಗದರಿಸುವರು! ಒಂದು ಹನಿನೆತ್ತಿ ಹಣೆ ಮೂಗು ಕೆನ್ನೆಈ ಎದೆಯ ಮೇಲೆ ಬಿದ್ದುನೆನಪಾಗುವುದು ಸಾಮಾನ್ಯವಲ್ಲ! ತೇವಗೊಂಡ ತುಮುಲಒಣಗಿದ ಮಣ್ಣಿಗು ಮರೆಯುವುದಿಲ್ಲ!ಮಳೆ ಬರೆಯುವಮಣ್ಣ ಕಥೆಗಳಿಗೆ ಯಾವತ್ತೂ ಅಂತ್ಯವಿಲ್ಲ!ಕಾಯುತ್ತಿರುವ ಹೃದಯಗಳಿಗುಮಳೆ ಹೊರತು ಸಂಪೂರ್ಣ ತೃಪ್ತಿಯಿಲ್ಲ! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ ಅವರ ಕವಿತೆ “ಮಳೆಗೆ ನೆಲದ ಮೇಲೆ ಪ್ರೇಮವಿತ್ತೋ” Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ದೇಹವೀಣೆಯಿದು ನಿಲ್ಲದೆ ಕಂಪಿಸುತಿದೆ ನೀ ನುಡಿಸದೇಮನ ಮಂದಾರವಿದು ತಾಪದಿ ಮರುಗುತಿದೆ ನೀ ಬರದೇ ನೆನಪಿನಂಗಳದ ತುಂಬ ಕನಸುಗಳ ಬಣ್ಣದ ರಂಗೋಲಿಜೀವತಂತಿಯಿದು ಬಿಗಿದು ಗಟ್ಟಿಗೊಂಡಿದೆ ನೀ ಬಾರಿಸದೇ ದುಃಖ ಉಮ್ಮಳಿಸಿ ಕಣ್ಣೀರ ಹನಿ ಧಾರೆಯಾಗಿ ಸುರಿಯುತಿವೆಸ್ಪರ್ಶಸುಖವಿಲ್ಲದೆ ರಕ್ತ ಹೆಪ್ಪುಗಟ್ಟಿ ಕೊಲ್ಲುತಿದೆ ನೀ ಸೋಕದೇ ತಂಗಾಳಿಯ ಚಾಮರವೂ ಸುಡುತಿದೆ ಕ್ಷಣ ಕ್ಷಣ ಪ್ರತಿಕ್ಷಣವಿರಹವೇದನೆ ಒಂದೇ ಸವನೇ ಬಾಧಿಸುತಿದೆ ನೀ ಸೇರದೇ ಬಾನ ಬಯಲಲ್ಲೆಲ್ಲಾ ಒಲವಿನೋಲೆಯ ಅಕ್ಷರಗಳ ಕಲರವಎದೆಪುಟದಚ್ಚಾದ ಪ್ರೇಮದ ಚಿತ್ರ ಕೊರೆಯುತಿದೆ ನೀ ಇರದೇ ಅಂತರಂಗದಲ್ಲೆಲ್ಲಾ ನಿನ್ನ ಪ್ರೀತಿ ಪರಿಮಳದ ನೀನಾದದ ಸದ್ದುಕನವರಿಕೆಯ ತರಂಗಗಳ ಭೋಗ೯ರೆತ ಕೊಚ್ಚುತಿದೆ ನೀ ತಬ್ಬದೇ ಅನುಳ ಭಾವಬಿಂದಿಗೆಯಲಿ ಹೊಮ್ಮೊ ಬಯಕೆಗಳ ತೊಳಲಾಟಮುತ್ತಿನಾ ಕತ್ತು ಒತ್ತರಿಸಿ ಮೈಮರೆಸಿ ಮರುಗಿಸಿದೆ ನೀ ಕೂಡದೇಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಡಾ.ಲತಾ ಎ. ಆರ್. ಬಾಳೆಹೊನ್ನೂರು ಕವಿತೆ “ಸವಿಗಾನ”

ಕಾವ್ಯಸಂಗಾತಿ ಡಾ.ಲತಾ ಎ. ಆರ್. ಬಾಳೆಹೊನ್ನೂರು “ಸವಿಗಾನ” ಹೃದಯದಲಿ ವೀಣೆಯ ತಂತಿ ಮೀಟಿದೆಸುಖ ಸ್ವಪ್ನದ ಸವಿಗಾನ ನುಡಿಸಿದೆಮಧುರ ಮಮತೆಯ ಭಾವ ಬಿಂಬಿಸಿದೆಒಡಲಿನೊಳಗೆ  ಬಿಸಿ ಅನುಭವ ಮೊಳಗಿಸಿದೆ ನೀ ನೀಡಿದ ಪ್ರೀತಿ ಕಾಣಿಕೆ ಮರೆಯಲಾರೆಎಂದೆಂದೂ ಜೊತೆಯ ಪಾತ್ರ ತೊರೆಯಲಾರೆಭರವಸೆಯ ಜೊತೆಗಾರ ಬಾಳಲಿ ನೀನಾಸರೆನೆನಪಿಡುವೆ ಸದಾಕಾಲ ಮರೆಯದೆ ಮನಸಾರೆ ನಂಬಿಕೆಯ ನಡೆಯಲಿ ಸದಾ ನನ್ನೊಂದಿಗಿರುಬದುಕಲಿ ಬದುಕುವ ಭರವಸೆ ನೀನಾಗಿರುಯಾವ ಜನ್ಮದ ಋಣವೋ ತಿಳಿದಿರುಕೈ ಹಿಡಿದು ಬಾಳಲಿ ಮುನ್ನಡೆಸುತ್ತಿರು ಮುಗಿಯುವ ಪಯಣದಲಿ ಕಾವ್ಯವಾಗಿರುನಾ ಬರೆವ ಕವಿತೆಯಲಿ ಹಸಿರಾಗಿರುನೆಮ್ಮದಿಯ ಬದುಕಿಗೆ ನಿರಾಳ ಉಸಿರಾಗಿರುನಾ ಕಂಡ ಸುಂದರ ಕನಸುಗಳಲಿ ನನಸಾಗಿರು. ಡಾ.ಲತಾ ಎ. ಆರ್. ಬಾಳೆಹೊನ್ನೂರು

ಡಾ.ಲತಾ ಎ. ಆರ್. ಬಾಳೆಹೊನ್ನೂರು ಕವಿತೆ “ಸವಿಗಾನ” Read Post »

ಕಾವ್ಯಯಾನ

“ಭೂದೇವಿಯಮದುವೆ” ಶ್ರೀದೇವಿ ಗುಮ್ಮಗೋಳ

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಭೂದೇವಿಯಮದುವೆ” (ಜಾನಪದ ಶೈಲಿಯ‌ಲ್ಲಿ‌ ಬರೆದ ಗೀತೆ)ಮಳೆರಾಯ ಮದುಮಗ ಬಂದಾನಭೂದೇವಿಗ ಮದುವ್ಯಾಗಕ ನಿಂದಾನ| ಮೋಡಗಳ ದಿಬ್ಬಣ ಹೊತ್ತ ಬಂದಾನಸುರಗಿನೀರ ಬರಬರ ಸುರಸ್ಯಾನ| ಭೂದೇವಿಗೆ ಮನಸೋತು ಕರಿಗ್ಯಾನಮುತ್ತು ಹನಿಗಳ ಹೂಹಾರ ಹಿಡಿದಾನ| ರೈತ ಬೀಗನ್ನ ಹಂದರಕ ಕರೆದಾನಜೊಡೆತ್ತಿನ್ಯಾಗ ಸಾರೂಟ ಹೊರಟಾಣ| ಜೋಳಗ್ಯಾಗ ಮುತ್ತಿನ ಜೋಳ ಹಿಡದಾನಬಸವಣ್ಣ ನೇಗಿಲ ಹೊತ್ತಾನ| ಬಸವಣ್ಣ ಬಿತ್ತುತ ನೇಯ್ಗಿ ನೇಯ್ದಾನಭೂದೇವಿಯ ಹಸಿರು ಸೀರೆಯ ಉಟ್ಟಾಳ| ಹಸಿರು ಉಸುರಾಗಿ ಫಲವಾಗಿ ನಿಂತಾಳದವಸದ ಉಡಿ ತಂದೇನಿ ಅಂದಾಳ| ಹಿಗ್ಗಿ ಹಿರಿದು ಊರ ಮಂದಿನನಮ್ಮಣ್ಣ ಸುಗ್ಗಿ ಊಟಕ್ಕ ಕರದಾನ| ಉಂಡ ಮಂದಿ ಬಾಯಿತುಂಬ ಅಣ್ಣನ ಹರಸ್ಯಾರಭೂತಾಯವ್ವಗ ಕೈ ಎತ್ತಿ ಮುಗದಾರ|  ಶ್ರೀದೇವಿ ಗುಮ್ಮಗೋಳ

“ಭೂದೇವಿಯಮದುವೆ” ಶ್ರೀದೇವಿ ಗುಮ್ಮಗೋಳ Read Post »

ಕಾವ್ಯಯಾನ, ಗಝಲ್

ಎ.ಹೇಮಗಂಗಾ ಅವರ ಗಜಲ್

ಕಾವ್ಯ ಸಂಗಾತಿ ಎ.ಹೇಮಗಂಗಾ ಅವರ ಗಜಲ್ ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋಕೊಂಚವೂ ದಯೆಯಿರದೇ ತುಳಿದು ಹೋದೆ ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !ತೋರಿದ ಅಸೀಮ ಒಲವನು ಜರೆದು ಹೋದೆ ನನಸಾಗದ ಕನಸುಗಳ ನೀ ಕಾಣದಿರು *ಹೇಮ*ನಿನಗಾಗಿ ಮಿಡಿದ ಹೃದಯವ ಮುರಿದು ಹೋದೆ ಎ. ಹೇಮಗಂಗಾ

ಎ.ಹೇಮಗಂಗಾ ಅವರ ಗಜಲ್ Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಅಳು ಬಂದರೆ ಅತ್ತು ಬಿಡು” ಅಳು ಮನವೆ ತಡೆದುಕೊಳ್ಳಬೇಡಈ ಕಣ್ಣೀರು ದೌರ್ಬಲ್ಯ ಅಲ್ಲವೊಅದಾರ ಮೇಲಿನ ಪ್ರೀತಿಯ ಸಾಕ್ಷಿಗೊಮುನಿಸಿಗೊ ನಿನ್ನ ಮನಸ ಹಗುರಾಗಲುಅತ್ತೆ ಬಿಡು ಅಳು ಬಂದರೆ. ಗಂಟಲು ಕಟ್ಟಿ ಮಾತು ಬಾರದಾದಾಗಕಣ್ಣುಗಳೇ ಮಾತಾಡಲಿ ನಿನ್ನೊಡನೆಒಂದೊಂದು ಹನಿಯೂ ಹೇಳಿವೆ“ನೆನಪುಗಳೆ ನೆನಪಾಗ್ತೀರಿ” ಅಂತ.   ಜನ ಏನಂದಾರೆಂದು ನೋಡಬೇಡಗಂಡಸರು ಅಳಬಾರದು ಅನ್ನೋದೆಲ್ಲ ಸುಳ್ಳುಅವಳು ಹೋದ ನೋವಿಗೆ ಅಳದಿದ್ರೆ  ಆ ಎದೆ ಕಲ್ಲು ಆಗಿರಬೇಕು ಎನ್ನುವರಲ್ಲ. ಅಳು, ಆದ್ರೆ ಆ ಹನಿಗಳಲ್ಲಿ ಮುಳುಗಬೇಡಅದೇ ಹನಿಗಳಿಂದಲೆ ಎದ್ದು ನಿಲ್ಲುನಿನ್ನ ಕಣ್ಣೀರು ಒರೆಸೋ ಕೈ ಇಲ್ಲಎಂದು ಕೊರಗಬೇಡ ಆಕಾಶದಿಂದಅವಳು ನೋಡುವಳಂತೆ. ಅಳು ನೀನು ಮನಸಾರೆ ಅಳು ಮನವೆ  ಅತ್ತ ಮೇಲೆ ಮನಸ್ಸು ಹಗುರ ಆಗವುದಂತೆಮತ್ತೆ ಬದುಕೋಕೆ ಶಕ್ತಿ ಬರುವುದಂತೆಅವಳಿಗಿಷ್ಟ ಆಗೋ ಹಾಗೆ ನಗೋಕೆದಾರಿ ಸಿಗುವುದಂತೆ.   ಅತ್ತೆಯಾ ಅತ್ತು ಬಿಡು ಅಳು ಬಂದರೆಅತ್ತು ಹಗುರ ಆಗು ನಾನಿದ್ದೀನಿ ನಿನ್ನ ಜೊತೆಗೆ. ಇಂತಿ ನಿನ್ನ  ಮನ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು” Read Post »

You cannot copy content of this page

Scroll to Top