ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು”
ಕಾವ್ಯ ಸಂಗಾತಿ ನಿರಂಜನ ನಾಯಕ “ಅನುಭವಿ ಮೇಷ್ಟ್ರು” ಒಮ್ಮೆ ಕಣ್ಣೀರಿಟ್ಟಿದ್ದರುಆ ಒಳ್ಳೆಯ ಮೇಷ್ಟ್ರು—ಪಾಠಕ್ಕೆ ತಡೆಯೊಡ್ಡಿ,ಸದಾ ರಂಪ ಮಾಡುತ್ತಿದ್ದಮಕ್ಕಳ ರಗಳೆಗೆ ಬೇಸತ್ತು… ದಿನಗಳು ಉರುಳಿದವು,ಮಕ್ಕಳ ಪಡೆ ಬದಲಾಯಿತು;ಬಂದ ಹೊಸಬರಂತೂಹಳೆಯವರಿಗಿಂತ ಒಂದು ಕೈ ತಂಟೆಕೋರರೇ!ಆದರೂ ಈ ಬಾರಿಮೇಷ್ಟ್ರು ನಗುತ್ತಲೇ ಪಾಠ ಮಾಡಿದರು,ತಮ್ಮ ಮುಂದಿರುವುದುಮಹಾ ಪಟಿಂಗರೆಂಬಅರಿವೇ ಇಲ್ಲದೇ… ಯಾವ ಕಣ್ಣೀರು ಅಂದು ಅವರನ್ನು ಕುಗ್ಗಿಸಿತ್ತೋ,ಅದೇ ಇಂದು ಅವರ ಆತ್ಮಬಲವಾಗಿತ್ತು!ಅಂದು ಬೆಟ್ಟದಂತಿದ್ದ ಅಡಚಣೆ,ಇಂದು ಅವರ ಬೋಧನೆಯ ಸಹಜ ರಾಗವಾಗಿತ್ತು. ಗಲಿಬಿಲಿಯ ಪ್ರತಿ ತರಗತಿಯೂ,ಸಾಟಿಯಿಲ್ಲದ ಪ್ರತಿ ತುಂಟ ಮಗುವೂ—ಅವರ ಭಾವಗಳ ಹದಗೊಳಿಸಿದವು,ಕಾಲದ ಜೊತೆ ಬೆಳೆಸಿದವು.ಅವರು ಒಳಗೂ ಬೆಳೆದರು, ಹೊರಗೂ ಮಾಗಿದರು—ಏಕೆಂದರೆ,ಅವರು ಕಲಿಸಿದ ಪ್ರತಿ ಮಗುವೂಅವರಿಗೊಂದು ಹೊಸ ಪಾಠ ಕಲಿಸಿತ್ತು;‘ಬೋಧಿಸುವುದೆಂದರೆ ತಿದ್ದುವುದಲ್ಲ, ತಾಳ್ಮೆಯಿಂದ ಕಲಿಯುವುದು’ ಎಂದು. ನಿರಂಜನ ನಾಯಕ
ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು” Read Post »









