ಅನ್ನಪೂರ್ಣ ಹಿರೇಮಠ ಲೇಖನ-
ವಿಶೇಷ ಲೇಖನ
ಅನ್ನಪೂರ್ಣ ಹಿರೇಮಠ
ಇಂದಿನ ವ್ಯವಸ್ಥೆಗೊಂದು ಗುದ್ದು
ಅನ್ನಪೂರ್ಣ ಹಿರೇಮಠ ಲೇಖನ- Read Post »
ವಿಶೇಷ ಲೇಖನ
ಅನ್ನಪೂರ್ಣ ಹಿರೇಮಠ
ಇಂದಿನ ವ್ಯವಸ್ಥೆಗೊಂದು ಗುದ್ದು
ಅನ್ನಪೂರ್ಣ ಹಿರೇಮಠ ಲೇಖನ- Read Post »
ಕಾಣಬಹುದೆ ನಿರಾಕಾರ?
ಕಾಣಬಹುದೆ ಮಹಾಘನವು?
ಕಂಡು ಭ್ರಮೆಗೊಂಡು ಹೋದರೆಲ್ಲರು
ಕೂಡಲಚೆನ್ನಸಂಗನ ಅನುಭಾವವ
ಲಿಂಗೈಕ್ಯನೇ ಬಲ್ಲ
ಚೆನ್ನಬಸವಣ್ಣ
ಚೆನ್ನ ಬಸವಣ್ಣ ಶರಣ ಸಂಕುಲದ ಅತ್ಯಂತ ಸಣ್ಣ ವಯಸ್ಸಿನ ಮಹಾಜ್ಞಾನಿ .
ಶರಣರ ವಚನಗಳಲ್ಲಿ ಷಟಸ್ಥಲ
ಸಿದ್ಧಾಂತ ಗಟ್ಟಿಗೊಳಿಸಿದ ವೈಚಾರಿಕ ಪುರುಷ .
ಕಾಣಬಹುದೆ ನಿರಾಕಾರ?
————————————–
ಶರಣರು ವಚನಕಾರರು ಶೂನ್ಯ ಬಯಲು ನಿರಾಕಾರ ನಿರ್ಗುಣ ತತ್ವವನ್ನು ಸಾದರ ಪಡಿಸಿದವರು. ನಿರಾಕಾರವನ್ನು ಅನುಭವಿಸಿ ಅನುಸಂಧಾನ ಮಾಡ ಬಹುದಲ್ಲದೆ ಅದನ್ನು ಯಾರಾದರೂ ಕಾನ ಬಲ್ಲರೆ ಎಂಬುದು ಚೆನ್ನಬಸವಣ್ಣನ ಪ್ರಶ್ನೆ .
ನಿರಾಕಾರ ನಿರುಪಾದಿತ ಭಾವ ನಿರ್ಮಲ ಮನಸ್ಸಿಗೆ ಗೋಚರವಾಗುವ ಸೃಷ್ಟಿಯ ಮಹಾ ಪ್ರಜ್ಞೆ ಹೊರತು ಅದನ್ನು ಯಾರೂ ಕಾಣಲಾಗುವದಿಲ್ಲ.
ಕಾಣಬಹುದೆ ಮಹಾಘನವು?
————————————-
ಶರೀರ ಆತ್ಮ ಪ್ರಾಣ ಸಂಗಮದ
ಮಹಾ ಚೇತನ ವ್ಯಕ್ತಿಯ ಘನತೆ ಅಸ್ಮಿತೆ.
ಸೃಷ್ಟಿಯ ಸತ್ಯ ಶೋಧ ಮಹಾ ಘನದ ಹುಡುಕಾಟ ಸಾಧಕರ ಆದ್ಯ ಉದ್ದೇಶ. ಜೀವ ಸೃಷ್ಟಿಯ ವ್ಯಕ್ತಿ ಸಮಷ್ಟಿ ಇವುಗಳ ಬಂಧನದ ಮಹಾಘನವನ್ನು ಯಾರಾದರೂ ಕಂಡರೆ ಎಂಬುದು ಚೆನ್ನಬಸವಣ್ಣನ ಪ್ರಶ್ನೆ . ನಿರಾಕರವನ್ನು ಮತ್ತು ಮಹಾ ಘನವನ್ನು ಕಾಣಲಾಗದು ಕೇವಲ ಅನುಭವಿಸಬಹುದು.
ಕಂಡು ಭ್ರಮೆಗೊಂಡು ಹೋದರೆಲ್ಲರು
———————————-
ನಿರಾಕಾರ ಮತ್ತು ಮಹಾ ಘಣವನ್ನು ಕಂಡೆನು ಎಂಬುದು ಭ್ರಮೆ ಭ್ರಾಂತಿ ಮಾತ್ರ.
ಅನೇಕ ಸಾಧಕರು ತಪಸ್ವಿಗಳು ಸಾಧುಗಳು ಇಂತಹ ಮಹಾ ಘನವ ನಿರಾಕರವನ್ನ ಕಂಡೆ ಎಂದು ಹೇಳುವುದು ಒಂದು ವ್ಯರ್ಥ ಪ್ರಯತ್ನ .
ಇದನ್ನು ಅಲ್ಲಮರು ಕೂಡಾ ಕಾಣಬಾರದ ಲಿಂಗವೆಂದಿದ್ದಾರೆ.
ಲಿಂಗ ಸಮಷ್ಟಿಯ ಸಂಕೇತ.
ಲಿಂಗವು ನಿರಾಕಾರದ ಚಿತ್ಕಳೆಯ ಕುರುಹು. ಹೀಗಾಗಿ ಜೀವ ಜಗತ್ತಿನ ಅನೇಕ ಸಂಗತಿಗಳು ಗೋಚರ ಗೊಂಡರೂ ಕಾಣಲಾಗದು.
ಎಂದಿದ್ದಾರೆ ಚೆನ್ನ ಬಸವಣ್ಣ.
ಕೂಡಲಚೆನ್ನಸಂಗನ ಅನುಭಾವವ
ಲಿಂಗೈಕ್ಯನೇ ಬಲ್ಲ
—————————————-
ಕೂಡಲ ಚೆನ್ನಸಂಗನ ಅನುಭಾವವ ಲಿಂಗೈಕ್ಯನೇ ಬಲ್ಲ
ಇದು ಚೆನ್ನ ಬಸವಣ್ಣನವರ ಮತ್ತು ಸಮಗ್ರ ಶರಣರ ಒಮ್ಮತದ ಅಭಿಪ್ರಾಯ.
ಪರಮಾತ್ಮ ದೇವರು ಎಂಬ ನಂಬಿಕೆ ಇಟ್ಟ ಜಗತ್ತಿನ ಎಲ್ಲಾ ಧರ್ಮಗಳು .ದೈವ ಎಂಬ ಭಾವ ನಂಬಿಕೆಯನ್ನು ದೇಹ ಬಿಟ್ಟು ಹೊರಗೆ ಕಾಣಲು ಯತ್ನಿಸುತ್ತಾರೆ.
ಆದರೆ ಶರಣರು ತನ್ನ ಕಾಯದೊಳಗೆ ದೇವನಿರುವನು
ಇನ್ನೂ ಮುಂದೆ ಹೋಗಿ ಅಲ್ಲಮರು ನಾ ದೇವನಾಗಬಹುದಲ್ಲದೆ ನೀ ದೇವನಾಗಬಹುದೆ ಎಂದಿದ್ದಾರೆ.ಸಮಚಿತ್ತ ಸಮ ಭಾವ ಸಮಕಳೇ ಹೊಂದಿದ ನಿಜೈಕ್ಯನು ಮಾತ್ರ ಲಿಂಗದ ಅನುಭಾವವನ್ನು ತಿಳಿಯಬಲ್ಲ.
ಕೂಡಲ ಚೆನ್ನ ಸಂಗನ ಅನುಭಾವ ಎಂದರೆ ಅದು ಸೃಷ್ಟಿಯ ಮಹಾ ಪ್ರಜ್ಞೆ.ಸತ್ಯ ಮಹಾ ಘನ ಜೀವನದ ಅನನ್ಯತೆ ಮತ್ತು ಅಸ್ಮಿತೆ. ಇಂತಹ ಅನುಭವವನ್ನು ಲಿಂಗೈಕ್ಯ ಬಲ್ಲ. ಆರನ್ನು ಅಳಿದು ಅರಿಷಡ್ ವರ್ಗಗಳ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಮುಂತಾದ ವಿಷಯಗಳನ್ನು ಅಲ್ಲ ಗಳೆದು ಮೂರನ್ನು ಶರೀರ ಪ್ರಾಣ ಮತ್ತು ಆತ್ಮ ಭಾವವನ್ನು ಮೀರಿದ ಶರಣರು ಅರೂಡರು ನಿಜ ಲಿಂಗೈಕ್ಯರು ಮಾತ್ರ ಇಂತಹ ಅನುಭವವನ್ನು ಹೊಂದುವರು. ಇದು ಶಿಶು ಕಂಡ ಕನಸು ನೆಲದ ಮರೆಯ ನಿಧಾನ ಉರಿ ಉಂಡ ಕರ್ಪೂರದಂತೆ ಎಂಬ ಅನೇಕ ಪ್ರತಿಮೆಗಳ ಮೂಲಕ ಶರಣರು ಜೀವನದ ಅನನ್ಯತೆ ಸಾರ್ಥಕತೆಯನ್ನು ವ್ಯಕ್ತಗೊಳಿಸಿದ್ದಾರೆ
—————————————-
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಶಶಿಕಾಂತ ಪಟ್ಟಣ ರಾಮದುರ್ಗ-ಲಿಂಗೈಕ್ಯನೇ ಬಲ್ಲ Read Post »
ಕಾವ್ಯ ಸಂಗಾತಿ
ಶ್ರೀನಿವಾಸ.ಎನ್.ದೇಸಾಯಿ,
ಭರವಸೆಯೇ ಸಾಧನೆಯ ಬೆಳಕು…!
ಭರವಸೆಯೇ ಸಾಧನೆಯ ಬೆಳಕು…!ಶ್ರೀನಿವಾಸ.ಎನ್.ದೇಸಾಯಿ ಲೇಖನ Read Post »
ಸುವಿಧಾ ಹಡಿನಬಾಳ
ಬದಲಾದ ಕಾಲಘಟ್ಟದಲ್ಲಿ
ವಿದ್ಯಾರ್ಥಿ – ಶಿಕ್ಷಕರ ಸಂಬಂಧ
ಮತ್ತು ಪಾಲಕರ ಮನಸ್ಥಿತಿ
ಬದಲಾದ ಕಾಲಘಟ್ಟದಲ್ಲಿ ವಿದ್ಯಾರ್ಥಿ – ಶಿಕ್ಷಕರ ಸಂಬಂಧ ಮತ್ತು ಪಾಲಕರ ಮನಸ್ಥಿತಿ – ಲೇಖನ ಸುಧಾಹಡಿನಬಾಳ Read Post »
ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ
ಜಯಶ್ರೀ.ಜೆ. ಅಬ್ಬಿಗೇರಿ.ಲಹರಿ-ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ Read Post »
ವಿಶೇಷ ಬರಹ
ಔಷಧಗಳ ಆಗರ…….
ಮುರುಗಲು ಹಣ್ಣು/ ಕೋಕಂ/ಪುನರ್ಪುಳಿ
ಅಕ್ಷತಾ ಜಗದೀಶ.
ಔಷಧಗಳ ಆಗರ…….ಮುರುಗಲು ಹಣ್ಣು/ ಕೋಕಂ/ಪುನರ್ಪುಳಿ Read Post »
ವಿಶೇಷ ಬರಹ
ಸುರೇಶ್ ತಂಗೋಡೆ
ಪ್ರೀತಿಯ ಮಗನಿಗೊಂದು ಪತ್ರ
ಸುರೇಶ್ ತಂಗೋಡೆ-ಪ್ರೀತಿಯಮಗನಿಗೊಂದು ಪತ್ರ Read Post »
ವಿಶೇಷಲೇಖನ
ಸುವಿಧಾ ಹಡಿನಬಾಳ
ಹೆತ್ತವರ ನಿದ್ದೆಗೆಡಿಸುವ ಯುವಪಡೆ
ಸುವಿಧಾ ಹಡಿನಬಾಳ ಲೇಖನ-ಹೆತ್ತವರ ನಿದ್ದೆಗೆಡಿಸುವ ಯುವಪಡೆ Read Post »
ವಿಶೇಷ ಲೇಖನ
ಅಂಚೆ ಇಲಾಖೆಯ ಅನುಕೂಲಗಳು
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ -ಅಂಚೆ ಇಲಾಖೆಯ ಅನುಕೂಲಗಳು Read Post »
ಮಕ್ಕಳ ವಿಭಾಗ
ಲಲಿತಾ ಕ್ಯಾಸನ್ನವರ
ಕಣ್ಮನಿ ನನ್ನ ಕಂದ
ಲಲಿತಾ ಕ್ಯಾಸನ್ನವರ ಶಿಶುಗೀತೆ-ಕಣ್ಮಣಿ ನನ್ನ ಕಂದ Read Post »
You cannot copy content of this page