ಕಾವ್ಯಯಾನ
ಅಪ್ಪ ವೀಣಾ ನಿರಂಜನ್ ಯಾಕೋ ನಾನುಇವತ್ತಿಗೂ ಕೂಡಬೆಳೆದು ದೊಡ್ಡವಳಾಗಲೇ ಇಲ್ಲ! ಅಪ್ಪ ಮಾತ್ರಎಂದಿನಂತೆ ನನ್ನೊಳಗೆಬೆಳೆಯುತ್ತಲೇ ಇದ್ದಾನೆಅಪ್ಪನ ಅಸ್ಪಷ್ಟ ನೆನಪುಕಾಡಿದಾಗಲೆಲ್ಲನನ್ನವನೆದುರಿಗೆ ಮಗುವಾಗಿಬಿಡುವ ನಾನುಸುಖಾಸುಮ್ಮನೆರಚ್ಚೆ ಹಿಡಿಯುತ್ತೇನೆ ಹುಸಿ ರಂಪಎರಡು ಹನಿ ಕಣ್ಣೀರುಬಾಲ್ಯದ ಸವಾರಿಮಾಡಿಬಿಡುವ ಮನಸ್ಸುಅಪ್ಪನ ಕಾಯಿಲೆಅಮ್ಮನ ಗೋಳುಸರೀಕರ ತಾತ್ಸಾರನಮ್ಮಗಳ ಅಕಾಲ ಗಾಂಭೀರ್ಯತೆಎಷ್ಟು ನೀರು ಹಿಡಿದೀತುಪುಟ್ಟ ಬೊಗಸೆ ! ಪಾಳುಬಿದ್ದ ಅಪ್ಪನ ಮಹಾಮನೆಗೋಡೆ ಮಣ್ಣ ತಾರಸಿಯಮೇಲೆಲ್ಲ ಹುಲ್ಲು ಕಳೆಸಸ್ಯಗಳದೇ ಕಾರುಬಾರುಬಿರಿದು ಚೂರಾದ ಕಂಬಗಳುಎಷ್ಟು ಕತೆಗಳ ಹೇಳಿದರೂಮುಗಿಯದು ಇತಿಹಾಸ. ಮುದಿ ಹೆಂಗಸು ಹಜರತ್ ಬಿಇಂದಿಗೂ ಸ್ಮರಿಸುತ್ತಾಳೆಅಪ್ಪ ಕೊಡಿಸಿದ ಸರ್ಕಾರಿ ಮನೆಮತ್ತು ವಿಧವಾ ಪಿಂಚಣಿಯನ್ನು ಬಿಕ್ಕುತ್ತವೆ ರಾತ್ರಿಗಳುಅಪ್ಪನ ಅಪೂರ್ಣ ಕನಸುಗಳುಗೋರಿಯೊಳಗೆಅರೆ ಬಿರಿದ ಕಣ್ಣುಗಳಲ್ಲಿಏನನ್ನೋ ಧೇನಿಸುತ್ತ…ಬೆಚ್ಚಿ ಬೀಳುವ ನಾನುನನ್ನವನ ಮುಸುಕಿನೊಳಗಿನಕೈಯನ್ನು ಅದುಮಿಗಟ್ಟಿಯಾಗಿ ಹಿಡಿದು ಕಣ್ಣೀರಾಗುತ್ತೇನೆಅಪ್ಪನ ಬುದ್ಧಅಪ್ಪನ ಅಲ್ಲಮಎಲ್ಲ ಒಂದೇ ಆಗಿಜಂಗಮ ಸ್ವರೂಪಿ ಆತ್ಮಸಂತೈಸುತ್ತದೆಅಪ್ಪ ಎಂದರೆಅಪೂರ್ಣ ಕನಸುಅರ್ಧ ಬರೆದಿಟ್ಟ ಕವಿತೆಚದುರಿದ ಹಲವು ಚಿತ್ರಗಳು… ********









