ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಶಾಲಾ ಆರಾಧ್ಯ ಕಾವ್ಯಗುಚ್ಛ

ವಿಶಾಲಾ ಆರಾಧ್ಯ ಕಾವ್ಯಗುಚ್ಛ ಬುದ್ಧನೊಂದಿಗೊಂದು ದಿನ ನಿನ್ನಂತಾಗಲೂನಾನೇನು ಮಾಡಬೇಕು ?ಕತ್ತಲ ಬದುಕಿನಿಂದೊಡನೆನಡೆದುಬಿಡಲೇ?ಓ..ಓಹ್ಎಂದಾದರೂ ಉಂಟೆ ಬುದ್ಧ ?ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆಕಥೆ ಏನಾಗಿರುತ್ತಿತ್ತು..??ನೀನೇನೋ ಸಿದ್ಧಾರ್ಥನಿಂದಬುದ್ಧನಾಗಿ ಹೋದೆಯಶೋಧರೆಗೆಂತೆಂಥಹ ಪದವಿಬಿರುದು ವಿಜೃಂಭಿಸುತ್ತಿದ್ದವುಬಲ್ಲೆ ಏನು?ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನಸಾವಿತ್ರಿಯ ಸೋಲಿಸೆ ನಿಂದಸಿದ ಯಮಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇಅಂಬರವ ಹರಿದ ಬಣ!ಯಶೋಧರೆಯ ಬೇರಾವ ಅಗ್ನಿನುಡಿಗೀಡುಮಾಡುತ್ತಿದ್ದರೋ..ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!ಪುತ್ರನ ನೆನಪೇನಾದರೂ ಸುಳಿಯಿತೇ?ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನುಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!! ಎಲ್ಲೆ ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆಮಾಡಿದ ಸೈಟು ಬೇಡಿದ ಕಾರುಮಾಡಿದ ಕಾರುಬಾರೆಲ್ಲಾಅವನ ಕೃಪೆಯೇ !ಗೋಡೆಯಲಿ ಇದ್ದಾಗಅಮ್ಮ ಅಪ್ಪನೇ ಗುರುವೇ ಎಂದುವಾರ ಮಾಡಿ ಪಕ್ಷ ಮಾಡಿ ಬೇಡಿ ಕಾಡಿ ಪಡೆದವರೇ .!ಕಾಯಿ ಹೊಡೆದು ಹಣ್ಣನಿತ್ತುದೀಪ ಧೂಪ ಹಚ್ಚಿ ಇಟ್ಟು ವಸ್ತ್ರ ದಕ್ಷಿಣೆಗಳನಿಟ್ಟುಕೈ ಜೋಡಿಸಿ ಬೇಡಿದವರೇ..!ಅವನಿಗಾಗಿ ಜಾತ್ರೆ ಮಾಡಿಅವನ ಹೆಸರಲೇ ಯಾತ್ರೆ ಮಾಡಿದಂಡಿ ದಂಡಿ ದಂಡವಿಟ್ಟುಹರಕೆ ಹೊತ್ತು ಉರುಳಿ ಬಂದು ದೀರ್ಘ ದಂಡ ಹಾಕಿದವರೇ ..!ಅಂಬರಕ್ಕೇ ಅಂಬರವನಿತ್ತುದಯಾಮಯಿಗೇ ದಯೆ ತೋರಿನೆಲೆಯಾದವನಿಗೇ ಗುಡಿಯ ಕಟ್ಟಿಮನೋಹರನಿಗೇ ಉಪಚಾರ ಮಾಡಿ ಕಡೆಗೊಂದು ದಿನಮಾಸಿದನೆಂದೋ ಪಟ ಪಸುಗೆಯಾಯಿತೆಂದೋಮನೆಯಾಚೆ ತಳ್ಳಿ ಜಗನ್ನಾಥನನ್ನೇಅನಾಥಗೊಳಿಸಿದ ಮನುಜ ಭಕ್ತಿಗೇನೆಂಬೆ? ಕುದಿ ಕುದಿಯುವ ಹೂವಿನ ಹೃದಯಗಳಲಿನಗುವಿನ ಆವಿಯ ಚಿತ್ರಣ ತೋರಿಕೆಅಂತರಂಗದ ಕತ್ತಲಾಮಿಷ ಕೋಣೆಗೆಬಹಿರಂಗದಿ ಕಾಣುವ ಬೆಳಕಿನ ಜವನಿಕೆ ಹೂವಿನ ಹುಡುಗನು ಕಟ್ಟುವ ನೂಲಲೇಕೊರಳುಸಿರಿನ ಇರಿತದ ಮತ್ಸರವಿಹುದುಕಸಾಯಿಕಾನೆಯ ಕಟುಕನ ಕಣ್ಣಲೂಕರುಣೆಯ ಕರುಳಿನ ಕರೆಯಿರಬಹುದು ಕಣ್ಣಿಗ್ಹಬ್ಬವಾಗೋ ಅಂದದ ಕಡಲೊಳುಜೀವ ತೆಗೆಯುವ ಸುಂದರ ಜಲಚರಕಸವನೇ ನುಂಗಿದ ಕೆಸರಿನ ಹೊಂಡದಿಪೂಜೆಗೆ ಒದಗುವ ಕಮಲದ ಹಂದರ ಸುಂದರ ಗೋಕುಲ ವೃಂದಾವನದಿ ಗೂಡೊಳಗೊಂದು ವ್ಯಾಘ್ರ ನುಗ್ಗಿದೆಅಂದದೊಂದಿಗೆ ಚಂದದ ಮನದಿಮನದೊಳಗೆ ವಿಷವನೇ ಬಸಿದಿದೆ————- *********************

ವಿಶಾಲಾ ಆರಾಧ್ಯ ಕಾವ್ಯಗುಚ್ಛ Read Post »

ಕಾವ್ಯಯಾನ

ಕವಿತೆಯೆಂದರೆ

ಕವಿತೆ ಪ್ರೇಮಶೇಖರ ಕವಿತೆಯೆಂದರೆ ಏನು?ಏನಲ್ಲ? ಕವಿತೆಯೆಂದರೆ ಕತ್ತಲೆಬೆಳಕಿನಾಟದ ಜೀವನರಂಗಮಂಚ. ಕವಿತೆಯೆಂದರೆ ಸಮುದ್ರತೀರದ ಸತ್ತ ಮೀನುಅರಳಿಸುವ ಮಲ್ಲಿಗೆಸುವಾಸನೆ, ಕವಿತೆಯೆಂದರೆ ಹೆಣ್ಣುನಾಗರಇಟ್ಟ ನೂರೊಂದು ಮೊಟ್ಟೆಗಳೊಡೆದು ಬಂದನವಿಲುಗರಿಗಳು. ಕವಿತೆಯೆಂದರೆ ಪ್ರೇಯಸಿಕೊಟ್ಟ ಮುತ್ತುಒಡೆದುಹೋಗಿಧಾರಾವಾಹಿಯಾದ ನಿರೀಕ್ಷೆ. ಕವಿತೆಯೆಂದರೆ ಬೀಸಣಿಗೆಯ ಬಣ್ಣದ ರೆಕ್ಕೆಯ ಗಿಣಿಮರಿಗೆ ಮಾತು ಕಲಿಸಹೊರಟಮಗು. ಕವಿತೆಯೆಂದರೆ ನಾಳೆಹಾರಿ ಹೋಗುತ್ತದೆಎಂದು ಗೊತ್ತಿದ್ದರೂ ಇಂದುಗುಟುಕು ನೀಡುವತಾಯಿಹಕ್ಕಿ. ಕವಿತೆಯೆಂದರೆ ಅಕ್ಷತಯೋನಿಒಂಬತ್ತು ಹೆತ್ತು ಮೂಲೆಯಲ್ಲಿಕೂತ ಅಡುಗೂಲಜ್ಜಿಕತೆ. ಕವಿತೆಯೆಂದರೆ ತಾಯಿಹುಲ್ಲೆಯನು ಕೊಂದುತಿಂದುಎಳೆಹುಲ್ಲೆಗೆ ತಾಯಿಯಾಗಿ ಹಾಲೂಡಿಸಿದ ಹೆಣ್ಣುಹುಲಿ. ಕವಿತೆಯೆಂದರೆಕೊನೆಗೂ ಏನುಂಟು?ಏನಿಲ್ಲ? ಅಹ್ ಕವಿತೆಯೇ ಅಂತಿಮವಾಗಿ ನೀನೇ ಎಲ್ಲ,ನಾನೆಲ್ಲೂ ಇಲ್ಲ. **********************

ಕವಿತೆಯೆಂದರೆ Read Post »

ಕಾವ್ಯಯಾನ

ಚೈತ್ರಾ ಕಾವ್ಯಗುಚ್ಛ

ಚೈತ್ರಾ ಶಿವಯೋಗಿಮಠ ಕಾವ್ಯಗುಚ್ಛ ಕೊರೋನಾ ಖೈದಿ ದಿನ ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲಉದಯಾಸ್ತಮಾನಗಳ ನಡುವೆಭೂಮ್ಯಾಕಾಶದ ಅಂತರ.ಗಡಿಯಾರದ ಮುಳ್ಳುಗಳುಅಪೌಷ್ಟಿಕತೆಯಿಂದ ನರಳುತ್ತಿವೆಚಲನೆ ಅದೆಷ್ಟು ಕ್ಷೀಣವೆಂದರೆಒಂದು ಹೆಜ್ಜೆ ಇಡಲೂ ಆಗದ,ಕೀಲಿಲ್ಲದ ಮುದುಕಿಯ ಹಾಗೆಕೈಲಾಗದಿದ್ದರೂ ಬೊಬ್ಬಿಡುವುದಕೇನೂಕಡಿಮೆ ಇಲ್ಲ ‘ಟಿಕ್’ ಎಂಬ ಶಬ್ದಮಾತ್ರ ಕಿವಿಯೊಳಗೆ ಕಾದ ಸೀಸಹೊಯ್ದಷ್ಟು ಕಠೋರ. ಆಗೊಮ್ಮೆ-ಈಗೊಮ್ಮೆನರ್ಸಗಳ ಅಡ್ಡಾಡುವಿಕೆ ಮಾತ್ರನಾನಿನ್ನೂ ಮನುಷ್ಯರ ನಡುವಿರುವುದಕೆಪುರಾವೆ.ಖಾನೆಯೊಳಗೆ ಖಾಲಿತನ ತುಂಬಿಉಸಿರಾಟದ ಭದ್ರತೆ ಕಾಯ್ದುಕೊಂಡು ಏಳು ದಿನಗಳನ್ನಏಳು ವರ್ಷಗಳಂತೆ ಕಳೆದು ಬರುವ ಖೈದಿ! ಕಣ್ಣಾಮುಚ್ಚಾಲೆ ತಪ್ಪಿಸಿಕೊಳ್ಳುವುದಕ್ಕೆ ಹೇಳುತ್ತಿದ್ದ ಕುಂಟುನೆಪಗಳಿಂದು ಬಂಧಿಸುವುದಕ್ಕೆಬರುವ ಭಟನಂತೆ.ಜ್ವರವೆಂದು ನರಳುವ ಹಾಗಿಲ್ಲರಾಕ್ಷಸನಂತೆ ಹಗಲಿರುಳೆನ್ನದೆ ದುಡಿದುಒಂದೆರಡು ದಿನವೂ ಮೈಕೈ ನೋವೆಂದುಒದ್ದಾಡುವ ಹಾಗಿಲ್ಲ. ಎಲ್ಲ ರಸ್ತೆಗಳೂಅಲ್ಲಿಗೆ ಎಳೆದುಕೊಂಡು ಹೋಗುತ್ತಿವೆ.ಕಾಲು ಕಿತ್ತು ರಸ್ತೆ ಬದಲಿಸಿದರೂ ಅವುಒಯ್ಯುವುದು ಅಲ್ಲಿಗೇ!ಎಲ್ಲಿಯೂ ಹೋಗದೆ ಒಳಗಿರಲುನನ್ನ ದಾಸ್ತಾನು ಅಕ್ಷಯಪಾತ್ರೆಯೇ?ದುಡಿದು ತುತ್ತಿನ ಚೀಲ ತುಂಬಿಸಿಯೇನೆಂದರೆಎಲ್ಲಿಂದಲೋ ಹಾರಿ ಬಂದು ಕತ್ತುಹಿಸುಕುವ ಅಣುರಕ್ಕಸ. ಎಷ್ಟು ದಿನಈ ಕಣ್ಣಾಮುಚ್ಚಾಲೆಯೋ ? ಕಾಲ ಮುಟ್ಟಿದರೆ, ಮುತ್ತಿಟ್ಟರೆ ಹೆಚ್ಚುತ್ತಿದ್ದಿದ್ದುಪ್ರೀತಿ ಒಲವುಗಳು ಮಾತ್ರ.ಸುರಿವ ಕಣ್ಣೀರಿಗೆ ಅಣೆಕಟ್ಟಾಗಿದ್ದುನೇವರಿಕೆ, ತೆಕ್ಕೆಯ ಮೃದು ಅಪ್ಪುಗೆಕಳೇಬರಕ್ಕೆ ಕೊನೆ ಪೂಜೆಯೇಕಳೆಯಂತೆ, ಕೊನೆಯದಾಗಿ ತಬ್ಬಿಬಿದ್ದು ಹೊರಳಾಡಿ ಅತ್ತರೂ ತೃಪ್ತಿನೀಡುತ್ತಿರಲಿಲ್ಲ ಬೀಳ್ಕೊಡುಗೆ.ತಂದೆ- ತಾಯಿ ಮಕ್ಕಳೆಲ್ಲ ಒಂದೆಡೆಸೇರಿ ಸಂಭ್ರಮಿಸುತ್ತಿದ್ದಿದ್ದು ಹಬ್ಬಗಳುಒಬ್ಬರಿಗೊಬ್ಬರಾದಾಗ ಹರಡುತ್ತಿದ್ದಿದ್ದುಭ್ರಾತೃತ್ವ, ಒಂದೆಂಬ ಭಾವಎಲ್ಲಿಯೋ ಏನೋ ಅವಘಡವಾದರೆಮರುಗುತ್ತಿದ್ದಿದ್ದು ಮೃದು ಮನ. ಎಲ್ಲವೂ ಗತ ವೈಭವವೀಗಮುಟ್ಟುವ ಹಾಗಿಲ್ಲ ತಟ್ಟುವ ಹಾಗಿಲ್ಲನೇವರಿಸಿ ಸಂತೈಸಿದರೆ ಹರಡುವುದುಖಾಯಿಲೆ ಮಾತ್ರ!ಸಂಸ್ಕಾರ ಕಾಣದ ಶವಗಳ ಕನಿಷ್ಠಒಮ್ಮೆ ಕಂಡರೂ ಸೌಭಾಗ್ಯತಂದೆ ತಾಯಿ ಮಕ್ಕಳು ದಿಕ್ಕಿಗೊಬ್ಬರಂತೆಒಬ್ಬರಿಗೊಬ್ಬರಾದರೆ ಹರಡುವುದುಪಿಡುಗಂತೆದಿನವೂ ಒಂದೇ ರುಚಿ ನಾಲಿಗೆಯದುಡ್ಡು ಬೀಳಿಸಿದಂತೆ, ಎಂತಹ ಅನಾಹುತಕ್ಕೂಮನಗಳು ಈಗ ಮರಗಟ್ಟಿ ಹೋಗಿವೆ *************************

ಚೈತ್ರಾ ಕಾವ್ಯಗುಚ್ಛ Read Post »

ಕಾವ್ಯಯಾನ

ಚೇತನಾ ಕುಂಬ್ಳೆ ಕಾವ್ಯಗುಚ್ಚ

ಚೇತನಾ ಕುಂಬ್ಳೆ ಕಾವ್ಯಗುಚ್ಚ ನಿರೀಕ್ಷೆ ನಿನ್ನ ಕೈಹಿಡಿದು ನಡೆದ ದಾರಿಯಲ್ಲಿಹೆಜ್ಜೆಗುರುತುಗಳು ಇನ್ನೂ ಮಾಸಿಲ್ಲನಿನ್ನ ಹೆಸರ ನೆಪದಲ್ಲಿ ಅಂಗೈಯಲ್ಲಿ ಹಚ್ಚಿದಮದರಂಗಿಯ ಬಣ್ಣ ಇನ್ನೂ ಅಳಿಸಿಲ್ಲ ಸಮಯವನ್ನು ದೂಷಿಸುತ್ತಾದಿನ ರಾತ್ರಿಯೆನ್ನದೆಕಾದಿದ್ದೆ ಕಾತರಿಸಿದ್ದೆಬಯಸಿದ್ದೆ ನಿನ್ನ ಸೇರಲು ಕಣ್ಗಳಿಂದುದುರಿದ ಹನಿಗಳುಮಣ್ಣಿನಲ್ಲಿ ನರಳುತ್ತಿದೆತನು ಮನ ತಣ್ಣಗಾಗಿದೆನಿನ್ನ ಬಿಸಿಯುಸಿರ ಬಿಸುಪಿಲ್ಲದೆ ಅದೆಷ್ಟು ಚುಚ್ಚು ಮಾತುಗಳನ್ನಾಲಿಸಿದ್ದೆಎಷ್ಟೊಂದು ಕೆಂಗಣ್ಣುಗಳಿಗೆ ಗುರಿಯಾಗಿದ್ದೆಎದೆ ಸೀಳುವಂತ ನೋವಿದ್ದರೂಬಲವಂತದಿ ತುಟಿಗಳಲ್ಲಿನಗುವ ತರಿಸಿದ್ದು ನಿನಗಾಗಿಯೇ ಜೊತೆಗಿದ್ದ ಒಂದಷ್ಟು ಕ್ಷಣಗಳುನೋವನ್ನು ಮರೆಸುತ್ತವೆನಿನ್ನ ನೆನೆಯುವಾಗಲೆಲ್ಲನೀನಿತ್ತ ನೆನಪುಗಳು ಸಂತೈಸುತ್ತವೆ ಈಗಲೂ ಕಣ್ಣ ನೋಟಗಳುಬಾಗಿಲಿನತ್ತ ಸರಿಯುವುದು ನಿಲ್ಲಲಿಲ್ಲನಿನ್ನಲ್ಲಿಟ್ಟ ನಂಬಿಕೆಗಳುಇನ್ನೂ ಸುಳ್ಳಾಗಲಿಲ್ಲ ಕಾರಣ ನೀನು ಎದೆಯಲ್ಲಿಹಚ್ಚಿದ ಪ್ರೀತಿಯ ದೀಪನಿತ್ಯವೂ ಉರಿಯುತಿದೆಅದರ ಬೆಳಕಿನಲ್ಲೆನಾನು ಉಸಿರಾಡುತ್ತಿರುವೆ ಕವಿತೆ ಬರೆಯುತ್ತೇನೆ ನೋವು ಎದೆಯನ್ನಿರಿಯುವಾಗಸಹಿಸಲಾಗದೆ ಕಣ್ಣೀರು ಹರಿಸುತ್ತೇನೆಪ್ರೀತಿಸುವ ಕೈಗಳು ಒರೆಸಲಿಯೆಂದಲ್ಲಮನಸ್ಸು ಒಂದಿಷ್ಟು ಹಗುರಾಗಲಿಯೆಂದು ಇರುಳ ನಿಶ್ಯಬ್ದತೆಯಲ್ಲಿಕನಸುಗಳನ್ನು ಹೆಣೆಯುತ್ತೇನೆಎಲ್ಲವೂ ನನಸಾಗಲಿಯೆಂದಲ್ಲವಾಸ್ತವವನ್ನು ಕ್ಷಣಹೊತ್ತು ಮರೆಯಲೆಂದು ಮುಸ್ಸಂಜೆ ಮರಳಲ್ಲಿಕುಳಿತುಕೊಳ್ಳುತ್ತೇನೆಅಲೆಗಳ ನರ್ತನವನ್ನು ನೋಡಲು ಮಾತ್ರವಲ್ಲಪ್ರಕೃತಿಯಲ್ಲಿ ಮಿಂಚಿಮರೆಯುವವಿಸ್ಮಯಗಳನ್ನು ಕಣ್ತುಂಬಿಕೊಳ್ಳಲೆಂದು ಮರೆಯಲಾಗದ ಕ್ಷಣಗಳನ್ನುನೆನಪಿನ ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೇನೆಧೂಳು ಹಿಡಿದು ಮಾಸಲೆಂದಲ್ಲನೆನಪಾದಾಗ ನೆನೆಯಲೆಂದು ಆಗಾಗ ಮೌನಕ್ಕೆ ಶರಣಾಗುತ್ತೇನೆಮಾತು ಬೇಸರವಾಗಿಯಲ್ಲಮೌನದೊಳಗವಿತಿರುವಮಾತುಗಳನಾಲಿಸಲೆಂದು ನಾನು ಕವಿತೆ ಬರೆಯುತ್ತೇನೆಓದುಗರು ಓದಲೆಂದಲ್ಲಭಾವನೆಗಳಿಗೆ ಉಸಿರುಗಟ್ಟುವ ಮೊದಲುಅಕ್ಷರ ರೂಪಕ್ಕಿಳಿಸಿ ಜೀವ ತುಂಬಲೆಂದು ಕರೆಯದೆ ಬರುವ ಅತಿಥಿ ಕರೆಯದೆ ಬರುವ ಅತಿಥಿ ನೀನುಕರೆದರೂ ಕಿವಿ ಕೇಳಿಸದವನುಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ, ಯಾವಾಗ, ಹೇಗೆ, ಯಾಕೆಯಾವ ನಿಮಿಷದಲ್ಲಿ ಯಾವ ರೂಪದಲ್ಲಿನೀನು ಬರುವೆಯೆಂದು ಗೊತ್ತಿಲ್ಲ ನನಗೆಮನ್ಸೂಚನೆ ನೀಡದೆ ಬರುವೆ ನೀನುಎಲ್ಲಿಂದ ಬರುವೆಯೋಎಲ್ಲಿಗೆ ಕರೆದೊಯ್ಯುವೆಯೋಒಂದೂ ತಿಳಿದಿಲ್ಲ ಒಡೆದು ನುಚ್ಚುನೂರು ಮಾಡುವೆಸಣ್ಣಪುಟ್ಟ ಸಂತೋಷಗಳನ್ನುಮನದ ತುಂಬ ವೇದನೆ ನೀಡಿಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಹಿರಿಯರೆಂದೋ, ಕಿರಿಯರೆಂದೋಶ್ರೀಮಂತರೆಂದೋ, ಬಡವರೆಂದೋನೋಡದೆ ಓಡಿ ಬರುವೆಎಲ್ಲರ ಬಳಿಗೆ ಕಾಲಕಾಲಕೆಕಾರಣ,ನಿನ್ನ ಕಣ್ಣಿಗೆ ಸಮಾನರಲ್ಲವೇ ಎಲ್ಲರೂ ಕಣ್ಣೀರು ಕಂಡರೂ,ಕರಗದ ಹೃದಯ ನಿನ್ನದುನೋವನ್ನು ಅರಿತರೂ,ಮಿಡಿಯದ ಮನಸ್ಸು ನಿನ್ನದುಓ ಅತಿಥಿಯೇ….ಯಾಕಿಷ್ಟು ಕ್ರೂರಿಯಾದೆ ನೀನು? ***********************************************************

ಚೇತನಾ ಕುಂಬ್ಳೆ ಕಾವ್ಯಗುಚ್ಚ Read Post »

ಕಾವ್ಯಯಾನ

ನೀನೆಂದರೆ ಆಕಾಶದಾಚೆಯ ಖುಷಿ

ನೀನೆಂದರೆ ಆಕಾಶದಾಚೆಯ ಖುಷಿ ಪ್ರೇಮಾ ಟ.ಎಂ.ಆರ್. ನೀ ಮಡಿಲಲ್ಲಿ ಮಲಗಿದ್ದೆನಿನ್ನ ಮೆತ್ತಗೆ ಸವರಿದೆ ನಾನುಆಕಾಶ ಮುಟ್ಟಿದ ಖುಶಿಯೇಉಹುಂ ಅದು ಕಡಿಮೆಯೇ ಹೋಲಿಕೆಗೆಮುಗಿಲ ಚುಕ್ಕಿನೀನು ಬೊಗಸೆಯೊಳಗಿದ್ದೆನಿನ್ನ ಕಣ್ಣೊಳಗೆ ಬರೀ ನಾನಿದ್ದೆನಿನ್ನ ಕೆಂಪು ಬೆರಳುಗಳ ಪುಟ್ಟ ಬಿಗಿಮುಷ್ಠಿಯೊಳಗೆ ನಾನು ಹುದುಗಿ ಕೂರಬೇಕೆಂದುಕೊಂಡೆ ನಿನಗೆ ಎದೆಯೂಡುತ್ತಿದ್ದೆ ನಾನುಜಗದಾವ ನೋವುಗಳೂ ನಿನ್ನಮುಟ್ಟಕೂಡದೆಂಬ ಕಕ್ಕುಲಾತಿಯಲ್ಲಿನಿನಗೆ ಹಾಲನ್ನದ ತುತ್ತು ಇಕ್ಕುತ್ತಿದ್ದೆಚಂದ್ರ ಚಂದ ನಗೆ ನಗುತ್ತಿದ್ದನಿನಗೆ ಜುಟ್ಟು ಕಟ್ಟುತ್ತಿದ್ದೆ ನಾನುಇನ್ನೊಂದು ಹಡೆವ ಬಯಕೆನನ್ನ ಕಾಡದಿರಲೆಂದುನಿನಗೆಂದೇ ಇರುವ ವಾತ್ಸಲ್ಯಹಂಚಿ ಹೋಗದಿರಲೆಂದು ಅಂದು ನೀ ಕಿತ್ತಾಡಿದ ಪಾತ್ರೆ ಸ್ಟೆಂಡ್ ಚಪ್ಪಲಿಗೂಡು ಅಪ್ಪನ ಬರೆವ ಮೇಜುಲಾಂಡ್ರಿ ಬಕೀಟು ಒಡೆದ ಕಿಟಕಿಯ ಗಾಜುಎತ್ತೊಗೆಯುತ್ತಿದ್ದ ಪುಟ್ಟ ಸೈಕಲ್ಲುಎದೆಯಲ್ಲೆಲ್ಲೋ ಹೇಗಿದ್ದವೋ ಹಾಗೇ ಇದೆ ಒಪ್ಪವಾಗದೇ..ನಿನ್ನ ಕಣ್ಣೀರು ಸಿಂಬಳ ಒರೆಸಿದ ನನ್ನ ಹಳೆಸೀರೆಗಳ ಇಂದಿಗೂಮಡಿಕೆಮಾಡಿ ದಿಂಬಿನಮೇಲೆ ಹಾಸಿಕೊಳ್ಳುತ್ತೇನೆ ಬಿಸಾಡಲಾಗದೇ… ಅಜ್ಜನ ಅಷ್ಟುದ್ದದ ಚಪ್ಪಲಯಲ್ಲಿ ನಿನ್ನಇಟ್ಟೆಇಟ್ಟಿರುವ ಪಾದ ತೂರಿಕೊಂಡುನಡೆಯುವದೆಂದರೆ ನಿನಗೆಷ್ಟು ಮೋಹವೋ ನಾನು ನೀನು ಅಪ್ಪಪುಟ್ಟ ಬಾಡಿಗೆ ಸೂರಿನೊಳಗೆಗೋಡೆ ನೆಲ ಕಿಟಕಿಗಳನ್ನೂಮುಟ್ಟಿ ತಡವಿ ಹಚ್ಚಿಕೊಳ್ಳುತ್ತಹರಟೆಕೊಚ್ಚುತ್ತ…ನೀನು ತಿಂದುಳಿಸಿದ ಅನ್ನ ದೋಸೆ ಅಮೃತವೆಂಬಂತೆ ಬಾಚಿಕೊಳ್ಳುತ್ತನಿನ್ನ ಬಾಯಿಂದ ಜಾರಿಬಿದ್ದಚೋಕಲೇಟ್ ಚೂರುಗಳನ್ನು ಗಬಕ್ಕನೆತ್ತಿಬಾಯಿಗೆಸೆದುಕೊಳ್ಳುತ್ತದೂರದರ್ಶನದ ಜಂಗಲ್ ಬುಕ್ ನೋಡಿಕುಣಿದು ಕುಪ್ಪಳಿಸುತ್ತ ವಾಶಿಂಗ್ ಪೌಡರ್ನಿರ್ಮಾ ಹಾಡು ತೊದಲುತ್ತಹೀಗಿದ್ದೆವು ನಾವುಶಹರದ ಕೃತ್ರಿಮತೆಯೇ ಸೋಂಕದೇ ಇಂದಿಲ್ಲಿ ಬಂಗಲೆಯಿದೆ…ಬದುಕ ಬೆಳಕು ನೀನಲ್ಲಿಇಲ್ಲಿ ದೇಹವಿದೆ ಜೀವ ಭಾವ ನಿನ್ನಲ್ಲಿಇಂದು ನೀನೇ ಕೊಡಿಸಿದನನ್ನ ಮೊಬೈಲ್ ಗೆ ನಿನ್ನ ವಿಡಿಯೋ ಕಾಲ್ನಗುತ್ತಿರುವೆ..ನಗಿಸುತ್ತಿರುವೆಕಣ್ಣೆದುರು ನಡೆದಾಡುತ್ತಿರುವೆ…ನಿನ್ನ ಮುಟ್ಟಲೆಂದು ಕೈ ಚಾಚುತ್ತೇನೆಕಣ್ಣು ಹನಿಯುತ್ತದೆನಿನಗೆ ಕಾಣಗೊಡದೇ ಮತ್ತೆ ಕೇಳುತ್ತೇನೆ ನನ್ನ ನಿನ್ನ ಅದೇ ಗಾಂವ್ಟಿಯಲ್ಲಿ ಯಾವಾಗ ಬತ್ತೆ ಮಗಾ?ನಿನ್ನದು ಅದೇ ಉತ್ತರ ಬರುತ್ತೇನೆಕರೋನಾ ಒಂಚೂರು ಹದಕ್ಕೆ ಬರಲಿನಾ ಅಂಟಿಸಿಕೊಂಡು ತಂದುನಿನಗೆ ಬಂದು..ಅದೆಲ್ಲ ಜಂಜಾಟ ಬೇಡಮ್ಮಾನಿನಗೂ ವಯಸ್ಸಾಯ್ತು… ಕರೋನಾದ ಕುಲಕೋಟಿಗೆ ಶತಕೋಟಿಶಾಪ ಹಾಕುತ್ತಾ ದಿನ ದೂಡುತ್ತಿದ್ದೇನೆ…ನೀ ಬರುವ ದಾರಿಗೆ ದಿಟ್ಟಿಯ ನೆಟ್ಟು ******************************

ನೀನೆಂದರೆ ಆಕಾಶದಾಚೆಯ ಖುಷಿ Read Post »

ಕಾವ್ಯಯಾನ

ಹಂಗೇಕೆ..?

ಕವಿತೆ ಹಂಗೇಕೆ..? ವೀಣಾ ಪಿ. ಹಂಗೇಕೆ..?ಇಹದ ಅಂಗೈಯಹುಣ್ಣಿಗೆಕನ್ನಡಿಯ ಹಂಗೇಕೆ..? ಮೆರುಗು ಮೌನದಮಂದಿರಕೆಮಾತಿನ ಹಂಗೇಕೆ..? ಶುದ್ಧ ಶ್ವೇತದಒನಪಿಗೆರಂಗಿನ ಹಂಗೇಕೆ..? ಗತಿಯ ಗಮ್ಯದನಡುಗೆಗೆಗತದ ಹಂಗೇಕೆ..? ಅಗ್ನಿಗೆದೆಯೊಡ್ಡಿ ಗೆದ್ದಪಾವನೆಗೆಪತಿತತೆಯ ಹಂಗೇಕೆ..? ರಾಗ-ದ್ವೇಷಗಳಳಿದವಿರಕ್ತೆಗೆಅನುರಕ್ತಿಯ ಹಂಗೇಕೆ..? ಬಂಧನವ ಕಳಚಿಟ್ಟ ದಿಟ್ಟಪರಿವ್ರಾಜೆಗೆಸಂಘದ ಹಂಗೇಕೆ..? ಬದ್ಧ ಬದುಕ ಧನ್ಯಾತ್ಮಭಾವಕ್ಕೆಸಾವಿನಾಚಿನ ಮುಕ್ತಿಯ ಹಂಗೇಕೆ..? ***********************************

ಹಂಗೇಕೆ..? Read Post »

ಕಾವ್ಯಯಾನ

ರೇಖಾಭಟ್ ಕಾವ್ಯಗುಚ್ಛ

ರೇಖಾಭಟ್ ಕಾವ್ಯಗುಚ್ಛ ಮರುಹುಟ್ಟು ಇಳಿಯಬೇಕು ನೆನಪಿನಾಳಕೆಮುದಗೊಳ್ಳಬೇಕುಎದುರಿಗೆ ಹಾಸಿ ಹರವಿಕೊಂಡುಚೆನ್ನ ನೆನಪುಗಳಆಯಸ್ಸು ಹೆಚ್ಚಿಸಬೇಕುಮೆತ್ತಗಾದ ಹಪ್ಪಳ ಸಂಡಿಗೆಗಳುಬಿಸಿಲಿಗೆ ಮೈಯೊಡ್ಡಿಗರಿಗರಿಯಾಗಿ ಡಬ್ಬಿ ಸೇರುವಂತೆನೆನಪುಗಳು ಸದಾ ಬೆಚ್ಚಗಿರಬೇಕು ಒತ್ತಿ ತಡೆ ಹಿಡಿದ ನೋವಿಗೂಆಗಾಗ ಬಿಕ್ಕಲುರಂಗ ಸಜ್ಜಿಕೆ ಬೇಕುತುಂಬಿಕೊಂಡ ಮಂಜು ನಂಜುಪೂರ್ತಿ ಹೊರಹೋಗಬೇಕು ಬಾಚಿ ಕರೆಯಬೇಕುನೆನಪೆಂಬ ನೆಂಟನನ್ನುನಿನ್ನೆಯ ನಂಟಿನ ಗಂಟುಗಳಬಿಡಿಸುತ್ತ ಹರಟಬೇಕುಅಂಟಿಯೂ ಅಂಟದಿರುವನೆನಪಿಗೆ ಮೀಸಲಾದಸಾಕ್ಷ್ಯಗಳಹೊರಗೆಳೆದು ಹೊದೆಯಬೇಕು ಇರಬೇಕು ನಿನ್ನೆಗಳಿಗೂನೆನಪುಗಳೆಂಬ ಮರುಹುಟ್ಟುಆಗಾಗ ಹಾಯುತಿರಲಿಇಲ್ಲಸಲ್ಲದ ನೆಪವಿಟ್ಟು.. ಅರ್ಥವಾಗದಿದ್ದರೆ ಹೇಳಿ ಅವನು ನನ್ನ ಕಂಗಳಲ್ಲಿಹೊಳೆಯುತ್ತಾನೆಹೊಳೆಯೂ ಆಗುತ್ತಾನೆಇಷ್ಟು ಸಾಕಲ್ಲವೇ ನಿಮಗೆಅವನು ನನಗೇನೆಂದು ತಿಳಿಯಲು ಅವನ ನಗುವ ಕಂಡು ನಾನುಪೂರ್ತಿ ಖಾಲಿಯಾಗುತ್ತೇನೆಆ ನಗು ನನ್ನ ಸಂಧಿಸಿದಾಗಮತ್ತೆ ತುಂಬಿಕೊಳ್ಳುತ್ತೇನೆನಮ್ಮ ನಡುವಿನ ಸಣ್ಣ ಮೌನಆಕಾಶದ ತಾರೆಗಳುಸದ್ದಿಲ್ಲದೆ ಮಿನುಗಿದಂತೆ ತೋರುತ್ತದೆನಾನು ಅವುಗಳ ಬೊಗಸೆಗೆ ತಂದುಸಂಭ್ರಮಿಸುತ್ತೇನೆ ಒಲವರಾಗ ಸಮ್ಮೋಹಗಳೆಲ್ಲತುಟಿಯ ಖಾಯಂ ರಹವಾಸಿಗಳಾಗಿಅವ ಮಾತಿಗಳಿದರೆಮಾಂತ್ರಿಕ ಲೋಕ ತೆರೆದುಕೊಂಡುನಾ ಕಳೆದೇ ಹೋಗುತ್ತೇನೆಅವನಲ್ಲಿ ಅವತರಿಸಲು ಬಿಡದೇಹವಣಿಸುತ್ತೇನೆ ಈಗ ನಿಮಗೆ ಖಂಡಿತಅರ್ಥವಾಗಿದೆ ಬಿಡಿಅವನು ನನಗೇನೆಂದುಅರ್ಥವಾಗದಿದ್ದರೆನೀವು ನಿಮ್ಮವನ ಒಮ್ಮೆನೆನಪು ಮಾಡಿಕೊಳ್ಳಿಆಮೇಲೆ ಅರ್ಥವಾಗದಿದ್ದರೆ ಹೇಳಿ ಬೆಂಬಲಿಸುವ ಬನ್ನಿ ನಾವು ನದಿಯಾಗಿ ಹರಿಯಬಲ್ಲೆವುಸಾಧ್ಯವಾದರೆ ಮಳೆಯಾಗಿ ಜೊತೆಯಾಗಿಆಣೆಕಟ್ಟು ಕಟ್ಟಿ ಬಳಸಿಕೊಳ್ಳಿಆದರೆ ನಮ್ಮ ಗಮ್ಯದೆಡೆಗಿನಒಂದೆರಡು ಬಾಗಿಲುಗಳನು ತೆರೆದೇ ಇಡಿ ನಾವೂ ಹಕ್ಕಿಯಾಗಿ ಹಾರಬಲ್ಲೆವುನಿಮ್ಮ ಬಾನ ವಿಸರ ನಮಗೂ ಸಲ್ಲಲಿಗಿಡುಗ ಹದ್ದುಗಳನ್ನು ಛೂ ಬಿಡಬೇಡಿನಮ್ಮ ನೆಲೆಗಳನ್ನು ಜೋಪಾನವಾಗಿಡಿಮತ್ತೆ ನಮ್ಮ ಗೂಡು ಒಂದೇ ಆಗಿರಲಿ ಹೊಗಳಿ ಅಟ್ಟದಲ್ಲೇ ಬಂಧಿಸದಿರಿದೇವರ ಪಟ್ಟ ಕಟ್ಟಿತಾಯಿ ಬೇರುಗಳು ಆಳಕ್ಕಿಳಿಯಲುನೆಲದಲ್ಲಿ ಪಾಲು ನೀಡಿಹಸಿರಾಗಿ ಎದ್ದು ನಿಂತಾಗಕೊಡಲಿ ಮಸೆಯದಿರಿ ಮರೆಯಲ್ಲೇ ಇರಿಸದಿರಿನಿಮ್ಮರ್ಧವಾದ ನಾವು ಕಾಣದಂತಿದ್ದರೆ ಹೇಗೆ ಪೂರ್ಣವಾಗುವಿರಿ ನೀವುನಮಗಾಗಿ ಬೇಡಿಕೆಯಲ್ಲ ಇದುಪೂರ್ಣತೆಗಾಗಿಪರಸ್ಪರ ಬೆಂಬಲಿಸುವ ಬನ್ನಿಹೊಸ ಕನಸನು ಹಂಬಲಿಸುವ ಬನ್ನಿ *****************************************

ರೇಖಾಭಟ್ ಕಾವ್ಯಗುಚ್ಛ Read Post »

ಕಾವ್ಯಯಾನ

ಕೆಲವರು ಹಾಗೆ

ಕವಿತೆ ರೇಷ್ಮಾ ಕಂದಕೂರ. ಕೆಲವರು ಹಾಗೆಕೆಲಸ ಸಾಧಿಸುವ ತನಕ ಒಡನಾಡಿಗಳುನಂತರ ಸರಿದುಹೋಗುವ ನರನಾಡಿಗಳು ಕೆಲವರು ಹಾಗೆಗೆಲ್ಲುವ ಕುದುರೆಯಿಂದ ಓಡುತಸಲಾಮು ಮಾಡಿ ಬೇಳೆ ಬೇಯಿಸಿಕೊಳ್ಳುವರು ಕೆಲವರು ಹಾಗೆಮೋಹದ ಬಲೆಯ ಬೀಸಿಕಬಳಿಕೆಯ ನಂತರ ತಿರುಗಿನೋಡದವರು ಕೆಲವರು ಹಾಗೆಮುಂದೊಂದು ನಡೆಯಲಿಹಿಂದೆ ಧೂರ್ತರಾಗಿ ಗುದ್ದುಕೊಡುವರು ಕೆಲವರು ಹಾಗೆನಿಷ್ಟಾವಂತರಂತೆ ನಟಿಸಿಒಳಗೊಳಗೆ ಕೊರೆಯುವ ಕೀಟದಂತವರು ಕೆಲವರು ಹಾಗೆಸತ್ಯ ಗೊತ್ತಿದ್ದರು‌ಸುಳ್ಳಿನ ಬಿಡಾರ ಹೂಡುವರು ಕೆಲವರು ಹಾಗೆನೇಮ ನಿತ್ಯ ಮಾಡುತಕಳ್ಳನೋಟ ಬೀರುವರು ಕೆಲವರು ಹಾಗೆಜೊತೆಗಾರರಂತೆ ಮುಖವಾಡದಿಗುಪ್ತಚರರಂತೆ ಸಂಚನು ಹೂಡುವರು ಕೆಲವರು ಹಾಗೆಗೊತ್ತಿದ್ದರು ಅವರು ನಮ್ಮವರುಎಂಬ ಭ್ರಮೆಯಲಿ ಸಹಿಸಿಕೊಳ್ಳುವರು. *****

ಕೆಲವರು ಹಾಗೆ Read Post »

ಕಾವ್ಯಯಾನ

ವಸುಂಧರಾ ಕಾವ್ಯಗುಚ್ಛ

ವಸುಂಧರಾ ಕದಲೂರು ಕಾವ್ಯಗುಚ್ಛ ಮುಖ್ಯ- ಅಮುಖ್ಯ ಮೇಲುಕೀಳಾಟದ ಯಾವತ್ತೂಯುದ್ಧ ಬೇಕಿಲ್ಲ. ಈ ಹೊತ್ತಿನ ತುತ್ತು;ಎಂದಿಗೆ ಒಲೆ ಹೊತ್ತಿ ಅನ್ನವೋಗಂಜಿಯೋ ಬೆಂದರಾಗುತ್ತಿತ್ತು, ಈಸತ್ಯದ ಬಾಬತ್ತೇ ನಮಗೆ ಮುಖ್ಯ. ಚದುರಂಗದಾಟ ಎಂದೆಣಿಸಿ, ದಾಳಉದುರಿಸಿ, ಗಾಳ ಹಾಕಿ -ದಾಳಿಮಾಡಿ, ಕೋಟೆಗೋಡೆಗಳನು ಕಟ್ಟುತ್ತಾಕೆಡವುತ್ತಾ, ಸಿಂಹಾಸನಾರೋಹಣ,ಪದಾಘಾತ- ಅಧಃಪತನ ಯಾರಿಗಾದರೇನು?ನಮಗೆ ಅಮುಖ್ಯ. ಯುದ್ಧವೆಂದರೆ ಕಂದನ ತೊಟ್ಟಿಲಮೇಲೆ ತೂಗುಬಿದ್ದ ಘಟಸರ್ಪ; ಕಕ್ಕಿದರೂಕುಕ್ಕಿದರೂ ಆಪತ್ತೇ. ಬದುಕು ಕಸಿದಂತೆ,ಆಸೆ ಕುಸಿದಂತೆ ಮಾಡುವೀ ಅಜೀವನ್ಮುಖಿಯುದ್ಧ ನಮಗೆ ಅಮುಖ್ಯ. ಹೂವಿನೊಡಲ ಮಕರಂದಕೆ ಎರವಾಗುವದುಂಬಿಯಾಡುವ ಯುದ್ಧ; ಮಳೆಮೋಡದತಡೆಗೆ ಬೆಟ್ಟ ಸಾಲು ಹೂಡುವ ಹುಸಿ ಯುದ್ಧ,ಹಸಿದ ಒಡಲ ತಣಿಸಲು ಅವ್ವನಂತವರಒಡಲ ಬೇಗುದಿಯ ಯುದ್ಧ ; ದುಡಿಮೆಗಾರರನಿರಂತರ ರಟ್ಟೆ ಯುದ್ಧ ನಮಗೆ ಬಲು ಮುಖ್ಯ. ‘ಅರಿವೇ ಗುರು’ ದೀಪವಾರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ-ಕತ್ತಲು, ಒಳಹೊರಗೂ.. ಮೌನಕ್ಕೆ ಶರಣಾಗಿ ಕಿವುಡುಗಿವಿತೆರೆದಿದ್ದೆ, ಶಾಂತಿಯೆಂದರೆಶಾಂತಿ ಒಳಹೊರಗೂ.. ಇತಿಮಿತಿಯ ಅರಿವಾಯ್ತು ಈಗ,ನನ್ನದು ಮತ್ತೂ ಹೆಚ್ಚಾಗಿ ಅವರದು.ಜಾಗರೆಂದರೆ ಜಾಗರೂಕಳೀಗ.. ಮಮತೆ ಕಣ್ತೆರೆದು, ಒಲವಿನಲೆಶುಭನುಡಿಯ ಉಲಿದಾಗಹರುಷವೆಂದರೆ ಹರುಷವೀಗ.. ಮತ್ತೆ ಕಣ್ತೆರೆದುಕೊಂಡೆ, ಒಳಹೊರಗುಅರಿಯುವ ಹಂಬಲದಲಿ ಇರುಳಿನಿಂದೆದ್ದುಬರುವ ತಾಜಾಸೂರ್ಯ ಕಂಡ.ಬೆಳಕೆಂದರೆ ಬೆಳಕೀಗ!! ಪದ- ಪದಕ ಪದಗಳ ಗೀಳು ಹಿಡಿಸಿಕೊಂಡುಪದಗಡಲೊಳಗೆ ಮುಳುಗುಹಾಕಿಗಿರಕಿಹೊಡೆದದ್ದು ಸಾಕೆನಿಸಿ ಮೇಲೆದ್ದುಬಂದರೆ, ಪುನಃ ಪದಗಳೇ ರಾಶಿರಾಶಿದಂಡೆಯಲಿ ಬಿದ್ದಿದ್ದವು ಮರುಳಾಗಿ… ಸದ್ದುಗದ್ದಲದ ಗೂಡ ಹೊರಗೆ ಹಾರಿ,ನಡುಗುಡ್ಡೆ ಕಾನನದೆಡೆ ನೀರವ ಹುಡುಕಿ,ಹಾಗೇ ತಪಸಿಗೆ ಕುಳಿತರೆ ಪದಗಳೇವಿಸ್ತರಿಸಿದವು. ಧ್ಯಾನ ನಿಮೀಲಿತನೇತ್ರದೊಳು ಪದಪತ್ರ ಬಿಂದು!ಕರ್ಣದುಂಬಿತು ಪದೋಚ್ಚಾರಮಂತ್ರಪಠಣ!! ಪದನರಿದು ವಿಸ್ತರಿಸಲು ತೊಡಗಿ,ಅಪೂರ್ಣ ಪದವಾಗಿ, ಪೂರ್ಣಲಯಮೈದಳೆಯದ ಮರೀಚಿಕೆಯಾಗಿ,ಪದಗಳ ಹಳುವ ಸರಿಸಿ, ಕಾನನದಂಚಿನ ಮರುಭೂಮಿ ಎಡೆಗೆ ಓಡೋಡಿ ಬಂದರೂ,ಬೆನ್ನಹತ್ತಿತು ಪದ ಮಾಯಾಮೃಗವಾಗಿ… ಪದವೆಂದರೆ ಮಾಯೆ. ಬಿಟ್ಟ ಮಾಯೆಯಲ್ಲ ಬಿಡಿಸಿಕೊಳುವ ಹುಂಬತನವೂ ನನದಲ್ಲ.ಪದ-ಪದಕವಾಗಿ ಕೊರಳಿಗೆ ಬಿದ್ದು, ಬೆನ್ನಹತ್ತಿ ಬಂದರೆ, ಹೊರೆ ಎನದೆ ನಾ ಹೇಗೆಧರಿಸದಿರಲಿ..? ***************************************

ವಸುಂಧರಾ ಕಾವ್ಯಗುಚ್ಛ Read Post »

ಕಾವ್ಯಯಾನ

ನಾಗರೇಖಾ ಕಾವ್ಯಗುಚ್ಚ

ನಾಗರೇಖಾ ಗಾಂವಕರ್ ಕಾವ್ಯಗುಚ್ಚ ಅಸ್ವಸ್ಥ ಮಂಚದ ಮೇಲೆ ಬೆಳದಿಂಗಳ ರಾತ್ರಿಯಲ್ಲಿಕೊಳ್ಳಿ ದೆವ್ವವೊಂದುಮನೆಯ ಮೂಲೆಯೊಳಗೆ ನುಸುಳಿಬಂದಂತೆತಬ್ಬಿದ ಜಾಡ್ಯ.ಆಸ್ಪತ್ರೆಯ ಮಂಚದ ಮೇಲೆಸೂರು ನೋಡುತ್ತಾ ಬೆದರಿ ಮಲಗಿದಾಗ,ಮೊಣಕೈಗೆ ದಪ್ಪ ಬೆಲ್ಟೊಂದನ್ನುಸುತ್ತಿ, ನರ ಹುಡುಕಲು ಬೆರಳಿಂದಮೊಟಕುವ ದಪ್ಪ ಕನ್ನಡಕದ ನರ್ಸಮ್ಮತತ್ತರಿಸಿ ಬಿದ್ದ ರಕ್ತನಾಳಗಳು ಜಪ್ಪಯ್ಯ ಎನ್ನದೇಅಂಟಿಕೊಂಡು ಸೀರಿಂಜಿಗೂರಕ್ತ ನೀಡಲು ಒಲ್ಲೆ,ಎನ್ನುವಾಗಲೇಕಂಬನಿಯ ತುಟಿಯಲ್ಲಿನುಡಿಯುವ ಕಣ್ಣುಗಳುಒಸರಿದ ರಕ್ತದ ಅಂಟಿದ ಕಲೆಗಳು ಆಯಾಸದ ಬೆನ್ನೇರಿ ಬಂದಗಕ್ಕನೇ ಕಕ್ಕಬೇಕೆನ್ನುವ ಇರಾದೆತರಗುಡುತ್ತಿದ್ದ ದೇಹವನ್ನುಸಂಭಾಳಿಸಲಾಗದೇ ಇರುವಾಗಲೇಮುಲುಗುಡುವ ದೇಹಗಳು ಖಾನೆ ಖಾನೆಗಳಲ್ಲಿಬೇನೆ ತಿನ್ನುವ ವೇದನೆಯ ನರಳಾಟನೋವು ತಿಳಿಯದಂತೆ ಬರಲಿನಿರಾಳ ಸಾವು. ಸಾವೆಂದರೆ ಸಂಭ್ರಮದ ಹಾದಿಎಂದವರೇಕೆ ಅಂಜುತ್ತಲೇಇದಿರುಗೊಳ್ಳುವರೋ? ನಿನ್ನ ಹೆಗಲಮುಟ್ಟಲೇಕೆ ಹಿಂಜರಿಯುವರೋ? ಮನದ ಅಸ್ವಸ್ಥ ಮಂಚದ ಮೇಲೂ ಪ್ರೀತಿಯನಿರಾಕರಣೆಗೆ, ನಿರ್ಲಕ್ಷ್ಯಕ್ಕೆ ತುಟಿ ತೆರೆಯದೇಉಗುಳು ನುಂಗಿ ಸಹಿಸುವುದೆಂದರೆಸಾವಲ್ಲವೇ?ಕಣ್ಣಲ್ಲಿ ಮೂಡಿದ ಚಿತ್ರವನ್ನುಸತ್ಯವಾಗಿಸಲಾಗದ ಅಸಹಾಯಕತೆಸಾವಲ್ಲವೇ? ಬದುಕೆಂದರೆ ಹೀಗೆಹುಚ್ಚಾಗಿ ಹಲಬುವಿಕೆ ಪ್ರೀತಿಗೂಪ್ರೇಮಕ್ಕೂ ಮತ್ತು ಸಾವಿಗೂ. ಇಕೋ, ಗಿರಿಗವ್ವರದ ಹಸಿರೆಲೆಗಳಸಂದಿ ಸಂದಿನಲ್ಲೂ ತೊಟ್ಟ,ನಿತ್ಯ ಸುತ್ತಾಟದಲ್ಲೂ ಹೂವರಳಿಸುವಕಲೆಯಲ್ಲೂ ಬೆರೆತುಹೋದ ಚೆಂದುಳ್ಳಿ ನೀ.ಮೆಲುನಡೆಯ ನಲ್ನುಡಿಯ ಸೊಗಸೇನರಳುತ್ತಲೇ ಇರುವೆತಿರಸ್ಕಾರದ ತೇರು ಹೂಮುಡಿಯಲ್ಲಿ ಹೊತ್ತುಆಯಾಸ ಬಳಲಿಕೆಗಳಮೈ ತುಂಬಾ ಹೊದ್ದು ಹೆಣ್ಣ ಸೌಂದರ್ಯ,ಸಂಗವನ್ನೇ ದ್ವೇಷಿಸಿದವನಪ್ರೀತಿಯ ಆಳದಲ್ಲಿ ಬಿದ್ದುಯುಗಯುಗಗಳಿಂದ ಪರಿತಪಿತೆ, ಪ್ರಲಾಪಿತೆಸ್ವ ಸಂಗತಗಳ ಅಸಂಗತಗಳಲ್ಲಿ ಮರುಳಾದವನಮೋಹದ ಸದ್ದುಸದ್ದಾಗಿಯೇ ಉಳಿದುಹೋದೆ. ನೆಮಿಸೆಸ್ ನಿನ್ನ ನೋವಿಗೆ ಮಿಡಿದಳುನಾರ್ಸಿಸಿಸ್ ತನ್ನ ಪ್ರತಿಬಿಂಬ ಕಂಡುಮರುಳಾಗುವಂತೆ ಮಾಡಿದಳು.ಆತನೋ ಮುದ್ದುಕ್ಕಿ ತನ್ನನ್ನೇ ಮೋಹಿಸಿದಸ್ವಮೋಹಿತ ಮರುಳುತನಕ್ಕೆ ಮದ್ದುಂಟೇ?ಅದೊಂದು ವಿಚಿತ್ರ ಸಮ್ಮೋಹನ ಜಾಲದಂತೆ.ಈಗ ಜಗದ ತುಂಬಾ ಅವನಂತೆಸುರ ಸುಂದರಾಂಗರು,ಪ್ರೀತಿಯ ನೆಪದಲ್ಲಿ ತಮ್ಮ ಹೊರತುಯಾರನ್ನೂ ಪ್ರೀತಿಸರುತಮ್ಮದೇ ಸಾಮ್ರಾಜ್ಯದ ಸುಖದಲ್ಲಿಇತರರ ಸುಖಕಾಣದವರು.ಇಕೋ, ಅಪಾತ್ರನ ಪಾಲಾದ ಪ್ರೀತಿಪಲ್ಲವಿಸಿಸುವುದೆಂತು,ಕಾದಿರುಳು ಕಣ್ಣು ಮುಚ್ಚದೇನಿನ್ನಂತೆ ಬೇಗೆಯಲ್ಲಿ ಬೇಯುವುದೇ ಬಂತು. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆಅರಿವಿಲ್ಲದೇ ಬಳಿದ ನನ್ನ ಕೆಂಪುತುಟಿರಂಗು ಇನ್ನೂ ಹಸಿಹಸಿಆಗಿಯೇ ಇದೆಇಳಿಸಂಜೆಗೆ ಹಬ್ಬಿದ ತೆಳುಮಂಜಿನಂತಹ ಹುಡುಗಮಸುಕಾಗದ ಕನಸೊಂದುಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆಭವದ ಹಂಗು ತೊರೆದೆಮುಖ ನೋಡದೇಮಧುರಭಾವಕ್ಕೆ ಮನನೆಟ್ಟುಒಳಹೃದಯದ ಕವಾಟವಒಪ್ಪಗೊಳಿಸಿ ಮುಗ್ಧಳಾದೆಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದಬರಡಾದ ಒರತೆಗೂ ಹಸಿಹಸಿ ಬಯಕೆಒಣಗಿದ ಎದೆಗೂ ಲಗ್ಗೆ ಇಡುವಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ?ಈ ತಂಗಾಳಿಯೂ ತೀರದ ದಿಗಿಲುಹತ್ತಿಸಿಕೊಂಡ ಏಕಾಂಗಿ ಮೃಗದಂತೆಸುಂಯ್ಯನೇ ಹಾಗೇ ಬಂದುಹೀಗೆ ಹೊರಟುಹೋಗುತ್ತದೆಮರೆತ ಕನಸುಗಳಿಗೆ ಕಡಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲಹಸಿಮನಗಳಲಿಹುಸಿ ಬಯಕೆಗಳಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ?ಕಂಪು ಹೆಚ್ಚಾಗಿ ಜೋಂಪುಹತ್ತಿದೆ, ಕಣ್ಣುಗಳು ಮತ್ತೇರಿಪಾಪೆಯೊಳಗೆ ಮುದುರಿದೆಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕುಹಚ್ಚುವ ನಿನ್ನ ಬಿಂಬವಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿನಿಂತ ಬೆಳಕ ಕಿರಣಕಣ್ಣ ಕಾಡಿಗೆಯ ಕಪ್ಪು,ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ,ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆಬಣ್ಣ ಬಳಿದೆ. ಮುದ್ದು ಹುಡುಗ,ಹೀಗಾಗೇ ದಿನಗಳೆದಂತೆನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು *************************************

ನಾಗರೇಖಾ ಕಾವ್ಯಗುಚ್ಚ Read Post »

You cannot copy content of this page

Scroll to Top