ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಇಂದಿರಾ ಕೆ ಅವರ ಗಜಲ್

ಕಾವ್ಯ ಸಂಗಾತಿ ಇಂದಿರಾ ಕೆ ಗಜಲ್ ದೇಶ – ದೇಶ ನಡುವೆ ದ್ವೇಷ ಜ್ವಾಲೆ ಆರಿಸುವವರು ಯಾರಿಲ್ಲಿಮುಗಿಲು ಮುಟ್ಟಿದ ಅಳಲು ಆಕ್ರಂದನ ಆಲಿಸುವವರು ಯಾರಿಲ್ಲಿ ಯುದ್ಧ ರಣಾರ್ಭಟಕೆ ಬೆಚ್ಚಿ ಬಿದ್ದಿದೆ ಮನುಕುಲವುಜಗದಗಲ ಹರಡಿದ ಅಶಾಂತಿಯ ಅಳಿಸುವವರು ಯಾರಿಲ್ಲಿ ಬಲಿಷ್ಠತೆ ಮೆರೆದು ದೀನರಿಲ್ಲಿ ಬಲಿಪಶುಗಳಾದರುರಕ್ತ- ಸಿಕ್ತದಲಿ ಸಿಕ್ಕ ಹೆಣಗಳ ಎಣಿಸುವವರು ಯಾರಿಲ್ಲಿ ಅಸೂಯೆ ಅಹಂನ ಪ್ರದರ್ಶನ ಕರಾಮತ್ತೋಅಮಾಯಕರ ಜೀವ ಬೆಲೆ ತಿಳಿಸುವವರು ಯಾರಿಲ್ಲಿ ಕ್ರಾಂತಿ ಕಹಳೆ ಹೊತ್ತಿಸಿ ಕ್ಷಿಪಣಿಗಳ ಮಳೆಗೈಯುತಿವೆಹಲ್ಲೋಲ- ಕಲ್ಲೋಲ ಜಗತ್ತು ದಂಡಿಸುವವರು ಯಾರಿಲ್ಲಿ ಭಯದ ಭೀತಿ ಆವರಿಸಿದೆ ಅಳಿದುಳಿದ ಮನಗಳಲಿ  ವಿರಾಮವಿಲ್ಲದೆ ವಿರಾಜಿಸುತಿದೆ ವಿನಾಶ ಕದನ ತ್ಯಜಿಸುವವರು ಯಾರಿಲ್ಲಿ ವಿಶ್ವದಾದ್ಯಂತ ಶಾಂತಿ ಸ್ನೇಹ – ಭಾತೃತ್ವ ನೆಲೆಸಲೆಂದು ಪ್ರಾರ್ಥಿಸಿಬೇಕಿದೆ ಇಂದಿರೆದಾಳಿ – ಪ್ರತಿದಾಳಿಗೆ ನಲುಗಿದವರ ರಕ್ಷಿಸುವವರು ಯಾರಿಲ್ಲಿ ಇಂದಿರಾ ಕೆ

ಇಂದಿರಾ ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಗಜಲ್ ತೆರೆದ ಎದೆಯ ಕದವ ಬಡೆಯುತಲೆ ಇದ್ದೆಅದಾವ ಊರ ಕನಸಿನೊಡೆಯನೊನೀನಾಗಿದ್ದೆ ಕನಸಲೆ ಕನಸುಗಳು ಬಹುದೂರದಿ ಸಾಗುತಲೆ ಇದ್ದವುನೀನು ಹೋದ ದೂರದೂರಿನ ದಾರಿಯಬೆನ್ನಟ್ಟಿಯೆ ಇದ್ದವು ನೀ ದಾರಿ ತಪ್ಪಿಸಿದರೂ ನೀನು ಕ್ರಮಿಸುವದಾರಿಯ ಮರೆಯದಂತೆ ಮಾಡಿದ್ದವು ಕನಸೆ ಗುರಿಯಾಗಿಸಿಕೊಂಡು ನಡೆದಿದ್ದೆ ನೀನುಆ ಕನಸೆ ಗುರಿಯ ತೀರ ತಲುಪಿಸಿದನು ಮರೆತೆ ಏನು ನನ್ನ ಕನಸೆ ನೀನು ನಿನ್ನ ಕನಸಿಗಾಗಿ ನಾನೆ ಎಂದೆನೀ ಬರಿ ಕನಸ ಕಂಡರೆ ಕಾವ್ಯಧರೆಗೆ ಕನಸೆ ನೀನಾಗಿದ್ದೆ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್ Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ಅವ್ವನಂತಹ ಹುಡುಗಿ” pic̲:gemini ಇವಳ ಕುರಿತುಹೆಚ್ಚೇನೂ ಹೇಳಬೇಕಿಲ್ಲ…! ಅವ್ವನಂತಹ ಹುಡುಗಿಕಣ್ಣ ಬೊಗಸೆ ತುಂಬಾಪ್ರೀತಿ ಹೊತ್ತು ನಿಂತಿರುತ್ತಾಳೆ…! ಬೆಳ್ಳಂಬೆಳಗ್ಗೆ ಅವ್ವನೇಎಲ್ಲರಿಗಿಂತ ಮೊದಲೆದ್ದುಮನೆಯ ಉಸಾಬರಿ ವಹಿಸಲುಹಾಜರಾಗುವಂತೆರೂಮಿನ ಬಾಗಿಲು ತೆರೆದಾಗೆಲ್ಲಾಕಣ್ಮುಂದೆ ಕಾಣಿಸಿಕೊಳ್ಳುತ್ತಾಳೆಒಂಟಿ ದೋಣಿಯೊಂದುಯಾವುದೋ ದೂರ ತೀರಕೆಹಾತೊರೆದು ಹರಿಯುತ್ತಿರುವಂತೆ..! ನನ್ನೆದೆಯೊಳಗೂಒಮ್ಮೆಲೇ ರಭಸವಾಗಿ ನುಗ್ಗಿ ಬಿಡುತ್ತಾಳೆಅವ್ವನ ಪ್ರತಿರೂಪದಂತಾಗಿಹರಿದಾಡುತ್ತಾಳೆಮುಗ್ಧತೆಯಲ್ಲಿ ಮೂಗು ತಿರುವುತ್ತಾಒಳಗೊಳಗೆ ಅಸಹನೆಯಲ್ಲಿಉಕ್ಕುವ ಅಲೆಗಳಂತೆ ಸಿಡುಕಿತನ್ನಷ್ಟಕ್ಕೆ ತಾನೇ ತಣ್ಣಗಾಗುತ್ತಾಳೆಪ್ರೇಮಮಯಿ ಆಗಿಬಿಡುತ್ತಾಳೆ..! ಸಂತೈಸುತ್ತದೆ ನನ್ನನ್ನುಅವಳ ಒಂದು ನಿಷ್ಕಲ್ಮಶ ಮುಗ್ಧ ನಗು..!ಅವ್ವ ಮಗಳಾಗಿ ಬಂದಳೇನೋ ಎಂಬಅಚ್ಚರಿಯೊಂದು ಗೊತ್ತಾಗದಂತೆಹೃದಯದ ಭಾವವನ್ನುಲಯ ತಪ್ಪದಂತೆಮಧುರ ದನಿಯಲ್ಲಿ ಹೊತ್ತಿಸಿ ಬಿಡುತ್ತಾಳೆ..! ಅದ್ಯಾವ ಕಾಲದಲ್ಲಿಮಣ್ಣಲ್ಲಿ ಮಣ್ಣಾದ ನನ್ನವ್ವಈ ಅಪರಿಚಿತ ಹುಡುಗಿಯ ಕಂಗಳಲಿಮಳೆಯಾಗಿ ಜಿನುಗಿಬಿಟ್ಟಳು..!ತುಸು ಹಸುರಾಗಿಹೀಗೆ ಅರಿಯದಒಲವೊಂದನ್ನು ಚಿಗುರಿಸಿಬಿಟ್ಟಳು..! ತಿಳಿಯುತ್ತಿಲ್ಲ..ಇವಳ ಕುರಿತು ಹೆಚ್ಚೇನೂ..!ಆದರೆಅವ್ವನಂತಹ ಹುಡುಗಿಮೊನ್ನೆಮತ್ತೆ ತಿರುಗಿ ಬಂದಿದ್ದಳು..! ಬದುಕಿನ ಯುಗಾದಿಗಳೆಲ್ಲಾಮಂಕು ಕವಿದುಮುಗಿದು ಹೋಗುತ್ತಿರುವಾಗಬೆಳಕಾಗುವನನ್ನವ್ವನ ನೆನಪುಗಳನ್ನೆಲ್ಲಾಮರುಕಳಿಸುವಂತೆತನ್ನ ಹೋಳಿಗೆಯ ಡಬ್ಬಿಯಲ್ಲಿಜತನವಾಗಿ ತುಂಬಿಅಕ್ಕರೆಯಿಂದ ಕೈಗಿರಿಸುತ್ತಾತಾಯೊಡಲಿನ ಕನಸೊಂದುನಿಜವಾದಂತೆನಗುತ್ತಾ..ಅವ್ವನಾಗಿ ನಿಂತುಬಿಟ್ಟಿದ್ದಳು..! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ‌ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ‌ ಗಜಲ್ ಚಂದ್ರ,ತಾರೆಗಳು ನಾ ಕೈ ಚಾಚಿದರೇ ಸಿಕ್ಕಿ ಬಿಡುವಷ್ಟು ಹತ್ತಿರದಲ್ಲಿರಬೇಕಿತ್ತುನಿದಿರೆಯು ರೆಪ್ಪೆ ಮುಚ್ಚುವ ಮುನ್ನ ಕಣ್ಣ ಸೇರುವಷ್ಟು ಹತ್ತಿರದಲ್ಲಿರಬೇಕಿತ್ತು ಪೂರ್ವದಿಂದ ಪಶ್ಚಿಮದೆಡೆಗೆ,ಬೆಳಕಿನೊಂದಿಗೆ  ದಿನವೂ ರವಿಯ ಪಯಣಗೂಡುಗಳು,ರೆಕ್ಕೆ ದಣಿಯುವುದರೊಳಗೆ ಸಿಗುವಷ್ಟು ಹತ್ತಿರದಲ್ಲಿರಬೇಕಿತ್ತು ಬಾನಂಗಳದಿ ಚೆಲ್ಲಿದ ಬೆಳದಿಂಗಳದು ನಗುವಿನ ನೆಮ್ಮದಿಯ ಮಡಿಲಿನಂತಿದೆಹುಣ್ಣಿಮೆಯು,ಹಗಲಾಗುವುದರೊಳಗೆ ನಾ ಮುಟ್ಟುವಷ್ಟು ಹತ್ತಿರದಲ್ಲಿರಬೇಕಿತ್ತು ಜಗದ ಸಂತೆಯಲಿ ಅತೀ ಬೇಡಿಕೆಯ,ಮಾರಾಟಕ್ಕಿಡದ ಮೋಹವೊಂದೂ ಇದೆಪ್ರೀತಿಯು,ನಾ ನಗುತ ಕಣ್ಣೆತ್ತಿ ನೋಡಿದರೇ ಕಾಣುವಷ್ಟು ಹತ್ತಿರದಲ್ಲಿರಬೇಕಿತ್ತು ವಾಣಿಯ ಜೀವ,ಜೀವನದ ಜಂಜಾಟಗಳೆದುರು ನಿಡುಸುಯ್ಯುತ ಬಿಕ್ಕುತಿದೆಶಿವನ ಸಂತೈಕೆ,ನಾ ಸೋಲುವುದರೊಳಗೆ ಸೋಕುವಷ್ಟು ಹತ್ತಿರದಲ್ಲಿರಬೇಕಿತ್ತ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ‌ ಅವರ ಗಜಲ್ Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿಯವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ ಗಜಲ್ ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ ಹಮೀದಾಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿಯವರ ಗಜಲ್ Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಬಾಗಲಕೋಟ “ಗುಬ್ಬಿಗೂಡು”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ ಬಾಗಲಕೋಟ “ಗುಬ್ಬಿಗೂಡು” ಅದೆಲ್ಲಿಂದ ವಲಸೆ ಬಂದ ಹಕ್ಕಿಮನೆಯ ಮೂಲೆಯಮರದ ರೆಂಬೆಗೆಕನಸಿನ ಗೂಡು ಕಟ್ಟಿ ಹಾರಿ ಹೋಗಿ ಅಲ್ಲಲ್ಲಿ ಸಿಕ್ಕಹುಲ್ಲು ತಂತುಗಳನು ತಂದುಬೆಚ್ಚನೆಯ ಗೂಡು ಹೆಣೆದುಮರಿ  ನಿರೀಕ್ಷೆಯ ನಿರಾಳತೆ ಮಮತೆಯ ಮಡಿಲಲ್ಲಿಮುದ್ದು ಜೀವಕೆಪ್ರೀತಿಯ ಧಾರೆ ಎರೆಯುತಜಗವ ತೋರುವ ಆಸೆ ಪಿಳಿಪಿಳಿ ಬಿಡಲು ಕಣ್ಣುಚಿಲಿಪಿಲಿ ಧ್ವನಿಯ ನಾದಹಾರಾಟದ ಹೊಸ ಮಾತುಮನದೊಳಗೆ ಮಧುರ ಭಾವ ಗೂಡಿನ ಗಡಿಯನು ಮೀರಿಬಾಳಿನ ಹೊಸ ಅಧ್ಯಾಯಕೆ ನಾಂದಿಬೀಳುವ ಭಯವಿಲ್ಲದ ಮನಬಾನಿಗೆ  ಹಾರುವ ಮೊದಲ ಹೆಜ್ಜೆ ಚಿಕ್ಕ ರೆಕ್ಕೆಗಳನು ಬಿಚ್ಚಿಭರವಸೆಯ ಹಾದಿಯಲ್ಲಿಧೈರ್ಯದಿಂದ ಹೆಜ್ಜೆ ಇಟ್ಟುಜಗವ ಸುತ್ತುವ ಸಂತಸ ಡಾ.ಗೀತಾ ದಾನಶೆಟ್ಟಿ ಬಾಗಲಕೋಟ

ಡಾ.ಗೀತಾ ದಾನಶೆಟ್ಟಿ ಬಾಗಲಕೋಟ “ಗುಬ್ಬಿಗೂಡು” Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಜಗವು ಉರಿಯುತಿದೆ ಜೀವಿಗಳು ನರಳುತಿವೆ ನೀ ಸುಮ್ಮನಿರುವಿಹೃದಯಗಳು ಬೆಂಕಿಯಲಿ ಬಿದ್ದು ಬೇಯುತಿವೆ ನೀ ಸುಮ್ಮನಿರುವಿ ಕಂದಮ್ಮಗಳು ಹುಡುಕುತಿವೆ  ಹೆತ್ತವರನು ನೆತ್ತರಿನಲಿ ನೋಡುದೀನರು ಕಂಡ ಕನಸುಗಳು ಮಣ್ಣಾಗುತಿವೆ  ನೀ ಸುಮ್ಮನಿರುವಿ ವಿಶ್ವದಲ್ಲಿ ನಾನೆಂಬ ಅಹಂಕಾರದ ಕಹಿ ಕಳೆಯು ಬೆಳೆಯುತಿದೆನಂಬಿದ  ದೈವಗಳೆಲ್ಲಾ ಸಾಯುತಿವೆ ನೀ ಸುಮ್ಮನಿರುವಿ ನಿತ್ಯ ಉರುಳುತಿವೆ ರಾಶಿ ಹೆಣಗಳು ಅಂತ್ಯಕ್ರಿಯೆ ಇಲ್ಲದೆಯೇಭೂಮಂಡಳದಲಿ ಮಸಣಗಳು ಬೆಳೆಯುತಿವೆ ನೀ ಸುಮ್ಮನಿರುವಿ ಪ್ರೀತಿಯಲಿ ಎಲ್ಲರನು ಬಂಧಿಸುವ ಶಕ್ತಿಯು ನಿನಗಿದೆ ಪ್ರಭೆದ್ವೇಷ ಅಸೂಯೆಯ ಬಾಂಬುಗಳು  ಸಿಡಿಯುತಿವೆ  ನೀ ಸುಮ್ಮನಿರುವಿ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ಕವಿತೆ ” ಇದ್ದಿಲು ಮತ್ತು ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು ” ಇದ್ದಿಲು ಮತ್ತು ಪ್ರೇಮ” ಕಡು ಕಪ್ಪಿನರಾಶಿ ರಾಶಿ ಇದ್ದಿಲಿನ ಚೂರುಗಳಿಗೆಬೆಂಕಿ ತಾಕಿಸಿ ಮತ್ತೆ ಉರಿಸುವಂತೆಎದೆಯಾಳದಲ್ಲಿಬೆಂದು ಬೂದಿಯಾಗದೆಉಳಿದಿರುವ ನಿನ್ನ ನೆನಪುಗಳಿಗೆವಿನಾಕಾರಣ ತನ್ನಷ್ಟಕ್ಕೆ ತಾನೇಸಣ್ಣ ಕಿಡಿಯೊಂದುಹೊತ್ತಿಕೊಂಡು ಬಿಡುತ್ತದೆ..! ನಿನ್ನ ನೆನಪಿನ ಹೊಗೆಯೇಳುತ್ತದೆನನ್ನ ಉಚ್ಛ್ವಾಸ ನಿಸ್ವಾಸಗಳತಲೆಕೆಳಗಾಗಿಸಿ ಉಸಿರುಗಟ್ಟಿಸುತ್ತದೆಜೀವ ಹಿಂಡಿ ಪ್ರಾಣ ಹಾರಿತುಎನ್ನುವ ಹೊತ್ತಿಗೆಹೃದಯ ಬಗ್ಗನೇ ಉರಿದುಉಗುಳುತ್ತದೆಪ್ರೇಮವಿಲಾಪದ ಕೆಂಡದುಂಡೆಗಳವೈಶಾಖದ ಸೂರ್ಯನಂತೆ..! ತುದಿ ಮೊದಲಿಲ್ಲದಅನಂತ ನೆನಪುಗಳ ರಾಶಿಯಲ್ಲಿಛಿದ್ರಗೊಳ್ಳುವ  ಹೃದಯಚೂರಾದ ಇದ್ದಿಲುಗಳಂತೆಹಗುರವಾಗಿಮುಕ್ತಿ ದೊರಕದೆನಾಮಾವಶೇಷವಾಗುತ್ತದೆ..! ಅರಳುವುದಿಲ್ಲ ಮತ್ತೆಂದೂ..ಬೆಂದ ಎದೆಯ ಬನದಲ್ಲಿನವ ಪ್ರೇಮದ ಚಿಗುರು..!ಉರಿದ ಇದ್ದಿಲುಗಳ ರಾಶಿಯನ್ನೇನಿನ್ನ ಪ್ರೇಮದ ನೆನಪುಗಳಲ್ಲಿಮತ್ತೆ ಹೊತ್ತಿಸುತ್ತೇನೆ..! ಬೆಂದು ಬೂದಿಯಾಗಿ ಬಿಡಬೇಕೆಂಬಜಿದ್ದಿಗೆ ಬೀಳದೆನಿನ್ನ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿಕಡುಕಪ್ಪು ಇದ್ದಿಲಿನಂತಾಗುವಕಳಂಕವನ್ನುಸುಲಭದಲ್ಲಿ ಕಳಚಿಕೊಳ್ಳಲಾಗದೆಪ್ರೇಮದ ಹೆಸರಲ್ಲಿಸುಮ್ಮನೆ ಉರಿಯುತ್ತೇನೆ..! ಎಷ್ಟೇ ಬೆಂದರೂ ನೊಂದರೂಭುಗಿಲೇಳುವಪ್ರೇಮದ ಜ್ವಾಲೆಯಂತಾಗದೆಇಷ್ಟಿಷ್ಟೇ ಉರಿವಇದ್ದಿಲುಗಳ ಚೂರಾಗುತ್ತೇನೆ..! ಕಡೆಗೊಮ್ಮೆಈ ಬದುಕು ಥೇಟ್ ಇದ್ದಿಲಿನಂತೆಇಷ್ಟಿಷ್ಟೇ ನಶಿಸಿ ಹೋಗುತ್ತಿರುವಹೊತ್ತಿನಲ್ಲೂನಿನ್ನಂತೆ ನೂರೆಂಟು ಬಣ್ಣ ಬದಲಿಸದೆಮೂಲದಲ್ಲೇ ಕ್ಷಯವಾಗುವಅದರ ಅಸಲಿಯತ್ತಿಗೆತಲೆಬಾಗುತ್ತಾ… ಅಳಿದುಳಿದಪ್ರೇಮದ ಪಳೆಯುಳಿಕೆಗಳನ್ನುಒಟ್ಟುಗೂಡಿಸಿ ಸುಟ್ಟುಕೊಳ್ಳುತ್ತಾ  ನನ್ನನ್ನು ನಾನೇಎಂದಾದರೊಮ್ಮೆನಿನ್ನನ್ನು ಪ್ರೇಮಿಸಿದ ತಪ್ಪಿಗೆಬೆಂದುರಿದ ಗುರುತು ಸಿಗದಂತೆನಿಚ್ಚಳವಾಗಿಕೊನೆಗಾಣಿಸಿಕೊಳ್ಳುತ್ತೇನೆಅದೇ ಇದ್ದಿಲಿನ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ ” ಇದ್ದಿಲು ಮತ್ತು ಪ್ರೇಮ” Read Post »

ಕಾವ್ಯಯಾನ

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಉಕ್ಕಿಹೋದ ಹಾಲು ಹೆಕ್ಕಿ ತೆಗೆಯುವುದು ಹೇಗೆಮಿಕ್ಕಿ ಹೋದ ಕಾಲ ಹೊಕ್ಕು ಬಗೆಯುವುದು ಹೇಗೆ ಸವಿಸವಿ ಕ್ಷಣಗಳ ಚಿಕ್ಕ ಪಾಲೂ ಇಲ್ಲವೆಸವಿಯದ ಸಿಹಿಯನು ನೆಕ್ಕಿ ಜಗಿಯುವುದು ಹೇಗೆ ಹಾಲೆರೆದು ಹಾವಿನ ಜೊತೆಯಲಿ ನಡೆದಿದೆ ಸರಸವಿಧಿ ಕೊಟ್ಟ ವಿಷವನು ಮುಕ್ಕಿ ಉಗಿಯುವುದು ಹೇಗೆ ಬೆಂಕಿಕಡ್ಡಿ ಮಕ್ಕಿನಲಿ ಅಡಗಿ ಕಾದಿದೆ ಕಿಡಿದಕ್ಕದ  ಪ್ರೀತಿಯನು ತಿಕ್ಕಿ ಮೊಗೆಯುವುದು ಹೇಗೆ ಸಾರಾಯಿ ಕುಡಿದ ಮಂಗನಂತಾಗಿದೆ ಮನವುಹಕ್ಕಿ ರೆಕ್ಕೆ ಬೀಸಿ ಸೊಕ್ಕಿ ನೆಗೆಯುವುದು ಹೇಗೆ ಬೇಡೆಂದರೂ ಕಾಡಿವೆ ಅರಿವಿನ ಘಳಿಗೆಗಳುಕಹಿ ಕಹಿ ನೆನಪುಗಳ ಕಕ್ಕಿ ಹುಗಿಯುವುದು ಹೇಗೆ ಕಲ್ಲು ಕುಕ್ಕಿ ಜ್ಯೋತಿಯ ಕೊಕ್ಕು ರಗುತಾಗಿದೆಬದುಕಿನ ಭವಣೆಗಳ ಲೆಕ್ಕ ಮುಗಿಯುವುದು ಹೇಗೆ  ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಅವರ ಗಜಲ್ Read Post »

You cannot copy content of this page

Scroll to Top