ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ “ಜೋಪಾನ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಜೋಪಾನ ಓ…ಮನವೇನನ್ನ ಹೃದಯಾಳದಅಂತರಾಳದಲಿ ನೀನಿರಲುಜೋಪಾನವಾಗಿರು ನೀ ಸದಾಆ ಕಲ್ಮಶ ಮನಸ್ಥಿತಿಕರಿಂದ,! ಅಲ್ಲೂ ಬಂದುನಿನ್ನ ನಿರ್ಧಾರಗಳಪರಿವರ್ತಿಸ ಬಂದಾರುಜೋಪಾನವಾಗಿರು ನೀ ಸದಾಈ ಸಮಾಜ ಕೆಡುಕರಿಂದ.! ————- ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು ಕವಿತೆ “ಜೋಪಾನ” Read Post »

ಕಾವ್ಯಯಾನ

“ಯಾರೇ ನೀ ಅಭಿಮಾನಿ?”ತಾತಪ್ಪ.ಕೆ.ಉತ್ತಂಗಿ

ಕಾವ್ಯ ಸಂಗಾತಿ ತಾತಪ್ಪ.ಕೆ.ಉತ್ತಂಗಿ “ಯಾರೇ ನೀ ಅಭಿಮಾನಿ?” ಅವಳೊಳಗಿನ ಇನಿಯಳುನೋಡುವಳು…ನೋಡುತ್ತಲೇ ಇರುವವಳುರನ್ನಗೆನ್ನೆಯ ಸನ್ನೆಯಿಂದಲೇಸವಿದೂರದಲ್ಲಿ ನಿಲ್ಲುವಳು.ನೋಡಿದರೆ ,ಕಣ್ರೆಪ್ಪೆಗಳು ಕದಲಿದರೆನಿಂತು ಕುಂತು ನಾಚಿತನಿಪನಿಯಂತೆ ನೀರಾಗುವಳು…. ಮತ್ತೊಮ್ಮೆ…….ಒಳಗಿನ ಇಂಪುಕಂಪಿನನೆನಪಿನ ಕೂಗಿಗೆಧ್ವನಿಯ ಇಂಚರವಾಗುವಳು.ಪ್ರೇಮದವರತೆಯ ಅವಲೋಕಿಸಿದ ಅವಲೋಕಿನಿಯಂತೆ,ಅಬ್ಬರಿಸಿ, ಹುಬ್ಬೇರಿಸಿರಮ್ಯಖುಷಿಗೈಯುವಳು ಹಿತಮಿತ ಪಯಣವನ್ನೇಹಿಗ್ಗಿಸಿ ಕುಗ್ಗಿಸಿ ಒಗ್ಗಿಸಿ ಜಗ್ಗಿಸಿರಾಗಿಣಿಯಂತೆ ಅನುರಾಗಿಸುವಅರೆದ್ವಂದ್ವದ ಅರ್ತಿಯ ಅರಗಿಣಿಯಾಗುವಳು…ಏಕಾಂತದಲ್ಲಿಯೂ ಕಾಂತಧ್ಯಾನಸ್ಥೆಯಾಗಿ,ವಿರಾಗಿಣಿ ಊರ್ಮಿಳೆಯಂತೆ.ಪ್ರೇಮದಿಂದ ರಾಮನನ್ನು   ಆರಾಧಿಸುವ ಜಾನಕಿಯಂತೆಸದಾ ಜೊತೆಯಾಗಿರುವಅಂಟಿದ ನಂಟಿನ ನವತಾರೆಯಿವಳು ಚಿಕ್ಕ ಚಿಕ್ಕ ಸಂಗತಿಗಳಿಗೆಸದಾ ಸಂಗಾತಿಯಾಗಿಶುದ್ಧ ಸಂಭ್ರಮೆಯಾಗಿಗೆದ್ದಾಗ ಗೆಲುವಿಗೆಕೇಕೆ ಹಾಕಿ,ಸೋತಾಗ ಸಾಂತ್ವನಕ್ಕೆಸಖಿಯಾಗಿ ಜೊತೆಯಾಗಿಬಿಗಿದಪ್ಪಿ ಬಿಕ್ಕಿದವಳು. ಕಂಡರೂ ಕಾಣದಿದ್ದರೂಸದ್ದಿನ ಚಪ್ಪಾಳೆಗಳ ಸುರಿಮಳೆಗೈಯವಳು.ಅರೆತೆರೆಮರೆಯಲ್ಲಿದ್ದರೂಕಾವಲಿನ ಕಾಯದವಳುಕಾಳಜಿಯ ಕರುಣೆಯವಳು.ಹೇ ಮಧುರಪ್ರೇಮದ ಸಾಕಿಏನೇ ನಿನ್ನ ಉಸಿರಿನ ಹೆಸರು.. *ಯಾರೇ ನೀ ಅಭಿಮಾನಿ?*ಜಗವೇ ಮೆಚ್ಚುವ ಮಾನಿನಿ. ——— ತಾತಪ್ಪ.ಕೆ.ಉತ್ತಂಗಿ

“ಯಾರೇ ನೀ ಅಭಿಮಾನಿ?”ತಾತಪ್ಪ.ಕೆ.ಉತ್ತಂಗಿ Read Post »

ಕಾವ್ಯಯಾನ, ಗಝಲ್, ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಅವರ ಗಜಲ್ ಮಾತಿನ ಪದಗಳು ತೊದಲುತಿವೆ ಇಂದುಕತ್ತಲೆಗೆ ಕನಸುಗಳು ನಡುಗುತಿವೆ ಇಂದು ಎಷ್ಟು ಹುಡುಕಿದರು ಸಿಗದು ಸಮಾಧಾನಪಡೆದ ಬಯಕೆಗಳು ಬಳಲುತಿವೆ ಇಂದು ನಿಸ್ತೇಜ ಚಲನೆಗೆ ಕಣ್ಣುಗಳೇ ಸಾಕ್ಷಿ ಅಲ್ಲವೆಮುಡಿದ ಮಲ್ಲಿಗೆಗಳು ಬಾಡುತಿವೆ ಇಂದು ಗಲ್ಲೆನ್ನುವ ಬಳೆಗಳು ಸರಿದು ಸ್ತಬ್ಧವಾಗಿವೆಹೊಳೆಯುವ ಕಿರಣಗಳು ಕರಗುತಿವೆ ಇಂದು ಮನ್ಮಥನ ಜಾಲಕ್ಕೆ ಅಂದು ಸಿಲುಕಿದ ಮಾಜಾಮಾಯೆ ಮೋಹಗಳು ತೊರೆಯುತಿವೆ ಇಂದು ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ

ರಾಜು ಪವಾರ್ ಅವರ ಹನಿಗಳು

ಕಾವ್ಯ ಸಂಗಾತಿ ರಾಜು ಪವಾರ್ ಹನಿಗಳು ಗಾಂಧಿ ಬಟ್ಟೆ ಕಳಚಿಕೈಯಲ್ಲೊಂದು ಕೋಲು ಹಿಡಿದರೆ ಸಾಕು ಗಾಂಧಿಯಾಗುತ್ತೆವೆಂದರು !ಬಟ್ಟೆ ಕಳಚಿದಷ್ಟು ಸುಲಭವಲ್ಲ ಗಾಂಧಿಯಾಗುವುದು,ಗಾಂಧಿಯಾಗಹೊರಟವರುಜಗತ್ತಿನ ಮುಂದೆ ಬೆತ್ತಲಾದರು !!            ಕಿಂಡಿಯಲ್ಲಿ…. ಸರ್ವರಿಗೂ ಬೆಳಕ ನೀಡುವವಗೆಕಟ್ಟು ಪಾಡುಗಳಲ್ಲಿ ಕಟ್ಟಿಗರ್ಭಗುಡಿಯ ಕತ್ತಲೆಯಲ್ಲಿಟ್ಟುದೀಪ ಬೆಳಗಿಸಿ ನೋಡುವವರಿಗೆಕೃಷ್ಣ ಕಾಣಲಿಲ್ಲ !ಕನಕನ ಕರೆಗೆ ಓಗೊಟ್ಟುಮೌಢ್ಯದ ಗೋಡೆ ಕೆಡವಿಹೊಸ ಬೆಳಕಿನೊಂದಿಗೆ ಹಿಂತಿರುಗಿಕಿಂಡಿಯಲ್ಲಿ ಕನಕನಿಗೆ ಕಂಡನಲ್ಲ !!             ಕನ್ನಡಿಯ ನಗು ಕನ್ನಡಿ ಮುಂದೊಷ್ಟು ಹೊತ್ತು ನಿಂತುಮುಖಕ್ಕೆ ಮುದ್ದು ಮಾಡಿಕಣ್ಣಗಲಿಸಿ ಹುಬ್ಬು ತೀಡಿತುಟಿ ಸವರಿ ಬಣ್ಣ ನೀಡಿಎಡ-ಬಲಕ್ಕೆ ಕೂದಲನ್ನು ತಿದ್ದಿ ತೀಡಿಸುಂದರ ವದನವನ್ನಾಗಿಸುವ ಪರಿಗೆಕನ್ನಡಿ ನೋಡಿ ನಗುತ್ತಿತ್ತುಮನಸ್ಸಿನ ಮಲಿನ ಕನ್ನಡಿಗೆ ಕಂಡಿತ್ತು !!                ಚಪ್ಪಲಿಯ ಅಳಲು ಕಲ್ಲು, ಮಣ್ಣು,ಕೆಸರೆನ್ನದೆದಿನವೆಲ್ಲ ಹೊತ್ತು ತಿರುಗಿದ ಎನ್ನಮೈ ಮಲಿನವಾಗಿದೆ ಎಂದುಬಾಗಿಲ ಹೊರಗೆ ಬಿಟ್ಟರು,ಮಲಿನ ಮನಸ್ಸು ಹೊತ್ತುಒಳ ಹೋದರು !!             ಬರೀ ಕೆಂಪು ಧರ್ಮಜಾತಿ,ನೀತಿ,ಅನೀತಿಬಣ್ಣಗಳ ಒಣ ಬಡಿವಾರದ ಹೆಸರಲ್ಲಿಹರಿಸಿದ ರಕ್ತದ ಬಣ್ಣ ರಾಜು ಪವಾರ್                    

ರಾಜು ಪವಾರ್ ಅವರ ಹನಿಗಳು Read Post »

ಕಾವ್ಯಯಾನ

ರಾಹುಲ್ ಸರೋದೆ “ಕಾಲ ಬದಲಾಯಿತು”

ಕಾವ್ಯ ಸಂಗಾತಿ ರಾಹುಲ್‌ ಸರೋದೆ ಕಾಲ ಬದಲಾಯಿತು ಚಿಕ್ಕವರಿದ್ದಾಗ ಅಪ್ಪ ಜಾತ್ರ್ಯಾಗಹೆಗಲು ಮೇಲೆ ಕೂಡಿಸಿಕೊಂಡುಊರು ಸುತ್ತುತ್ತಿದ್ದರು, ಮಗಕೇಳಿದಾಕ್ಷಣ ಬೇಕಾದ್ದು ಕೊಡಿಸುತ್ತಿದ್ದರುಕಾಲ ಬದಲಾಯಿತು. ಈಗ ಮಗ ದೂರದ ಊರಾಗಕೆಲಸಕ್ಕೆಂದು ಊರು ಬಿಟ್ಟಾನ,ಕಾಲಕ್ಕೆ ತಕ್ಕಂತೆ ಅಪಡೇಟ್ ಆಗ್ಯಾನಕೈಬೆರಳಲ್ಲಿ ಆಟೋ ಗಾಡಿ ಬುಕ್ ಮಾಡ್ತಾನಕಾಲ ಬದಲಾಯಿತು. ಬಾಳ ದಿನದ ಮೇಲೆ ನೋಡಾಕಹೋದ್ರಾ ಸ್ವಿಗಿ, ಜೋಮ್ಯಾಟೋದಾಗಬೇಕಾದ ಊಟ ಆರ್ಡರ್ ಮಾಡ್ತಾನಊರಿಗೆ ಬಂದ ತಂದೆಯನ್ನು ಬಿಟ್ಟುಕಾಲ್ ಮೇಲೆ ಕಾಲ್ ಮಾತಾಡ್ತಾ ಬಹಳ ಬ್ಯೂಸಿ ಆಗ್ಯಾನಕಾಲ ಬದಲಾಯಿತು. ನಮಗಾಗಿ ಸಮಯ ಕೊಟ್ಟವರಿಗೆನಾವೇನು ಕೊಟ್ಟೆವೂ ಕೆಲಸ, ಫೋನ್ ಕಾಲು,ಮೀಟಿಂಗು, ಡೇಟಿಂಗು, ಎಲ್ಲಾ ಬರ್ತಾವುನಮ್ಮನ್ನು ಹೆತ್ತು ಹೊತ್ತು ಸಲುಹಿದವರಿಗೆಎರಡೊತ್ತು ಮಾತು, ಒಂಚೂರು ಪ್ರೀತಿನೀಡುವುದಕ್ಕಾಗುವಲ್ದು ————- ರಾಹುಲ್ ಸರೋದೆ

ರಾಹುಲ್ ಸರೋದೆ “ಕಾಲ ಬದಲಾಯಿತು” Read Post »

ಕಾವ್ಯಯಾನ

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು”

ಕಾವ್ಯ ಸಂಗಾತಿ ನಿಶ್ಚಿತ ಎಸ್ “ನಿನಗೇನು“ ಬಂದಾಕೆ ಕೇಳಿದಳು ನನ್ನ…ಅವನೆಂದರೆ ನಿನಗೇನು…? ಕೋಪಗೊಂಡಾಗ ಕಂಗೊಳಿಸುವ ಮುಂಜಾನೆಯ ಸೂರ್ಯನು ಅವನೇ…ತಾಳ್ಮೆಯಿಂದ ನನ್ನ ಸಂತೈಸುವ ಮುಸ್ಸಂಜೆಯ ಚಂದ್ರನು ಅವನೇ…ತಂಪಾದ ಮಾತುಗಳನ್ನಾಡಿ ತಣ್ಣನೆ ಬೀಸುವ ಗಾಳಿಯು ಅವನೇ…. ಜಗಳವಾದಾಗ ಪಟಪಟನೆ ಬಯ್ಯುವ ಮಳೆಹನಿಯೂ ಅವನೇ…ಒಮ್ಮೊಮ್ಮೆ ಗುಡುಗು ಸಿಡಿಲಿನಂತೆ ಅಬ್ಬರಿಸುವ ಕೋಪಿಷ್ಟನು ಅವನೇ…ಪ್ರೀತಿಯ ಚಿಲುಮೆಯಲಿ ನನ್ನ ತೇಲಿಸುವ ಅಲೆಯು ಅವನೇ… ಹೂವಿಗೆ ದುಂಬಿ ಹೇಗೋ ಹಾಗೆ ನನ್ನ ಪೀಡಿಸುವ ಗೆಳೆಯನು ಅವನೇ…ಸದಾ ನನ್ನ ಕಾಡಿಸುವ ನನ್ನ ಹೃದಯ ಕದ್ದ ಚೋರನು ಅವನೇ…ನನ್ನೆಲ್ಲ ನಗು ಅಳುವಿನ ಒಡೆಯನುಅವನೇ… ಪ್ರತಿದಿನ ನನ್ನನ್ನು ಜೋಪಾನಿಸುವ ತಾಯಿಯು ಅವನೇ…ಬೇಕು ಬೇಡವಾದದ್ದನ್ನು ಕೊಡಿಸುವ ಜವಾಬ್ದಾರಿಯುತ ತಂದೆಯು ಅವನೇ…ನನ್ನೆಲ್ಲ ತುಂಟಾಟಗಳಿಗೆ ಆಸರೆಯಾಗಿರುವ ಮಗುವು ಅವನೇ… ಒಟ್ಟಾರೆಯಾಗಿ ಈ ಬದುಕಿನ ಭರವಸೆಯೂ ಅವನೇ..ಹುರುಪು ಅವನೇ…ಗೆಲುವು ಅವನೇ..ನಂಬಿಕೆಯು ಅವನೇ..ನನ್ನೆಲ್ಲ ನಾಳೆಗಳು ಅವನೇ… ಈಗ ನನ್ನಲ್ಲಿ ಮೂಡಿಬಂದ ಪ್ರಶ್ನೆ ಅವನಿಗೇನು ನಾನು….? ನಿಶ್ಚಿತ ಎಸ್

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು” Read Post »

You cannot copy content of this page

Scroll to Top