ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಂಜಸಖನ ರಶ್ಮಿಗೆ ಅರಳುವ ಸೂರ್ಯಕಾಂತೆ ನಾನಗಲೇಬೇಕು
ನನ್ನಯ ಧಮನಿಧಮನಿಗಳಲ್ಲಿ ನಿನ್ನ ಚೈತನ್ಯ ತುಂಬಲೇಬೇಕು

ಶಂಕೆಯ ಮಳೆ ಸುರಿಯುತ್ತಿದೆ ಆಸರೆಯ ಕೊಡೆಯಾಗಿ ರಕ್ಷಿಸುತ್ತಿರು
ನರಕವೇದನೆಯ ಅಣುವು ತೂರದಂತೆ ಸ್ನೇಹದಿಂದ ಬಿಗಿದಪ್ಪಿಲೇಬೇಕು

ಕರುಣೆಯ ಕರಗಳಲ್ಲಿ ಕಣ್ಣೀರು ಕರಗಿವೆ ಒಲವಿನ ಗೆಲುವಿನಲ್ಲಿ
ಕವಿದಿರುವ ಕರಿಮೋಡ ಸೀಳಿ ನನ್ನವನು ಅನವರತ ಪ್ರೀತಿ ತೋರಿಸಲೇಬೇಕು

ಬಾಳಯಾನದಲ್ಲಿ ಒಲವಿನ ಗಾನ ಝೆಂಕಾರ ಸಂತಸದಲ್ಲಿ ಇರಲು
ನಾಕದಲ್ಲಿ ಪಯಣ ಸಾಗಲು ಹೃದಯಗಳ ಮಿಲನ ಆಗಲೇಬೇಕು

ನಿನ್ನ ಕ್ಷಿತೀಜ ಪಥದ ನಗುವಿನ ಬೆಳಕಲ್ಲಿ ಚಲಿಸುತ್ತಿರುವೆ
ಕತ್ತಲೆಗೆ ಅಂಜಿ ಹಿಂಜರಿಯದೆ ನಡೆಯುತ್ತಾ ಇರಲೇಬೇಕು

———-

About The Author

Leave a Reply

You cannot copy content of this page

Scroll to Top