ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಉಕ್ಕಿಹೋದ ಹಾಲು ಹೆಕ್ಕಿ ತೆಗೆಯುವುದು ಹೇಗೆ
ಮಿಕ್ಕಿ ಹೋದ ಕಾಲ ಹೊಕ್ಕು ಬಗೆಯುವುದು ಹೇಗೆ

ಸವಿಸವಿ ಕ್ಷಣಗಳ ಚಿಕ್ಕ ಪಾಲೂ ಇಲ್ಲವೆ
ಸವಿಯದ ಸಿಹಿಯನು ನೆಕ್ಕಿ ಜಗಿಯುವುದು ಹೇಗೆ

ಹಾಲೆರೆದು ಹಾವಿನ ಜೊತೆಯಲಿ ನಡೆದಿದೆ ಸರಸ
ವಿಧಿ ಕೊಟ್ಟ ವಿಷವನು ಮುಕ್ಕಿ ಉಗಿಯುವುದು ಹೇಗೆ

ಬೆಂಕಿಕಡ್ಡಿ ಮಕ್ಕಿನಲಿ ಅಡಗಿ ಕಾದಿದೆ ಕಿಡಿ
ದಕ್ಕದ  ಪ್ರೀತಿಯನು ತಿಕ್ಕಿ ಮೊಗೆಯುವುದು ಹೇಗೆ

ಸಾರಾಯಿ ಕುಡಿದ ಮಂಗನಂತಾಗಿದೆ ಮನವು
ಹಕ್ಕಿ ರೆಕ್ಕೆ ಬೀಸಿ ಸೊಕ್ಕಿ ನೆಗೆಯುವುದು ಹೇಗೆ

ಬೇಡೆಂದರೂ ಕಾಡಿವೆ ಅರಿವಿನ ಘಳಿಗೆಗಳು
ಕಹಿ ಕಹಿ ನೆನಪುಗಳ ಕಕ್ಕಿ ಹುಗಿಯುವುದು ಹೇಗೆ

ಕಲ್ಲು ಕುಕ್ಕಿ ಜ್ಯೋತಿಯ ಕೊಕ್ಕು ರಗುತಾಗಿದೆ
ಬದುಕಿನ ಭವಣೆಗಳ ಲೆಕ್ಕ ಮುಗಿಯುವುದು ಹೇಗೆ


About The Author

1 thought on “ಜ್ಯೋತಿ ಮಾಳಿ ಅವರ ಗಜಲ್”

Leave a Reply

You cannot copy content of this page

Scroll to Top