ಕಾವ್ಯ ಸಂಗಾತಿ
ಡಾ.ರೇಖಾ ಉದಯ
ಗಜಲ್


ಅದಾವ ಮೋಹದ ಮಾಯೆ ಸೆಳೆದಿದೆ ನಿನ್ನೆಡೆ
ಕಣ್ಣೊಳಗಿನ ಒಲವಿನ ನೋಟ ಕರೆದಿದೆ ನಿನ್ನೆಡೆ
ಗಾಳದಲ್ಲಿ ಸಿಕ್ಕ ಮೀನಂತಾಗಿದೆ ನನ್ನೀ ಜೀವನ
ನಂಬಿಕೆಯೇ ಒಲವೆಂಬ ಜಾಡು ಹಿಡಿದಿದೆ ನಿನ್ನೆಡೆ
ನಯವಾದ ಮಾತುಗಳೇ ಮುದ ನೀಡಿದವು ಎನಗೆ
ಶರದಿ ಸೇರುವ ತವಕದಿ ಮನ ನಡೆದಿದೆ ನಿನ್ನೆಡೆ
ತಿಳಿಯದಂತಿರಬೇಕು ಮಾಡಿದ ತಪ್ಪುಗಳಿಗೆ ಅಲ್ಲವೇ
ಭ್ರಮೆಯ ತೊರೆದು ನಂಬಿಕೆಯ ಪಡೆದಿದೆ ನಿನ್ನೆಡೆ
ರೇಖೂ ಸೋಕಿಸಿಕೊಳ್ಳದಿರು ಕರಿ ನೆರಳ ಛಾಯೆಯ
ಸೋಲಿನ ಭೀತಿಯ ಬಿಟ್ಟು ಭರವಸೆ ಬೆಳೆದಿದೆ ನಿನ್ನೆಡೆ
ಡಾ.ರೇಖಾ ಉದಯ



