ಅನುವಾದ ಸಂಗಾತಿ
ವಾಕ್ಯದಲ್ಲಿ ನಾಡಿ
ತೆಲುಗು ಮೂಲ : ಡಾ. ದೇವರಾಜು ಮಹಾರಾಜು
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು



ಸಮುದ್ರದಲ್ಲಿ ಕವನವಿದೆ
ಮಂಜಿನ ಹನಿಯಲ್ಲಿ ಕವನವಿದೆ
ಮಂಜಿನ ಹನಿ ಸಾಗರದಲ್ಲಿ
ಅದೃಶ್ಯವಾಗುವುದರಲ್ಲಿ
ಅಮೋಘವಾದ ಕವನವಿದೆ!
ಮಣ್ಣಿನಲ್ಲಿ ಕವನವಿದೆ
ಬೀಜದಲ್ಲಿ ಕವನವಿದೆ
ಬೀಜ ಮಣ್ಣಿನಲ್ಲಿ ಅದೃಶ್ಯವಾಗಿ
ಮರದಂತೆ ಬೆಳೆಯುವುದರಲ್ಲಿ
ಅದ್ವಿತೀಯವಾದ ಕವನವಿದೆ!
ಸೂರ್ಯೋದಯ –ಸೂರ್ಯಾಸ್ತಮಯ
ಆರಂಭವು-ಅಂತ್ಯಗಳಂತೆ
ಪ್ರಕೃತಿ ಕವನಕ್ಕೆ ಎರಡು ಮುಖ್ಯವಾದ ಚರಣಗಳು!
ತೆಗೆಯುತ್ತಿರುವ ಪ್ರತಿಯೊಂದು ಉಸಿರಿನಲ್ಲಿ
ಕವನ ಇರುವುದರಿಂದಲೇ
ನಿನ್ನಲ್ಲಿ ಇನ್ನೂ ಜೀವವಿದೆ
ಜೀವವೆಂದರೆ ಕೇವಲ ಚಲನವಲ್ಲ
ಕವನವೆಂದರೆ ಕೇವಲ ವಾಕ್ಯ ವಿನ್ಯಾಸವಲ್ಲ
ವಾಕ್ಯದಲ್ಲಿ ನಾಡಿ ಮಿಡಿಯುವುದು ಕವನ
ಚಲನದಲ್ಲಿ ಸ್ಪೃಹೆ ಧ್ವನಿಸುವುದು ಕವನ!
ತೆಲುಗು ಮೂಲ : ಡಾ. ದೇವರಾಜು ಮಹಾರಾಜು
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು



