ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನ ಪ್ರೀತಿಯ ಮಿನುಗು ಕೆಂಪು ಬಣ್ಣದಲಿ ಮಿಂದ ಮನ ನಂದನವಾಯಿತು
ನಿನ್ನ ಸ್ನೇಹದ ಜಿನುಗು ಹಳದಿ ಬಣ್ಣದಲಿ ಮಿಂದ ಜೀವ ಬಂಧನವಾಯಿತು

ಮುಗಿಲ ನೀಲಿ ಬಣ್ಣ ಸೇರುವ ಕನಸುಗಳಲಿ ಮೀಯುತ ಜೀವನ ಚೆಂದವಾಯಿತು
ನಗುವ ಹಸಿರು ಸಾಗರದಲಿ ಬೆರೆಯುತ ಮೌನಭಾವ ಆನಂದವಾಯಿತು

ಕರುಣೆಯ ಕಡಲಿನ ಕೇಸರಿಯ ಅಲೆಯಲಿ ತೇಲಿದ ಬಾಳು ಸಿರಿಗಂಧವಾಯಿತು
ಒಲವಿನ ಹಣತೆಯ ಶ್ವೇತ ಬೆಳಕಿನ ಹೊನಲಲಿ ಬದುಕು ಚಂದನವಾಯಿತು

ಮಳೆಬಿಲ್ಲ ಬಣ್ಣಗಳ ಬಾಂದಳದಿ ನಿತ್ಯ ಸತ್ಯ ಸಾಕ್ಷಾತ್ಕಾರ ಮಂದಾನಿಲಯವಾಯಿತು
ದೃಷ್ಟಿ ಬೊಟ್ಟಿನಂತೆ ಕಪ್ಪು ನಮ್ಮೀರ್ವರ ಜೊತೆ ಹೆಜ್ಜೆಗಳಿಗೆ ಅಂದವಾಯಿತು

ಬಣ್ಣದ ಗರಿಬಿಚ್ಚಿ ಕುಣಿವ ನವಿಲಾಗಿ ಹೋಳಿಯ ರಂಗಿಗೆ  ಕೆನ್ನೆ ಗುಲಾಬಿ ಸಿಂಧುವಾಯಿತು
ಕಾಮನಬಿಲ್ಲಾಗಿ ಬಾಗಿ ಬಣ್ಣ ಭುವಿಗೆ ಮುತ್ತಿಡುವ ರೀತಿ ಪ್ರೀತಿಯ ಬಿಂದುವಾಯಿತು

ಶಶಿ ಚೆಲ್ಲಿದ ಬೆಳ್ಳನೆಯ ಬಿಳಿನೊರೆ ಹಾಲ ಪ್ರೇಮ ಬೆಳದಿಂಗಳಲಿ ಕಂಗಳ ಕಾಂತಿ ಮಂದವಾಯಿತು
ನಿನ್ನ ನೇಹ ಕರಗಳ ಕರೆಯೇ ಕರಿಕಪ್ಪು ಕತ್ತಲಲಿ ಇಂದುವಿನ ಎದೆ ಬೆಳಕ ಇಂಧನವಾಯಿತು



About The Author

Leave a Reply

You cannot copy content of this page

Scroll to Top