ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ!

ಸಂತನಾಗುವುದೆಂದರೆ ಸಂತೆಯಲು
ತನ್ನೊಳಗೆ ತಾನೆ ಏಕಾಂತವಾಗುವುದು
ಜಾತ್ರೆ ಯಾತ್ರೆಗಳ ಗೌಜು ಗದ್ದಲದಲು
ಜಂಗುಳಿಯೊಳಗು ಜಂಗಮನಾಗುವುದು!
ಹೊರ-ಒಳಗಣ ಚಿಂತೆಗಳ ಚಿತೆಯಲ್ಲು
ಕೆಡದೆ ಸುಡದೆ ನಿತ್ಯ ನಿಶ್ಚಿಂತನಾಗುವುದು
ಮುತ್ತುವ ನೋವು-ನಲಿವ ಸುಳಿಯಲ್ಲೂ
ಬಾಗದೆ ಬೀಗದೆ ಸದಾ ನಿರ್ಲಿಪ್ತನಾಗುವುದು!
ನಂಟು ಗಂಟು ಕಗ್ಗಂಟು ಬಂಧನಗಳಲು
ಅಂಟಿ ಆತುಕೊಳ್ಳದೇ ಅತೀತನಾಗುವುದು
ದರ್ಪ ದರ್ಬಾರು ದಾಕ್ಷಿಣ್ಯಗಳ ಎದುರಲು
ದಾಸನಾಗದೆ ದೂರಾಗಿ ವಿನೀತನಾಗುವುದು!
ರಾಗ-ದ್ವೇಷಗಳ ಅಂಧಕಾರ ವಿಕಾರಗಳಲು
ಬಂಧಿಯಾಗದೆ ತ್ಯಜಿಸಿ ಅನಾಥನಾಗುವುದು
ವಂದನೆ ನಿಂದನೆ ಸನ್ಮಾನ ಅವಮಾನದಲು
ಏರದೆ ಜಾರದೆ ಸತ್ಯ ಸಮಚಿತ್ತನಾಗುವುದು!
ಗಳಿಕೆ ಕೂಡಿಕೆ ಹೂಡಿಕೆಗಳ ಪ್ರಭಾವದಲು
ಪೀಡಿತನಾಗದೆ ವರ್ಜಿಸಿ ಪರಿತ್ಯಕ್ತನಾಗುವುದು
ಬೇಡಿ ಬಂದವರೆದುರು ಕರ ಬಿಗಿಹಿಡಿಯದೆ
ಇದ್ದುದೆಲ್ಲವ ಕೊಡುತ ಪುನೀತನಾಗುವುದು!
ಬೇಕು ಬೇಕೆನುವ ಭಾವ-ಭಾಷ್ಯ ತೊರೆದು
ನಿರಾಳತೆ ನಿರ್ಮೋಹದಿ ವಿರಕ್ತನಾಗುವುದು
ಲೌಕಿಕ ಆಸೆ ಆಮಿಷ ವ್ಯಾಮೋಹ ತೊಳೆದು
ಅನುಭಾವಾನುಭೂತಿಗೆ ಅನುರಕ್ತನಾಗುವುದು!
ಬೋಧನೆ ಭ್ರಮೆ ಭ್ರಾಂತಿಗಳಲಿ ಬಸವಳಿಯದೆ
ಸಾಧನೆಯೆಡೆಗೆ ನಡೆದು ಕೃತಾರ್ಥನಾಗುವುದು
ಸದ್ವಿಚಾರ ಸತ್ಸಂಗ ಸನ್ಮಾರ್ಗಗಳಲಿ ಬೆಳಗುತ
ಸತ್ಯ ಸಂಸ್ಕಾರ ಸಾಕ್ಷೀಕರಿಸಿ ಸಾರ್ಥನಾಗುವುದು!
ಆಲಯ ಬಯಲು ಮೀರಿ ಬೆಳೆದು ಹೊಳೆದು
ಅರಿವ ಬೆಳಕಲಿ ಮಿಂದು ಮಹಂತನಾಗುವುದು
ಜೀವಾತ್ಮ ಪರಮಾತ್ಮರ ಅನುಸಂಧಾನ ಬೆಸೆದು
ಅಂತಿಮ ಸಾಕ್ಷಾತ್ಕಾರದಿ ಅನಂತನಾಗುವುದು!
.ಎನ್.ರಮೇಶ್.ಗುಬ್ಬಿ.


ನಿಮ್ಮ ಕಾವ್ಯ ನೋಬಲ್ ಆದರೆ ಯಾರ್ಯಾರು ನೋ ಒಳಸತ್ಯ ಕಠಿಣ ಸತ್ಯ ಪುನೀತ್ ರಾಜಕುಮಾರ್ ಭೂಕಳ್ಳಾರು ಇದೇ ಪುನೀತರಾಜಕುಮಾರ್ ಹತ್ತಿರ ಬನ್ನಿ docs file ನನ್ನದು ಬoಗಲೋ / stray land as the residential pvt person property bda aproved in the year 1974, detatils having.
In the year 2021,, several persons property . knows well several persons also..
ಸಿಕ್ಕಾಪಟ್ಟೆ ಘೋಷ ಎಲ್ಲಾ ಚಟ over ambitious