ವೈ.ಎಂ.ಯಾಕೊಳ್ಳಿ‌ ಅವರ “ಐದು ತನಗ”

 ರಾಧೆಯ ಅಳಲಿಗೆ
ವೇಣು ಗೋಪಾಲ ಮೂಕ
ಸಾವಿರದಾರು ನೂರು
ಜನ ರಾಧೆಯು ಪಾಪ!

ಬಡ ಪ್ರೇಮಕೆ ಪಾಠ
ನಮ್ಮ ಪುರಾಣಗಳು
ಮಿತಿಯರಿತು ಕೇಳು
ಸುಖಮಯವೀ ಬಾಳು

ಅಪ್ಪನ ಹಟಕಾಗಿ
ಅಣ್ಣ ತಮ್ಮ‌ಕಾಡಿಗೆ
ಭೂದೇವಿಗೂ ತಪ್ಪದು
ವನವಾಸ ಜಾಡಿಗೆ

ಪಗಡೆದಾಳದಾಸೆ
ಯಾರನ್ನು ಬಿಡಲಿಲ್ಲ
ಧರ್ಮನಂಥ ಧರ್ಮನೆ
ಬಲಿ ತಾನಾದನಲ್ಲ

ಐದುಜನ ವೀರರು
ಲೋಕಗೆಲ್ವ ಗಂಡರು
ಹೆಂಡತಿ ಸಮಯಕೆ
ಆಗಲಿಲ್ಲ ಒಬ್ಬರೂ


One thought on “ವೈ.ಎಂ.ಯಾಕೊಳ್ಳಿ‌ ಅವರ “ಐದು ತನಗ””

Leave a Reply