ಕಾವ್ಯ ಸಂಗಾತಿ
ರಾಶೇ ಬೆಂಗಳೂರು
ʼಬದುಕಿನುಯ್ಯಾಲೆʼ


ತೂಗುಯ್ಯಾಲೆಯ
ಹಂಸಕಲ್ಪದಲಿ
ಶಿರವನೊಲಿಕೆ ಬೇಡುವೆ
ಓ ಮಹಾ ಶಿವನೆ..
ಪ್ರಭಾತ ಲೀಲೆಯ
ದಿವ್ಯ ಸನ್ನಿದಾನದಲಿ
ನನ್ನ ಮರೆತು ಬಿಡುವೆ
ಹರಹರ ಮಹಾದೇವನೆ..
ಬದುಕುಯ್ಯಾಲೆಯ
ಚದುರಂಗದಾಟದಲಿ
ಸೋತು ಹೋಗಿರುವೆ
ದೇವ ಮಹಾ ಮಹಿಮನೆ..
ನೈಜ ಕಲ್ಪನೆಯ
ಆವಾಹನೆಯಲಿ
ಸಿಲುಕಿ ಒದ್ದಾಡುತ್ತಿರುವೆ
ಎಲ್ಲಿರುವೆ ಓ ದೇವರ ದೇವನೆ..
—————-
ರಾಶೇ.ಬೆಂಗಳೂರು

