ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

̆̆೧
ಅತ್ತಿತ್ತ ಹರಿದಾಡುವ ಮನವ ಒತ್ತಟ್ಟಿ ನಿಲ್ಲಿಸಬೇಕು
ಚಂಚಲತೆ ಸಂಚಲತೆಯಾಗಿ ಒಂದೆಡೆ
ಕೂಡಿಸಬೇಕು
ಹರಿವ ಹಳ್ಳದ ನೀರು ಒಂದು ಸಮ ತಳದಿ ಸಂಗ್ರಹಿಸಿ
ನಿಂತಾಗಲೆ ಜಲಸಾಗರವು ಅಂತರಾತ್ಮ//1//


ಬರುವದನು‌ ಮುಂಚೆಯೆ ಚಿಂತಿಸಿ ಕಳವಳಪಡದಿರು
ಬರುವದನು ತಡೆಯುವ ಶಕ್ತಿ‌ ಯಾವ ಕಾಲಕೂ ಇಲ್ಲ
ಬಂದುದನು‌ ಬಂದಂತೆ ಇದ್ದುದನು‌ಇದ್ದಂತೆ ಸ್ವೀಕರಿಸಿ ಅನುಭವಿಸೋ ಅಂತರಾತ್ಮ//2//


ನಡೆವ ಮನುಜನಿಗೆ ನೂರು ದಾರಿಗಳುಂಟು
ಸಂತೆ ಸುಂಕದ ದಾರಿಯ ಹಿಡಿದು ಹೋರಲೇಕೆ
ಗದ್ದಲ ಗೌಜನು ಬಿಟ್ಟು ಶಾಂತವಿರು ಮನದಲ್ಲಿ
ಮನದ ಶಾಂತಿಯೆ ಎಲ್ಲದಕೂ‌ ಕಾರಣ ಅಂತರಾತ್ಮ//೩//


ಮನದ ಭಾವಗಳ ನೂರು‌ ಪದವಾಗಲು‌ ಕಷ್ಟ
ಪದವಾಗಿ‌ಬಂದವಷ್ಟೇ ಜನಕೆ ತಿಳಿಯುವದು
ಮನವು ಸಾಗರವದು ಹನಿ‌ ನೀರ ಹೊರಹಾಕಿ ಇನಿತೆ
ನನ್ನದೆಂಬುದು, ಆದರದಷ್ಟೆ ಅಲ್ಲ ಅಂತರಾತ್ಮ


ದಿನದ ದುಡಿ ಮೆಯ ಮರೆತು ಎಲ್ಲೊ ಒಂದೆಡೆ‌ ಕುಳಿತು
ಬರಿ ಮಾತನು ಹೇಳಿದರೆ‌ ಮೆಚ್ಚಲಾರದು ದೈವ, ನಿಯತ
ಕಾಯಕವ ಸತತ ಗೈದರದುವೆ ನಿನ್ನ‌ ದೈವ‌ದ ಪೂಜೆ
ದುಡಿಮೆಯೇ ನಿಜ ದೈವ ಅಂತರಾತ್ಮ


About The Author

Leave a Reply

You cannot copy content of this page

Scroll to Top