ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ-
ಸಂಪೂರ್ಣ ಮತ್ಲಾ ಗಜ಼ಲ್


ಕಣ್ಣರಿಯದಿದ್ದರೂ *ಮನವು* ಅರಿಯುವುದಂತೆ ಗೆಳತಿ
ಮಾತಿಲ್ಲದಿದ್ದರೂ *ಹೃದಯವು* ಅರಿಯುವುದಂತೆ ಗೆಳತಿ
ಮೊಗದ ಭಾವವನು *ನೋಟವು* ಅರಿಯುವುದಂತೆ ಗೆಳತಿ
ಪ್ರೇಮಗೀತೆಯನು *ಮಿಡಿತವು* ಅರಿಯುವುದಂತೆ ಗೆಳತಿ
ನಗೆಯ ಹಿಂದಿನ ನೋವನು *ಅಧರವು* ಅರಿಯುವುದಂತೆ ಗೆಳತಿ
ಗೆಜ್ಜೆಯ ನಾದವನು *ಮಾರುತವು* ಅರಿಯುವುದಂತೆ ಗೆಳತಿ
ಕದಪುಗಳ ರಂಗನು *ಮಂದಹಾಸವು* ಅರಿಯುವುದಂತೆ ಗೆಳತಿ
ಎದೆಯ ದುಗುಡವನು *ಅಶ್ರುವು* ಅರಿಯುವುದಂತೆ ಗೆಳತಿ
ಸಂತಸದ ಹೊನಲನು *ಸವಿಗಾನವು* ಅರಿಯುವುದಂತೆ ಗೆಳತಿ
ಬೇಗಂ ಳ ಖುಷಿಯನು *ಜೇನೊಲವು* ಅರಿಯುವುದಂತೆ ಗೆಳತಿ
ಹಮೀದಾಬೇಗಂ ದೇಸಾಯಿ

ಅರ್ಥಪೂರ್ಣ ಗಜಲ್.
ಧನ್ಯವಾದಗಳು ಸ್ಪಂದನೆಗೆ.
ಹಮೀದಾಬೇಗಂ
ಸೊಗಸಾದ ಗಜಲ್ ಮೇಡಂ