ಕಾವ್ಯ ಸಂಗಾತಿ
ವಿನೋದ್ ಕುಮಾರ್ ಆರ್ ವಿ
ಜೋಗುಳ

ಕಡಲಲಿ ನೇಸರ ಮುಳುಗಿತು
ಸಂಜೆಗೆ ಮೆಲ್ಲನೆ ಜಾರಿ
ಹಠವನು ಬಿಟ್ಟು ನೀನೂ
ಮಲಗು ಅಮ್ಮನ ಹೆಗಲೇರಿ
ಪಿಳಿ ಪಿಳಿ ಕಣ್ಣನು ಬಿಟ್ಟು
ಇನ್ನು ನೋಡುವೆ ಏನನ್ನು
ಬೆಳಕು ಸರಿದು ಕತ್ತಲು ಹರಿಯಿತು
ಮಲಗು ಸಾಕಿನ್ನು
ಹಕ್ಕಿಗಳೆಲ್ಲಾ ಕೆಲಸವ ಮುಗಿಸಿ
ಸೇರಿವೆ ಗೂಡನ್ನು
ನೀನು ಮಲಗು ನಿದ್ದೆಗೆ ಜಾರಿ
ಕೇಳುತ ಅಮ್ಮನ ಹಾಡನ್ನು
ಮುದ್ದಿನ ಕಂದ ಮಲಗು ಕಂದ
ಅಮ್ಮನ ಹೆಗಲೇರಿ
ಮುತ್ತಿನ ಮಳೆಗೈಯುವೆನು ನಿನಗೆ
ಪ್ರೀತಿಯನು ತೋರಿ.
————
ವಿನೋದ್ ಕುಮಾರ್ ಆರ್ ವಿ

ಅದ್ಭುತ ಸರ್
TQ u