ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀನು ತಾಯಿ
ಬೇರು
ಅವಳು ಮಗಳು
ಚಿಗುರು

ನಿನ್ನ ಕನಸು
ನೆಲದ ಕಸುವು
ಮೇಲೆ ಅರಳಿತು
ಮೊಗ್ಗು ಹೂವು

ಬದುಕು ಕಾನನ
ಪಕ್ಷಿ ಇಂಚರ
ಬಸವ ಮಂತ್ರವು
ಬೆಳಗಿತು

ಅವ್ವ ಎನ್ನುವ
ಮುದ್ದು ಕೂಸು
ಬೆಳೆದು ದೈತ್ಯ
ಮರದ ನೆರಳು

ಹಡೆದ ಒಡಲು
ಪ್ರೀತಿ ಮಡಿಲು
ತುಂಬಿ ಉಕ್ಕಿತು
ಜೀವ ಕಡಲು

About The Author

6 thoughts on “ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರಕವಿತೆ ʼನೀನು ತಾಯಿʼ”

  1. ತಾಯಿ ಕನಸು,ಮಗಳು ನನಸು ಮಾಡಿರುವದು
    ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    ಸೂಪರ್ ಕವನ

  2. ವಿಜಯಲಕ್ಷ್ಮಿ ಹಂಗರಗಿ ಶಹಾಪುರ

    ಅತ್ಯಂತ ಅಪರೂಪದ ಸುಂದರ ಕವನ ಸರ್

  3. ತಾಯಿ ಮಗಳ ಬಾಂಧವ್ಯ, ತಾಯಿ ತಾನು ಕಂಡ ಕನಸನ್ನು ಮಗಳು ನನಸಾಗಿಸಿದ ಬಗೆ, ಅದರಿಂದ ತಾಯಿಗೆ ಆದ ಆನಂದದ ಅನುಭೂತಿ, ಧನ್ಯತಾ ಭಾವವನ್ನು ಹಿಡಿದಿಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ.

Leave a Reply

You cannot copy content of this page

Scroll to Top