ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದು ಬರೀ ಬರಹವಲ್ಲ ಜೀವನ

ಮೊದಲನೆಯದಾಗಿ ನಾವು ನಮ್ಮೊಳಗಿನ ಪ್ರೇಮವನ್ನು ಕಾಣಬೇಕು ಅನಂತರ ಎಲ್ಲರಲ್ಲೂ ಇರುವ ಪ್ರೇಮವನ್ನು ನೋಡಬೇಕು ಆಗ ಮಾತ್ರ ನಾವು ಪ್ರೇಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ನಿಜವಾದ ಪ್ರೇಮವು ಎಲ್ಲಿರುತ್ತದೆಯೋ ಅಲ್ಲಿ ತ್ಯಾಗ ಕೂಡ ಅವಶ್ಯವಾಗಿ ಇರ್ಲೇಬೇಕು ಎಲ್ಲಿ ತ್ಯಾಗ ವಿರುವುದಿಲ್ಲವೋ ಅಲ್ಲಿ ಪ್ರೇಮ ಅಡಗಿರಲು ಸಾಧ್ಯವೇ ಇಲ್ಲ ಹಾಗೆ ನಾವು ಪ್ರೇಮಕ್ಕಾಗಿ ಬೇಡುವುದು ಅವರ ಸಮಯಕ್ಕಾಗಿ ನಾವು ಕಾಯುವುದು ಬೇಡ ಒಬ್ಬ ವ್ಯಕ್ತಿಯು ನಮಗೆ ಪ್ರಾಮುಖ್ಯತೆಯನ್ನು ಕೊಡುವುದೇ ನಿಜ ಆದರೆ ಅವರು ತಮ್ಮ ಸಮಯವನ್ನು ನಮ್ಮೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ನನ್ನನ್ನು ಯಾರು ಪ್ರೀತಿಸುವುದಿಲ್ಲ ನನಗೆ ಸಮಯವನ್ನು ಕೊಡುತ್ತಿಲ್ಲ ಯಾರು ನನ್ನೊಂದಿಗೆ ಇರಲು ಬಯಸುವುದಿಲ್ಲ ಅಂತ ನಾವು ದುಃಖಿಸುವುದರ ಬದಲು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು ಹಾಗೆಯೇ ಬಿಟ್ಟು ಹೋದವರಿಗೆ ಬಿಳ್ಕೋಟ್ಟು ಪ್ರೀತಿಯಿಂದ ಬರುವವರಿಗೆ ಸ್ವಾಗತಿಸಿ ಹೃದಯದಲ್ಲಿ ಒಂದು ಸ್ಥಾನ ಕೊಡುವ ಮನಸ್ಥಿತಿಯನ್ನು ನಾವು ಹೊಂದಬೇಕು ಹೃದಯದಲ್ಲಿ ಪ್ರೇಮದ ಬೀಜವನ್ನು ಬಿತ್ತಿ ಅದರಿಂದ ಫಲವನ್ನು ಪಡೆಯಬೇಕೆ ಹೊರತು ಪ್ರೇಮದ ಕಿಡಿ, ಜ್ವಾಲೆಯನ್ನಲ್ಲ. ಪ್ರೀತಿಯೇ ಪ್ರೀತಿಗೆ ಸಮ. ನಿಜವಾದ ಪ್ರೀತಿಯಲ್ಲಿ ಕ್ಷಮೆ ಇದ್ದಲ್ಲಿ ಸಂಬಂಧ ಉಳಿಯುತ್ತದೆ ಪ್ರೇಮ ಬೆಳೆಯುತ್ತದೆ ಪ್ರೀತಯೇ ಪ್ರೀತಿಗೆ ಸಮ ಮತ್ತು ಸರಿ ಅಂತ ನಾವು ಒಂದು ಕ್ಷಣವಾದರೂ ಯೋಚಿಸಿದಾಗ ವಿಚ್ಛೇದನಗಳು ದೂರವಾಗುತ್ತವೆ ಮಗುವಾಗು ಇನ್ನೋಬರ ಹೃದಯಕೆ ನಗುವಾಗು ಮತ್ತೋಬ್ಬರ ಜೀವನಕೆ ಅಂತ ನಾನು ಒಂದು ಲೇಖನಿಯಲ್ಲಿ ಓದಿದ ನೆನಪು ನಮ್ಮನ್ನು ನಾವು ಪ್ರೀತಿಸುವುದರ ಮೂಲಕ ಪ್ರೀತಿಯೇ ಮಾನವ ಜೀವನದ ಸಾರ .ದೇವರು ಮನುಷ್ಯರಿಗೆ ವಿವಿಧ ರೀತಿಯ ಭಾವನೆಗಳನ್ನು ಉಡುಗೊರೆಯಾಗಿ ನೀಡಿದ್ದಾನೆ, ಅದನ್ನು ಅವರು ಜೀವನದ ವಿವಿಧ ಅಂಶಗಳನ್ನಾಗಿ ಪ್ರತಿಯೊಬ್ಬರಿಗೂ ಅನುಭವಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾನೆ ಒಬ್ಬ ವ್ಯಕ್ತಿಗೆ ಪ್ರೀತಿ ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ಜನರು ತಮ್ಮ ಜೀವನದಲ್ಲಿ ಹೊಸ ಎತ್ತರವನ್ನು ತಲುಪಲು ಮತ್ತು ಅವರ ಗುರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ.ಪ್ರೀತಿ ಮನಸ್ಸೆಂಬುದು ಮಾಯ ಮರ್ಕಟ ನನ್ನದು ತನ್ನದು ಗೊತ್ತಿಲ್ಲ ಪಾಪ ಪುಣ್ಯಗಳ ಅರಿವಿಲ್ಲ ಪ್ರೀತಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ಜೀವನವನ್ನೇ ಬದಲಾಯಿಸುವ ರೀತಿಯಲ್ಲಿ ಇರಬೇಕು ಹೊರತು ನಮ್ಮ ಜೀವವನ್ನೇ ನಾಶಪಡಿಸುವ ರೀತಿ ಅಲ್ಲ ನನ್ನ ಜೀವನದಲ್ಲಿ ಆಗಿದ್ದು ಇದೆ ಪ್ರೀತಿ ಅನ್ನೋ ವಿಷಯದಲ್ಲಿ ನಮ್ಮದೇ ಸ್ವತಂತ್ರ ಆಯ್ಕೆಯಾಗಿರುವಾಗ ಸರಿಯಾದ ವ್ಯಕ್ತಿಯನ್ನು ನಮ್ಮ ಬದುಕನ್ನು ಕಟ್ಟಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ ಬಣ್ಣದ ಮಾತುಗಳಿಗೆ ಬದುಕನ್ನು ಬಲಿ ಕೊಡದೆ ಮಾನವನ್ನು ತಕ್ಕಡಿಯಲ್ಲಿ ಅಳೆಯುವ ಜನರು ಕೂಡ ಇದ್ದಾರೆ‌ ಪ್ರೀತಿಯಲ್ಲಿ ಸಂಶಯ ಬೇಡ ಪ್ರೇಮವೇ ಸಾಕುಪ್ರೀತಿ ಎಲ್ಲವನ್ನು ಮೀರಿದ್ದು ಪ್ರೀತಿಗೆ ಸ್ವಾರ್ಥವಿಲ್ಲ ಅದೊಂದು ನಿಸ್ವಾರ್ಥವಾದ ಪ್ರೇಮ ನೀನು ಪ್ರೀತಿ ಮಾಡಿದರೆ ಮಾತ್ರ ನಾನು ನಿನ್ನ ಪ್ರೀತಿ ಮಾಡುತ್ತೇನೆ ಎಂಬ ಲೆಕ್ಕಾಚಾರ ಇರುವುದಿಲ್ಲ ಪ್ರೀತಿಯನ್ನು ನೀನು ಪಡೆದಿದ್ದರೂ ನಾನು ಕೊಡುತ್ತೇನೆ ಎಂಬ ಮನೋಭಾವನೆಯಲ್ಲಿ ಪ್ರತಿಯೊಬ್ಬರೂ ನಾವು ಪ್ರೀತಿಸಿದ ವ್ಯಕ್ತಿಯನ್ನು ಅಂತರಾಳದಿಂದ ಪ್ರೀತಿಸಬೇಕು
ಯಾರನ್ನೂ ತೀರ ಅತಿ ಅನ್ನುವಷ್ಟು ಪ್ರೀತಿ ಮಾಡಬೇಡಿ. ಯಾರು ಶಾಶ್ವತ ಅಲ್ಲ. ಜೀವನದಲ್ಲಿ ಬರುವ ಏರಿಳಿತಗಳನ್ನು ಸಹಿಸುವ ಮನಸ್ಥಿತಿ ಬೆಳೆಸಿಕೊಳ್ಳಿ. ತೀರ ಭಾವನಾತ್ಮಕ ವಾಗಿದ್ದರೆ, ಬದುಕಲು ಸಾಧ್ಯವಿಲ್ಲ. ನಿರೀಕ್ಷೆ ಮೀರಿ ಆಸೆಗಳನ್ನು ಇಟ್ಟುಕೊಂಡಾಗ ,ಚಿಂತನ ಮಂಥನದಿಂದ ಭಾವನೆಗಳಿಗೆ ತೊಡಕು ಉಂಟಾದಾಗ ಮನಸ್ಥಿತಿ ಆತ್ಮ ವಿಶ್ವಾಸ ವನ್ನು ಕಳೆದುಕೊಂಡು ಆತ್ಮಹತ್ಯೆಯಾದ ಉದಾ: ಕೂಡ ಇವೆ ಅದರಲ್ಲಿ ನಾನು ಒಬ್ಬಳು.
ಇನ್ನೊಬ್ಬರಿಗಾಗಿ ಜೀವವನ್ನು ಕೆಳೆದುಕೊಳ್ಳುವ ತಪ್ಪು ನಿರ್ಧಾರ ನಾನು ಕೂಡ ಮಾಡಿದ್ದೇನೆ ಬದುಕಿನ ಬಂಧಾನುಬಂಧಗಳ ಮರ್ಮದ ಸತ್ಯ ಕವಿತೆ.ಎಲ್ಲವುದಕ್ಕೆ ಆತ್ಮಹತ್ಯೆ ಒಂದೇ ದಾರಿಯಲ್ಲ
ಈಗ ನಡೆಯುತ್ತಿರುವುದನ್ನು ಒಪ್ಪಿಕೊಂಡು,ಹಿಂದೆ ನಡೆದಿದ್ದನ್ನು ಬಿಟ್ಟು ಹಾಕಿ ಮುಂದೆ ನಡೆಯುವುದರ ಮೇಲೆ ನಂಬಿಕೆ ಇಟ್ಟು ಮುಂದೆ ಬದುಕು ಬಂದಂತೆ ಸ್ವೀಕರಿಸಬೇಕು.
ತೀರಾ ಅಸಹ್ಯವೆನಿಸುವಷ್ಟುಯಾರನ್ನೂ ದ್ವೇಷ ಮಾಡಬಾರದುಹಾಗೆಯೇ ಅಂಗಲಾಚಿ ಬೇಡಿಕೊಳ್ಳುವಷ್ಟು ಯಾರನ್ನೂ
ಪ್ರೀತಿಸಬಾರದು‌‌ ಹೋಗೋರು ಇಂತದೆ ಕಾರಣ ಕ್ಕೆ ಬಿಟ್ಟು ಹೋಗುತ್ತಾರೆ ಅಂತ ಹೇಳ ಲಾಗದು ಯಾವುದೇ ವಸ್ತು, ವಿಷಯವನ್ನು ಅತಿಯಾಗಿ ಮಾಡಿದರೆ, ತೋರಿಸಿದರೆ ಅದರಿಂದ ಕೆಡುಕೇ ಉಂಟಾಗುವ ಸಂದರ್ಭ ಹೆಚ್ಚಾಗಿರುತ್ತದೆ. ಜೀವನದಲ್ಲಿ ಒಂದು ಸಲ ಆದ್ರೂ ಮೋಸ ಹೋಗು ಆಗ ಬದುಕು ಹೇಗೆ ಜೀವಿಸಬೇಕೆಂದು ಕಲಿಸಿಕೊಡುತ್ತದೆ ಅಂತ ಅತಿಯಾಗಿ ಸೇವಿಸಿದರೆ ಅಮೃತವೂ ವಿಷವಾಗಿ ಪರಿಣಮಿಸುತ್ತದೆ.ಹಾಗಾಗಿ ಎಲ್ಲವೂ ಮಿತಿಯಲ್ಲಿದ್ದರೆ ಚೆನ್ನಾಗಿರುತ್ತದೆ. ಯಾರನ್ನೂ ಅತಿಯಾಗಿ ಪ್ರೀತಿಸಿದರೆ ಕಾಳಜಿ ತೋರಿದರೆ ಆ ತಪ್ಪು ನಮ್ಮದೇ. ಅದಕ್ಕಾಗಿ ಕೊರಗಿ ಚಿಂತೆ ಮಾಡಿದರೆ ಆಗುವ ನಷ್ಟ ನಮಗೆ ಅಂತ.

ಮನ ಏವ ಮನುಷ್ಯಾಣಾಂ ಕಾರಣಂ ಬನ್ಧಮೋಕ್ಷಯೋಃ /
ಬನ್ಧಾಯ ವಿಷಯಾಸಙ್ಗೋ ಮುಕ್ತೈ‌ನಿರ್ವಿಷಯಂ ಮನಃ* //

ಅಂದ್ರೇ
“ಮನುಷ್ಯನ ಬಂಧನಕ್ಕೆ ಮನಸ್ಸೇ ಕಾರಣ,ಮೋಕ್ಷಕ್ಕೂ ಮನಸ್ಸೇ ಕಾರಣ.ಇಂದ್ರಿಯ ವಸ್ತುಗಳಲ್ಲಿ ಮುಳುಗಿದ ಮನಸ್ಸು ಬಂಧನಕ್ಕೆ ಕಾರಣ.ಇಂದ್ರಿಯ ವಸ್ತುಗಳಿಂದ ದೂರವಾದ ಮನಸ್ಸು ಮುಕ್ತಿಗೆ ಕಾರಣ.” ಅಂತ ಶ್ರೀಮದ್ಭಾಗವದ್ಗೀತೆ ಹೇಳುತ್ತೆ
ಯಾರು ಮನಸ್ಸನ್ನು ಗೆದ್ದಿದ್ದಾನೆ ಅವನಿಗೆ ಮನಸ್ಸು ಅತ್ಯಂತ ಒಳ್ಳೆಯ ಬಂಧುವಾಗುತ್ತದೆ ಆದರೆ ಹಾಗೆ ಮಾಡದಿರುವವನಿಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗುತ್ತದೆ.

About The Author

5 thoughts on “ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ”

  1. ಇದು ಒಂದು ಬರಹ ಅಲ್ಲ ಅಕ್ಕಾ ಇದು ಒಂದು ಅದ್ಭುತ ನುಡಿ.. ಯಾವದೇ ಪ್ರೇಮವಾಗಲಿ, ಸ್ನೇಹವಾಗಲಿ ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದೀರಿ.. ಧನ್ಯವಾದಗಳು ಅಕ್ಕಾ..

Leave a Reply

You cannot copy content of this page

Scroll to Top