ಕೆ.ಎಂ ಕಾವ್ಯ ಪ್ರಸಾದ್ ಕವಿತೆ-ನೀ ಇರುವೆ ನನ್ನ ಜೊತೆ.

ನೀ ಇರುವೆ ನನ್ನ ಜೊತೆಯಾಗಿ
ಈ ಸಂತೋಷಕೆ ನೀನೆ ನೆರಳಾಗಿ!
ನಿನ್ನ ತೋಳಲಿ ಅರಳಿದ ಮೊಗ್ಗಾಗಿ
ಚಿಟ್ಟೆಯಂತೆ ಹಾರಬೇಕು ಕನಸಾಗಿ!!

ಧರೆ ಇಳೆಯು ಇಲ್ಲಿ ಒಂದಾದಂತೆ
ಹರಿಯುವ ನದಿ ಸಾಗರ ಸೇರಿದಂತೆ!
ಗಲ್ಲಕ್ಕಿಟ್ಟ ಚುಕ್ಕಿ ನಿನ್ನ ನೋಡಿ ನಾಚಿದಂತೆ
ನಿನ್ನ ನನ್ನ ಸಂಬಂಧ ಗಟ್ಟಿಯಾದಂತೆ!!

ಮಾತಿನಲಿ ಹೇಳಲಾಗದ ಉತ್ತರ
ಒಳ ಮನಸ್ಸಿನ ತುಡಿತದ ಆತುರ!
ಹೃದಯದ ಬಾಗಿಲು ತಟ್ಟಲು ಕಾತುರ
ಭಾವನೆಗಳ ಜೊತೆಯಲ್ಲಿದೆ ಈ ಮಧುರ!!

ನಿನ್ನಿಂದಲೇ ಈ ಬಾಳು ಬೆಳದಿಂಗಳು
ಪೂರ್ಣಚಂದ್ರನಂತ ನಿನ್ನ ಕಣ್ಣುಗಳು!
ಕೆನ್ನೆಯ ಕೆಂಪು ಬಣ್ಣದ ಆ ರೇಖೆಗಳು
ಕತ್ತಲಲ್ಲಿ ಹೊಳೆಯುವ ನಗೆ ಮುಗುಳು!!


Leave a Reply

Back To Top