ಅವರವರ ಭಾಷೆ ಅವರವರಿಗೆ ಅರ್ಥವಾಗುವುದರಿಂದ ಮಾನವನನ್ನುಳಿದ ಇತರೆಲ್ಲ ಜೀವಿಗಳು ಮಾತಾಡುವುದಿಲ್ಲವೆಂಬ ಸಾಮಾನ್ಯ ಅಭಿಪ್ರಾಯ ನಮ್ಮದು. ಹಾಗೇನಿಲ್ಲ ಇತರ ಪ್ರಾಣಿ ಪಕ್ಷಿಗಳ ಧ್ವನಿ ಸಂಕೇತಗಳು ನಮಗೆ ಸ್ಪಷ್ಟವಾಗಿ ಕಂಡರೂ ಅದೇ ಅವುಗಳಿಗೆ ಒಂದು  ವ್ಯವಸ್ಥೆ ಎನಿಸಿರುತ್ತದೆ.

ಹೀಗೆ ಮಾತಾಡಲು ಧ್ವನಿಯನ್ನಂತೂ ಮೊದಲು ಹೊರಡಿಸಲೇಬೇಕು.  ಮೀನಿನಂತಹ ಜಲಚರಿಗಳೂ ಸಂಕೇತ ಬದ್ದ ಧ್ವನಿಯನ್ನುಂಟು ಮಾಡುತ್ತವೆ ಎಂಬುದನ್ನ ನಿರೂಪಿಸಿದ್ದು ಈಗ ವೈಜ್ಞಾನಿಕವಾಗಿ ದೃಢಪಟ್ಟಿದೆ.

ಕೆಲವು ಜಾತಿಯ ಗಂಡು ಮೀನುಗಳು ಹೆಣ್ಣನ್ನು ಲೈಂಗಿಕ ಆಕರ್ಷಣೆಗೆ ಒಳಪಡಿಸಲು ತಮ್ಮ ಚಲನಾಂಗಗಳ ಸ್ನಾಯು ಕಂಪನದಿಂದ ಶಬ್ದ ಹೊರಡಿಸುತ್ತವೆ. ಆ ಧ್ವನಿ ಕೆಲವೊಮ್ಮೆ ಚೀರಿದಂತೆಯೂ , ಕೂಗಿದಂತೆಯೂ ಇರುತ್ತದೆ. ಆ ಮೂಲಕ ಅವು ಉದ್ದೇಶಿಸಿತ ಸಂಪರ್ಕವನ್ನು ತಮ್ಮ ಇತರರೊಡನೆ ನೆರವೇರಿಸಿಕೊಳ್ಳುತ್ತವೆ. ಮಾತಿನ ಮಲ್ಲರಂತೆ ಇದ್ದು ಗಂಟಲು ಹರಿದುಕೊಳ್ಳುವ ಪರಿಗೆ ಹೋಗದೆ ಮಾತಾಡದ ಮೌನಿಗಳು ಪಿಸುಗುಟ್ಟಿ ಕೆಲಸ ನೆರವೇರಿಸಿಕೊಳ್ಳುವಂತೆಯೇ ಈ ಪಿಸುಮಾತಿನ ಮತ್ಸಿಗರು ಗುನುಗಾಡುತ್ತಿರಬಹುದು


Leave a Reply

Back To Top