
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗು ಮಾಡ ಬಂದವರಲ್ಲ
ಮನದ ಮೇಲೆ ಬಂದು ನಿಂತು ಜರೆದು ನುಡಿದು ಪಥವ ತೋರಬಲ್ಲಾತನೇ ಸಂಬಂಧಿ
ಹಾಗಲ್ಲದೆ ಅವರಿಚ್ಛೆಯ ನುಡಿದು ತನ್ನುದರವ ಹೊರೆವ ಬಚ್ಚಣಿಗಳ ಮೆಚ್ಚುವನೇ ಚೆನ್ನಮಲ್ಲಿಕಾರ್ಜುನ
ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗು ಮಾಡಿ ಬಂದವರಲ್ಲ
ಅಕ್ಕನವರ ಈ ವಚನ ಹಣದ ಬೆನ್ನು ಹತ್ತಿ ನಡೆಯುವವರ ಬಗ್ಗೆ ತಿಳಿಸಿಸಿರುವುದು ಎದ್ದು ಕಾಣುತ್ತದೆ.
ಶರಣರು ಕಾಯಕ ಜೀವಿಗಳು .ಇವರಿಗೆ ಆಸೆ ಇದೆ.ಆದರೆ ಅತಿ ಆಸೆ ಇಲ್ಲ .ನಾನು ದುಡಿಯಬೇಕು . ನನ್ನನ್ನು ನಂಬಿದವರನ್ನೂ ನನ್ನ ಜೊತೆಗೆ ಬದುಕಿಸುವುದು.ಎನ್ನುವ ತತ್ವ ಹೊಂದಿದವರು .
ನಾನು ಬದುಕುವುದರೊಂದಿಗೆ ಇತರರನ್ನು ಬದುಕಿಸುವುದೇ ನಿಜವಾದ ಧರ್ಮ.
ಎಂದು ನಂಬಿ ನಡೆಯುವ
ಕಾಯಕ ಜೀವಿಗಳು . ಸತ್ಯ ಶುದ್ಧ ವಾಗಿ ದುಡಿಯಬೇಕು ದುಡಿದ ಹಣದಲ್ಲಿ ಒಂದಿಷ್ಟು ಯಾವುದೇ ರೂಪದಲ್ಲಿ ದಾಸೋಹಕ್ಕೆ ವಿನಿಯೋಗಿಸುವ ವಿಶಾಲ ಮನೋಭಾವವನ್ನು ಹೊಂದಿದವರು .
ಶರಣರು ಹಣಕ್ಕೆ ಬೆಲೆ ಕೊಡದೇ ,ಗುಣಕ್ಕೆ , ವ್ಯಕ್ತಿತ್ವಕ್ಕೆ, ಕಾಯಕ ಕ್ಕೆ ಬೆಲೆ ಕೊಟ್ಟು ನಡೆದವರು .
ಹಣವನ್ನೇ ನಂಬಿ ಬಂದವರಿಗೆ .ಕಾಯಕ ಜೀವಿಗಳ ವ್ಯಕ್ತಿತ್ವ ಅರಿವಿಗೆ ಬಾರದು .ಅವರಿಗೆ ಹಣ ಒಂದೇ ಕಣ್ಣಿಗೆ ಕಾಣುವುದು .
ನೊಂದವರ .ಬಡವರ ಶೋಷಿತರ ಧ್ವನಿಗೆ ಧ್ವನಿಯಾಗದವರು ಶರಣ ತತ್ವಕ್ಕೆ ವಿರೋಧಿಗಳು .
ಅವರು ಬಂದುಗಳಾಗಿ ನಿಂತು ನಮ್ಮ ಕಷ್ಟಕ್ಕೆ ಹೆಜ್ಜೆ ಹಾಕಲಾರರು . ಅಕಸ್ಮಾತ್ ಹೆಜ್ಜೆ ಹಾಕಿದರೂ ಹಂಗಿಸುವ ಗುಣವನ್ನು ಹೊಂದಿದವರ ಹಂಗನ್ನು ಮುರಿದು ನಡೆಯುವವರೇ ನಿಜವಾದ ಶರಣರು .ಇವರಿಗೆ ಹಂಗಿಲ್ಲ ಬಿಮ್ಮಿಲ್ಲ.ನಿತ್ಯ ಕಾಯಕ ಜೀವಿಗಳು ಪರೋಪಕಾರಿಗಳು .ಪರರ ನೋವಿಗೆ ಸ್ಪಂದಿಸುವ ಧ್ವನಿ ಹೊಂದಿದವರೇ ನಮ್ಮ ಬಂದುಗಳಾಗಿ ನಿಲ್ಲುವರು .
ಮನದ ಮೇಲೆ ಬಂದು ನಿಂತು ಜರೆದು ನುಡಿದು ಪಥವ ತೋರಬಲ್ಲಾತನೆ ಸಂಬಂಧಿ
ಮನಸ್ಸಿಗೆ ತುಂಬಾ ನೋವು ಆದ್ರೂ ಆತ ಜರೆದು ನುಡಿಯುವ ನುಡಿಗಳು ಮನಕ್ಕೆ ನೋವು ತರಲಾರವು.ಏಕೆಂದರೆ ಅಲ್ಲಿ ಬದುಕಿನ ಸತ್ಯ ಇರುತ್ತದೆ.ಕಳಕಳಿ ,ಅನುಕಂಪ ಇರುತ್ತದೆ ಹೀಗಾಗಿ ಮನಕ್ಕೆ ಜರಿದು ನುಡಿಯುವ ನುಡಿಗಳು ನಮ್ಮ ಬದುಕಿನ ದಾರಿ ತೋರಿಸುವನೇ ನಿಜವಾದ ಸಂಬಂಧಿ .
ತನ್ನುದರವ ಹೊರೆವ ಬಚ್ಚಣಿಗಳ ಮೆಚ್ಚುವವನೇ ಚೆನ್ನಮಲ್ಲಿಕಾರ್ಜುನಾ
ಯಾರು ಮನದಲ್ಲಿ ಕಲ್ಮಶ ಇಟ್ಟುಕೊಂಡು ಬಾಹ್ಯವಾಗಿ ಮೆಚ್ಚುಗೆಯ ಮಾತುಗಳನ್ನು ಆಡಿ .ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವವನೋ ಆತ ನಿಜವಾದ ಸಂಬಂಧಿ ಆಗಿರಲಾರ . ಏಕೆಂದರೆ ಅವನು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಸೋಗು ಹಾಕಿ ದುಡಿಯುವನಾಗಿರುತ್ತಾನೆಯೇ ಹೊರತು ನಿರ್ಮಲ ಮನದಿಂದ ಅಲ್ಲ.ಆತನಲ್ಲಿ ಸ್ವಾರ್ಥ ತುಂಬಿಕೊಂಡಿರುತ್ತದೆ . ಇನ್ನೊಬ್ಬರ ಕಷ್ಟ ಆತನಿಗೆ ಅರಿವಿಗೆ ಬರಲಾರದು ಅಂತಹ ವ್ಯಕ್ತಿಯನ್ನು ನನ್ನ ಚೆನ್ನಮಲ್ಲಿಕಾರ್ಜುನಾ ಮೆಚ್ಚುವವನೇ ?
ಡಾ ಸಾವಿತ್ರಿ ಕಮಲಾಪೂರ

ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ