
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಸಂಬಂಧಗಳು ಗೋಡೆಯಾಚೆ..

ಹೌದಲ್ವಾ, ನಮಗೆಲ್ಲ ಸಂಬಂಧಿಕರು,ಸಂಬಂಧಗಳು ಎಲ್ಲಾ ಇದೆ.ಆ ಎಲ್ಲ ಸಂಬಂಧಗಳು ಈಗಿನ ಕಾಲಘಟ್ಟದಲ್ಲಿ ಹೇಗಿವೆ? ಎಂಬೆಲ್ಲ ವೃತ್ತಾಂತಗಳು ಒಂದು ಕ್ಷಣ ಕಣ್ಮುಂದೆ ಹಾದು ಹೋಗಲಿಕ್ಕೆ ಸಾಕು,ಯಪ್ಪಾ ಅನ್ನಿಸದೆ ಇರದು.ಟಿ.ವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಬಹುಶಃ ಅಥವಾ ಬಹುತೇಕ ಜನಮನದಲ್ಲಿ ಸ್ಥಿರವಾಗಿ ಉಳಿದು ಬಿಟ್ಟಿದೆ.ಧಾರಾವಾಹಿಯ ಪಾತ್ರಗಳು ಕಾಲ್ಪನಿಕ ಎಂದು ಮೊದಲೆ ತಿಳಿಸಿದ್ದರೂ,ನಮ್ಮ ಜನ ಅಲ್ಲಿಯ ಪಾತ್ರಗಳನ್ನು ತಮ್ಮ ನೈಜ ಜೀವನದಲ್ಲಿ ಅಳವಡಿಸಿಕೊಂಡಿದ್ದು ಇದೆ.ಒಳ್ಳೆಯ ಚಿಂತನೆಯಾದರೆ ಓಕೆ,ಆದ್ರೆ ನಕಾರಾತ್ಮಕ ಪರಿಣಾಮ ಬೀರುವ ಪಾತ್ರಗಳು ಪ್ರತಿ ಮನೆಯಲ್ಲಿ ಸೃಷ್ಟಿಯಾಗುತ್ತಿವೆ.”ಮನೆ ಒಂದು ಮೂರು ಬಾಗಿಲು” ಆಗುತ್ತಿದೆ.ಎಲ್ಲದ್ದಕ್ಕೂ “ರೀಲ್” ಗೀಳು ಇರುವುದಂತು ಸತ್ಯ.

ಇತ್ತಿತಲಾಗಿ’,ಮಹಿಳಾ ಖಳನಾಯಕಿ’ ಪಾತ್ರಗಳು ಹೆಚ್ಚಾಗುತ್ರುರುವುದು ಯಾಕಂತ ಗೊತ್ತಾಗುತ್ತಿಲ್ಲ? ಜಡೆ ಜಡೆ ಕೂಡಿದರೆ ಜಗಳ ಎಂಬ ಮಾತು ಪಾತ್ರದ ಸೃಷ್ಟಿಗೆ ಕಾರಣವಾಗಿದೆಯೋ ನಾ ಕಾಣೆ!. ಪ್ರತಿ ಪುರುಷನಿಗೆ ಎರಡು ಹೆಂಗಸರನ್ನು ,ಮಹಿಳೆಗೆ ಗಂಡಸರನ್ನು ಮತ್ತು ಅನೈತಿಕ ಸಂಬಂಧಗಳನ್ನು ವೈಭವಿಕರಿಸುವುದು ಸಮಾಜದ ‘ಸ್ವಾಸ್ಥ್ಯ’ದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬ ಕಲ್ಪನೆ ಕೂಡ ಇಲ್ಲದಂತೆ, ಎಗ್ಗಿಲ್ಲದಂತೆ ಸಾಗುತ್ತಿರುವುದಕ್ಕೆ ಎನೆನ್ನಬೇಕು?ಸಂಬಂಧ ಒಂದು ಕಡೆ ಗಟ್ಟಿಯಾದರೆ,ಇನ್ನೊಂದು ಕಡೆ ಮೌಲ್ಯ ಕಳೆದುಕೊಳ್ಳುತ್ತಿರುವುದು ಇದಕ್ಕೆಲ್ಲ ಕಾರಣ.ನಿಜ ಹಿಂದಿನ ಕಾಲದಲ್ಲಿ ಒಂದು ಪೋನ್ ಇದ್ದವ ಶ್ರೀಮಂತ. ಪೋನಿಲ್ಲದ ಕಾಲದಲ್ಲಿ ಪತ್ರಗಳು ಸಂಬಂಧವನ್ನು ಭದ್ರಪಡಿಸಿದ್ದವು.ಈಗ ಪೋನ್ ಬಂದು ಸಂಬಂಧವನ್ನು ಛಿದ್ರಗೊಳಿಸುವತ್ತ ದಾಪುಗಾಲು ಹಾಕುತ್ತಿದೆ.ಮೌಲ್ಯಯುತ ಬದುಕು ಕಂಡ ಅಜ್ಜ ಅಜ್ಜಿಯರ ಬದುಕು ಈಗ ದುಸ್ತರ.ಈಗಿನ ಅಜ್ಜಿಯರ ಬದುಕು ಧಾರಾವಾಹಿಯಂತೆ.ಸಮಯದಿಂದ ಸಮಯಕ್ಕೆ ಬದಲಾಗುತ್ತದೆ.ಮೊಮ್ಮಕ್ಕಳಿಗೆ ಕಥೆ,ಹಾಡು,ಸಂಸ್ಕೃತಿ ಹಂಚುವ ಕಾಯಕದಲ್ಲಿ ಅಜ್ಜ ಅಜ್ಜಿಯರು ಈಗ ೯೦% ಪ್ರತಿಶತ ಹಿಂದಿದ್ದಾರೆ.ಯಾಕೆಂದರೆ ಮೊಮ್ಮಕ್ಕಳು ಕೂಡ ಬ್ಯುಜಿನೆ!.
ಕುಟುಂಬದ ಮಹತ್ವ ಅರಿತವಗೆ ಮಾತ್ರ ಗೊತ್ತು….ನಮ್ಮದು ಪುಟ್ಟ ಕುಟುಂಬ,, ಅಪ್ಪ,ಅಮ್ಮ,ಮಗ,ಮಗಳು…ಬೆಳೆದು ದೊಡ್ಡದಾದ ಮಗಳು ಗಂಡನ ಮನೆಗೆ,ಮಗ ಮದುವೆಯಾಗಿ ತಂದೆ ತಾಯಿ ಜೊತೆ ಇರಬೇಕಾದ,ಸೊಸೆಗೆ ಮಗಳ ಸ್ಥಾನ. ಅವಳು ಮಗಳಾಗಿ ಬಿಟ್ಟರೆ ಉಳಿದೆಲ್ಲ ಸಂಬಂಧ ಸರಿಹೋಗಬಹುದು.ಆದರೆ ಮಗ,ಸೊಸೆ ತಂದೆ ತಾಯಿಯರ ನೆಮ್ಮದಿ ಕಿತ್ತುಕೊಂಡೆರೆ ವೃದ್ಧ ಹೆತ್ತವರು ಎಲ್ಲಿ ನೆಲೆಸಬೇಕು?.ಮಗಳು ಹೆತ್ತವರ ಕಾಪಾಡಿದರೆ,ಕುಟುಂಬದಲ್ಲಿ ಕಲಹ!.ಉಳಿದ ಚಿಕ್ಕಪ್ಪ ದೊಡ್ಡಪ್ಪ ಎಲ್ಲ ಕುಟುಂಬದವರು ಸುಖವಿದ್ದಾಗ ಎಲ್ಲರೂ ನೆಂಟರೆ,ಕಷ್ಟ ಕಾಲದಲ್ಲಿ ಯಾರು ಇಲ್ಲ.ತಿಂದುಂಡವರ ನಡುವೆ ಏಕಾಂಗಿ ಈ ಬದುಕು!.ಕಷ್ಟ ಕಾಲವೇ ಎಲ್ಲ ಸಂಬಂಧಗಳ ಮುಖವಾಡ ಕಳಚುವುದು.

ರಕ್ತ ಸಂಬಂಧ ಮಾತ್ರ ನಮ್ಮ ಕಾಯುವುದು!. ಎಂಬ ಮಾತು ಆಗಾಗ ಕೇಳಿಬರುತ್ತದೆ.ಕಾರಣ ಸಂಬಂಧ ಎಂಬ ಪದವನ್ನು ಸಾಮಾನ್ಯವಾಗಿ ಬಳಸುತ್ತೆವೆ.ಎಷ್ಟೋ ಸಂಬಂಧಗಳು ಸಾಮಾಜಿಕ ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ನಡುವೆ ಸಿಕ್ಕು ನರಕಯಾತನೆ ಕಂಡಿವೆ.ಅನೇಕ ಮಾರಣಾಂತಿಕ ಹತ್ಯೆ, ಕೊಲೆಯತ್ತ ತೆರೆದುಕೊಂಡಾಗ ಈ ಸಂಬಂಧ ಎಷ್ಟು ಶಾಶ್ವತ? ಎಂಬ ಪ್ರಶ್ನೆ ಮೂಡದಿರದು.ಯಾರು ಯಾರ ಮನೆಗೆ ಬರಲು ಅಷ್ಟು ಸುಲುಭವಾಗಿ ಒಪ್ಪಲಾರರು. ಯಾಕೆಂದರೆ ಸಂಬಂಧಿಕರು ಬಂದರೆ ಖುಷಿಪಡುವ ಕಾಲ ಒಂದಿತ್ತು!. ಆದ್ರೆ ಪರಿಸ್ಥಿತಿ ಬದಲಾಗಿದೆ.ಪೋನ್ ಮಾಡಿ ಒಪ್ಪಿಗೆ ಇದ್ದರೆ ಮಾತ್ರ ಆ ಸಂಬಂಧಿಕರಿಗೆ ಆಹ್ವಾನ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.ದಿಢೀರ್ ಅಂತ ನಾವು ಬ್ಯಾಗ ಹಿಡಿದು ಯಾವ ಸಂಬಂಧಿಕರ ಮನೆಗೆ ಏಕಾಏಕಿ ಹೋಗಿ ಹಾಗಿಲ್ಲ!.
ವಾರಗಟ್ಟಲೇ ಉಳಿಯುವ ಖಯಾಲಿಯಂತೂ ಮೊದಲೇ ಇಲ್ಲ.ಕಾಲಕ್ಕೆ ತಕ್ಕಂತೆ ನಾವು ಅಪ್ಡೇಟ್ ಆಗಬೇಕು.
ಈಗಿನ ಮಕ್ಕಳಿಗೆ ಯಾವ ಸಂಬಂಧದ ಬಗ್ಗೆ ಆಸಕ್ತಿ ಇಲ್ಲ.ಕಾರಣ ತಂದೆ ತಾಯಿಗೆ ಇಲ್ಲದ್ದು ಮಕ್ಕಳು ಅನ್ವಯಿಸಿಕೊಳ್ಳುವರೇ?. ಮೊಬೈಲ್ ಪ್ರಪಂಚದ ಮುಂದೆ ಯಾರಿದ್ದಾರೆ?. ಅಂಗೈಯಲ್ಲಿ ಇಡೀ ವಿಶ್ವವೇ ಅಡಗಿದೆ.ಹೀಗಾಗಿ,ಅತ್ತೆ,ಮಾವ,ಕಾಕಾ,ಕಾಕಿ,ಅಕ್ಕ ತಂಗಿ,ಅಣ್ಣ ತಮ್ಮ ಇವೆಲ್ಲ ಬಾಯಿಮಾತಿನ ಸಂಬಂಧವಾಗಿ ಉಳಿದಿದೆ.”ಸಕ್ಕರೆ ಇದ್ದಲ್ಲಿ ಇರುವೆ” ಎಂಬ ಮಾತಿನಂತೆ ಸಂಬಂಧಗಳು.ಯಾವಾಗ ನಮ್ಮ ನಮ್ಮ ನಡುವೆ ಬಿರುಕುಗಳು ಬೆಳೆಯಲಾರಂಭಿಸಿದಾಗ…ಸಂಬಂಧಗಳು ಗೋಡೆಯಾಚೆ ನಿಲ್ಲದೆ ಮತ್ತೇನು?. ಯಾವಾಗ ನಮ್ಮೊಳಗಿನ ಚಿತ್ತಗಳು ಬಣ್ಣ ಹಚ್ಚಲು ಶುರುಮಾಡಿದವು ಎಂದ ಮೇಲೆ ಇನ್ನೇನು ಉಳಿಯಿತು?

ಒಟ್ಟಾರೆಯಾಗಿ ಹೇಳುವುದಾದರೆ, ಸಂಬಂಧಗಳು ಹಳಸುವ ಮುನ್ನ ಎಚ್ಚೆತ್ತುಕೊಳ್ಳಬೇಕು.ಸಾಮರಸ್ಯವಿಲ್ಲದ ಸಂಬಂಧಗಳಿಂದ ದೂರ ಸರಿಯಬೇಕು.ಅತಿ ಕಾಡುವ ಸಂಬಂಧದಿಂದ ತಟಸ್ಥ ಮನೋಭಾವ ಸೃಜಿಸಬೇಕು.ಎಲ್ಲ ಸಂಬಂಧದ ಆಳಗಳು ಬಲಿಷ್ಠವಾಗಿರದು. ಮೇಲ್ನೋಟಕ್ಕೆ ಆಡಂಬರದ ಲೇಪವಿದ್ದರೂ,ಒಳಗೆ ಪೊಳ್ಳು ಎಂಬ ಸತ್ಯ ಅರಿವಾಗುವುದು ಆಪತ್ತ್ಕಾಲದಲ್ಲಿ!.ಹೀಗಾಗಿ ಯಾವುದೇ ಸಂಬಂಧಗಳನ್ನು ವೈಭವಿಕರಿಸದೆ ಸ್ಥಿರವಾಗಿ ನಿತ್ತಿಗೂ ಈಗಿನ ಸಮಯದಲ್ಲಿ ಬೆಲೆ ಕಂಡುಕೊಳ್ಳುವುದು ಹರಸಾಹಸವೇ ದೋಷಾರೋಪಣೆಯಲ್ಲಿಯೇ ಜೀವನ ಅಂತ್ಯವಾಗುತ್ತಿರುವುದು ಒಬ್ಬರ ಮುಖ ಒಬ್ಬರು ನೋಡಿಕೊಳ್ಳದಿರುವುದು ಮೂರನೆ ವ್ಯಕ್ತಿಯ ಪ್ರವೇಶದಿಂದ..ಸಂಬಂಧದಲ್ಲಿ ಹುಳಿ ಹಿಂಡುವವರ ನಡುವೆ ಬದುಕಿ ತೊರಿಸುವ ಧೈರ್ಯ ಮಾಡಬೇಕು..ಸಂಬಂಧಗಳು ಗೋಡೆಯಾಚೆ ಸ್ಥಿರವಾಗುತ್ತಿರುವುದು…ಸಮಾಜ ಇನ್ನೊಂದು ಸ್ಥಿತಿಗೆ ತೆರೆದುಜೊಳ್ಳುತ್ತಿದೆಯಂತನೇ,.ಹೀಗಾಗಿ ನಮ್ಮ ಭಾವನೆಗಳು ನಶ್ವರದ ಬದುಕಿನ ಮೇಲೆ ಪ್ರಭಾವ ಬೀರದಂತೆ ಸಂಬಂಧಗಳು ಸೌಹಾರ್ದ ರೀತಿಯಲ್ಲಿ ಒಗ್ಗೂಡುವಂತೆ ಪ್ರೇರೆಪಿಸಬೇಕಿದೆ.ಒಗ್ಗಿದರೆ ಒಳ್ಳೆಯದು..ಇಲ್ಲವಾದಲ್ಲಿ ಸಮುದ್ರ ಮಂಥನ ದತ್ತ ಪ್ರವೃತ್ತಿ ಬೆಳೆಸಲು ಇಳೆ ಮರು ಸೃಷ್ಟಿಯಾಗಬೇಕು ಅಷ್ಟೇ….
ಶಿವಲೀಲಾ ಶಂಕರ್

ಈಗಿನ ಸಂಬಂಧಗಳೆ ಹಾಗೆ .ಅರ್ಥವಿಲ್ಲದ ಸಂಬಂದಗಳಾಗಿವೆ.ಎಲ್ಲವೂ ಇದ್ದು ಇಲ್ಲದಂತಾಗಿದೆ ಈಗಿನ ಜೀವನ.
ಬರವಣಿಗೆ ಸುಂದರವಾಗಿದೆ
ಅತ್ಯಂತ ಸೂಕ್ಷ್ಮ ಮನ ಮುಟ್ಟುವ ಲೇಖನ. ಸಂಬಂಧದ ಮಜಲುಗಳು ಮನಸ್ಸಿನ ಭಾವಗಳು. ಅಧ್ಭುತ ರೀ.
ಮಾಧ್ಯಮಗಳು ಸೃಷ್ಟಿಸುವ ಅಸಭ್ಯತೆಯನ್ನು ಎಳೆ ಎಳೆಯಾಗಿ ಬಿಚ್ಚಟ್ಟಿದ್ದೀರಿ. ಅಭಿನಂದನೆಗಳು.
Dr.ವಿಜಯಕುಮಾರ್ ತುಮಕೂರು
ಒಳ್ಳೆಯ ವಿಚಾರಧಾರೆ ಇರುವ ಲೇಖನ ಶಿವಲೀಲಾ ಅವರಿಗೆ ಅಭಿನಂದನೆಗಳು