“ಮಕ್ಕಳಿರಲವ್ವ ಮನೆತುಂಬ” ಎಂಬ ಮಾತಿದೆ. ಮಕ್ಕಳು ದೇವ ಲೋಕದ ಪುಷ್ಪಗಳಿದ್ದಂತೆಎಂಬೆಲ್ಲ ಮಾತುಗಳು ಕೇಳಲು ತುಂಬಾ ಸಂತೋಷ. ಆ ಮಕ್ಕಳ ಭವಿತವ್ಯವನ್ನು ಅದೂ ಈ ಸ್ಪರ್ಧಾತ್ಮಕ ಯುಗದಲ್ಲಿ ರೂಪಿಸುವ ಪಾಲಕರ ಮುಂದಾಲೋಚನೆ ನಿಜಕ್ಕೂ ಶ್ಲಾಘನೀಯ. ಮಕ್ಕಳು ಶಿಕ್ಷಣ ಪಡೆಯುವಾಗ  ಪ್ಲಕರಾದ ನಾವು ಬರೀ ಅಂಕಗಳಿಕೆಗೆ ಅವರನ್ನು ತಯಾರು ಮಾಡುತ್ತೆವೆಯೇ ವಿನಃ ಆ ಮಗು ನಿಜ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಬಾಳಲು ಆತ್ಮವಿಶ್ವಾಸ ಬೆಳೆಸುತ್ತಿಲ್ಲ.
“ನೀನು 10ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಾಸಾದರೆ ಹೊಸ ಮೊಬೈಲ್, ಮೋಟಾರ್ ಸೈಕಲ್ ಕೊಡಿಸುವೆ, ಅದೇ ಆ ಪಕ್ಕದ ಮನೆಯ ವಿನಯನು ನಿನ್ನ ತರಗತಿ ಅವನಿಗಿಂತ ಹೆಚ್ಚು ಅಂಕಪಡೆದರೆ ನೀನು ಬೇಡಿದ್ದನ್ನು ಕೊಡಿಸುವೆ” ಎಂದು ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸುವ ಪಾಲಕರ ನಡೆಗೆ ಏನನ್ನೋಣ?

ಅವರವರ ಬುದ್ಧಿಮಟ್ಟಕ್ಕೆ ತಕ್ಕಂತೆ  ಮಕ್ಕಳು ಕಲಿಯುತ್ತಾರೆ. ಅದನ್ನು ಬಿಟ್ಟು ತನ್ನ ಪ್ರತಿಷ್ಠೆಗಾಗಿ ಮಕ್ಕಳ ಮೇಲೆ ಪ್ರಭಾವ ಬೀರುವ, ಒತ್ತಡ ಹೇರುವವರು ಕ್ಷಣಿಕತೆಗೆ ಬೆಲೆ  ಕೊಡದೇ ಶಾಶ್ವತವಾದ ಕಲಿಕಾ ಪ್ರಗತಿಯೆಡೆಗೆ ನಿಗಾ ವಹಿಸಬೇಕಿದೆ.

ಪ್ರತಿ ದಿನ ಪತ್ರಿಕೆಯಲ್ಲಿ ಒಂದಲ್ಲಾ ಒಂದುರೀತಿಯ ಮಕ್ಕಳ ಆತ್ಮಹತ್ಯೆಯ ಮಾರಣಹೋಮ ಮನವನ್ನು ಜಗವನ್ನು ಬಿಗಡಾಯಿಸುತ್ತದೆ.

ಇತ್ತೀಚಿನ ಪತ್ರಿಕೆಯಲ್ಲಿ ಓದಿದ ಸುದ್ದಿಯ ನೆನಪು ಓದಿ ಮನಸ್ಸಿಗೆ ತುಂಬಾ ತುಂಬಾ ಖೇದವಾಯಿತು. ತಂದೆ ಒಂದು ಖಾಸಗಿ ಸಂಸ್ಥೆಯ ಉದ್ಯೋಗಿ, ಎರಡು ಮಕ್ಕಳು ” ಬೆಚ್ಚನಅಮ್ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ” ಎಂಬಂತೆ ಚಿಕ್ಕ ಚೊಕ್ಕ ಸಂಸಾರ ಸುಖಕೆ ಆಧಾರ ಎಂಬಂತೆ ಇತ್ತು. ಇದ್ದಕಿದ್ದಂತೆ ಸ್ಪರ್ಧಾತ್ಮಕ ಯುಗದಲಿ ತನ್ನ ಮಕ್ಕಳ ಭವಿಷ್ಯವನ್ನು ನೆನೆದು ಮೇಲಿಂದ ಮೇಲೆ ಮಕ್ಕಳಿಗೆ ಒತ್ತಡ ಹಾಕುತ್ತಿದ್ದರು. ಕಲಿಕೆಯಲ್ಲಿ ತಾನು ಬಯಸಿದಂತೆ ಮಕ್ಕಳು ಪ್ರಯತ್ನ ಮಾಡುತ್ತಿಲ್ಲವೆಂದು ತಿಳಿದು ಆದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲಿ ಹೆಂಡತಿ  ಮನೆಯಲ್ಲಿರದ ವೇಳೆಯಲ್ಲಿ ಆ ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾದ ನೈಜ ಘಟನೆ ಪಾಲಕರ ಮನದ ಅತೀವ ಒತ್ತಡದ ವಿಕೃತಿಯನ್ನು ತಿಳಿಸುತ್ತದೆ.  ಒಮ್ಮೆಲೇ ಬೆಟ್ಟ ಹತ್ತಲು ಸಾಧ್ಯವಿಲ್ಲ. ಅದರಂತೆ ಮಕ್ಕಳು ಹೆಚ್ಚು ಅಂಕಗಳನ್ನು ಪಡೆಯದೇ ಇದ್ದುದಕೆ ಕಾರಣ ತಿಳಿದು ಅವರನ್ನು ಇನ್ನೂ ಹೆಚ್ಚು ಅಂಕಗಳನ್ನು ಪಡೆಯುವಂತೆ ಮಾಡಬಹುದಿತ್ತು.ಮಕ್ಕಳಿಗೆ  ಮನೆಯಲ್ಲಿ ಆರೋಗ್ಯಕರ ಹವ್ಯಾಸಗಳ ಜೊತೆಗೆ ಅಧ್ಯನಕ್ಕಾಗಿ ಸೂಕ್ತ ವೇಳಾಪತ್ರಿಕೆನ್ನು ರಚಿಸಿ ಪ್ರೀತಿಯಿಂದ  ತಿಳಿ ಹೇಳಬಹುದಿತ್ತಲ್ಲವೇ?ಹೀಗೆ ಸಾವಿನಲ್ಲಿ ಕೊನೆಯಾಗುವಂತ ದುರಂತದ ಪ್ರಸಂಗ ಬರುತ್ತಿರಲಿಲ್ಲ.

“ಅಮ್ಮಾ! ಪಕ್ಕದ ಮನೆ ನಿಧಿಗೆ ಅವರ ತಂದೆ ಅವಳ ಜನ್ಮದಿನಾಚಲಣೆಗೆ ಒಂದು ಸೈಕಲ್, ಒಂದು ಫ್ರಾಕ್ ಹಾಗೆ ಒಂದು ವಾಚನ್ನುಕೊಡಿಸಿದ್ದಾರೆ. ಆದರೆ ನೀವು ಬರೀ ಒಂದು ಫ್ರಾಕ್ ಹಾಗೂ ಸ್ನೇಹಿತರಿಗೆ ಹಂಚಲು ಬರೀ  ಒಂದು ಚಾಕಲೇಟ್ ಪ್ಯಾಕೇಟ ಕೊಡ್ತಿರಾ.. ಮುಂದಿನ ತಿಂಗಳು ನನ್ನ ಜನುಮದಿನ ಇದೆ ಅದಕ್ಕೆ ನೆನಪಿಸಿದೆ. ಈ ಸಲ ನನಗೆ ಸೈಕಲ್ ಬೇಕು ಜೊತೆಗೆ ನನ್ನ ಸ್ನೇಹಿತ ಸ್ನೇಹಿತೆಯರಿಗೆಲ್ಲ ಪಾರ್ಟಿ ಬೇಕು” ಎಂದಾಗ ತಾಯಿ”ನಿಮ್ಮ ತಂದೆಗೆ ಬರುವ ಕಡಿಮೆ ಸಂಬಳ ಊಟಕ್ಕೆ ಕಡಿಮೆ ಇಲ್ಲದ ಆದರೂ ಮುಂದಿನ ಶಿಕ್ಷಣಕ್ಕೆ ಅವಶ್ಯವಿರುವುದರಿಂದ ಈಗ ಉಳಿಸಿದರೆ ಮುಂದೆ  ನಿನ್ನ ನಿನ್ನ ತಮ್ಮನ ಭವಿಷ್ಯಕೆ ಒಳ್ಳೇದು  ಎಂದಾಗ ಏಳನೇ ತರಗತಿಯ ಅನ್ವಿತಾಳಿಗೆ ಖುಷಿಯಾಗಿ ಅಮ್ಮ ನೀ ಹೇಳಿದಂತಾಗಲಿ  ಎಂದು ಆಡಲಿಕೆ ತನ್ನ ವಠಾರದ ಮಕ್ಕಳೊಂದಿಗೆ ಹೋದಳು. ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಮುದ್ದಿಸಿ ತಿಳಿಹೇಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಕ್ಕಳ ಭವಿತವ್ಯದ ನಿರ್ಮಾಣದಲಿ ತಃದೆತಾಯಿಯರಿಬ್ಬರದು ಅತೀ ಮಹತ್ವದ ಪಾತ್ರವಿದೆ. ಕುಟುಂಬದ ಆದಾಯ ಮಿತವ್ಯಯದಲಿದ್ದರೆ ಅದು ಮಕ್ಕಳ ಮೇಲೆ ಪ್ರಭಾವ ಬೀರುವದು. ಆದ್ದರಿಂದ ಕುಟುಂಬದಲ್ಲಿ ದಾಂಪತ್ಯ ಎನ್ನುವದು ಕವಿ ದ. ರಾ. ಬೇಂದ್ರೆಯವರ

“ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು”


ಎಂಬಂತೆ ಸಾಹಿತ್ಯಗಾರುಡಿಗನ ಸೃಷ್ಟಿ ಯಲ್ಲಿ ಹೆಣ್ಣಿನ ಪಾತ್ರವನ್ನೇ ಪರಕಾಯ ಪ್ರವೇಶದಂತೆ ಮಾಡಿದಂತೆ ಅನುಕೂಲಸ್ಥ ಗೆಳತಿಯೊಬ್ಬಳಿಗೆ ತನ್ನ ಬದುಕಿನ ಪರಿಚಯ ಮಾಡುವ ಗೃಹಿಣಿ ಎಲ್ಲದಕೂ ತಮ್ಮ ಒಲವನ್ನೇ ಬಳಸುವ ಪರಿ ಅದ್ಭುತವಾಗಿದೆ. ಆದ್ದರಿಂದ “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬಂತೆ  ಮಕ್ಕಳಿಗೆ ಬದುಕಿನ ಪಾಠವನ್ನು ಅರ್ಥೈಸಬೇಕಾದ  ಅನಿವಾರ್ಯತೆ ಬದುಕಿನ ಪ್ರಣತಿಗಿದೆ. ಇಲ್ಲವಾದಲೆ ಆನ್ಲೈನ್ ಶಾಪಿಂಗ್ ನಂತೆ  ಪೆನ್ನಿನಿಂದ ಹಾಕುವ ಶೂವರೆಗೂ ಬಿಂದಾಸಾಗಿ ಆರ್ಡರ್ ಮಾಡ್ತಾ ವಿಲಾಸ ಜೀವನಕೆ ಮಾರು ಹೋಗುವ ಸಂಭವ ಇದೆ. ಇತಿಮಿತಿಗಳ ಅರಿತು  ಅವಶ್ಯಕತೆಯ ಅಡಿಯಲ್ಲಿ ಅನಿವಾರ್ಯತೆಯೆಡೆ ಸಾಗುವದೇ ಜೀವನವಾಗಿದೆ  ಅಲ್ಲವೇ?

One thought on “

Leave a Reply

Back To Top