ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಮಗು

ಎದುರಿನೆಲ್ಲರ ಮೆಚ್ಚಿಸಲು
ಒಲ್ಲದವರ ಕಿಚ್ಚು ಹೆಚ್ಚಿಸಲು

ದಿನವೂ ತೇಯಬೇಕಿಲ್ಲ
ನಿನ್ನೊಳಗೆ ನೀನಿರದೆ ಸಾಯಬೇಕಿಲ್ಲ

ಹೂ ನಗು ಹುಡುಕಾಟ ಹುಡುಗಾಟಗಳು
ಕನಲಿ ಹೋಗದಿರಲಿ ಕಾಲದಲಿ ಲೀನವಾಗಿ

ಜೀವನದ ಆಟದಲ್ಲಿ ಸ್ಪರ್ಧೆ ಇಣುಕದಿರಲಿ ಆಜು ಬಾಜು
ಬದುಕಿನೋಟದಲಿ ತಲೆದೋರಿದರೂ ಏರಿಳಿತದ ಗೋಜು

ಸಕಲವೂ ನಿಲುಕಬೇಕೆನ್ನುವ ಕ್ಷುಲ್ಲಕ ಬಯಕೆ
ಮೌಲ್ಯವ ಕಳೆದುಕೊಂಡಾಗದಿರಲಿ ಕುಣಿಕೆ

ಅಪರಿಚಿತ ನೋವಿಗೆ ಕೊರಗು
ಪರಿಚಿತ ಸಣ್ಣತನಗಳಿಗೆ ಮರುಗು

ಎದುರಿಗಿದ್ದವರಿಗೊಂದು ಮುಗುಳ್ನಗು
ಗೆದ್ದವರಿಗೊಂದು ಚಪ್ಪಾಳೆ ಮೆರಗು
ನೀನಾಗಿ ಬಿಡು ಮುಗ್ಧ ಮನಸ್ಸಿನ ಮಗು

————————–

Leave a Reply

Back To Top