ಜೀವ ಜಗತ್ತಿಂದ ಕಲಿಯುವುದು ತುಂಬಾನೆ ಇದೆ.ನಾವು ಹಾಕಿಕೊಂಡ ಅಥವಾ ನಮ್ಮ ಅರಿವಿಗೆ ಬಂದಷ್ಟನ್ನು ಮಾತ್ರ ಸ್ವೀಕರಿಸುತ್ತೆವೆ.ವಿಶಾಲ ಸಾಗರದ ಆಳಕ್ಕೆ ಇಳಿವ ಹುರುಪು ನಮಗಿಲ್ಲ.ಅದನ್ನೇ ಚಾಲೆಂಜ್ ಆಗಿ ತಗೊಂಡು ಸಂಶೋಧನೆ ಮಾಡುವ ಅನೇಕ ಮಹಾನುಭಾವರನ್ನು ನೆನೆದಾಗೆಲ್ಲ ನಮ್ಮ ಜ್ಞಾನ ಹಾಗೂ ವಿಜ್ಞಾನ ಸಮ್ಮಿಲನ ಎಷ್ಟು ವಿಸ್ತಾರ ಎಂಬುದು ಅರಿವಾಗುತ್ತದೆ.ಭೂಮಿ ಭಾರವಾಗುತ್ತಿದೆ!. ಅದರ ನೈಜತೆ ಕೃತ್ರಿಮತೆಗೆ ಬದಲಾಗುತ್ತಿರುವುದು ಯಾವುದರ ಸಂಕೇತ?.ಇತ್ತ ಗಿಡಮರಗಳ ಜಾಗದಲ್ಲಿ ಮುಗಿಲು ಮುಟ್ಟುವ ಕಟ್ಟಡಗಳು… ಗುಡ್ಡಗಾಡುಗಳು ನಿಧಾನವಾಗಿ ಒತ್ತುವರಿಯಾಗಿ ಭೂಮಿಯ ಸಂತಲುನ ತತ್ತರಿಸುವ ಸ್ಥಿತಿಗೆ ಬರುತ್ತಿರುವುದು‌ ಗೊತ್ತಿರುವ ವಿಷಯವೇ.ಆದರೂ ನಾವು ಬದುಕುವ ಅವಕಾಶದಿಂದ ವಂಚಿತರಾಗಿಲ್ಲ.ಕಾರಣ ಎಷ್ಟು ಬಲಿಷ್ಠವಾದರೂ ನಮ್ಮೊಳಗಿನ ಅರಿವು ಮಾತ್ರ ನೀರಿನ ಆಕಾರ ಪಡದೆಯಿಲ್ಲ.”ಜೀವ ಜಲ” ಎಷ್ಟು ಮುಖ್ಯ ಎಂಬುದು,ಉಸಿರು ಮನುಷ್ಯನಿಗೆ ಯಾಕೆ ಬೇಕು ಅನ್ನುವಷ್ಟು ತಿಳಿಯದಿರುವ ಮುಗ್ದರು.

ಅಧರ್ಮ ಅತಿಯಾದಾಗ ನಿಸರ್ಗವೇ ದೇವರಾಗಿ ಫಲಿತಾಂಶ ಕೊಡುತ್ತೆ…..ಮಯನ್ಮಾರ್ ಮತ್ತು ಥೈಲ್ಯಾಂಡ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕಟ್ಟಡಗಳು, ಸೇತುವೆಗಳು,ಆಣೆಕಟ್ಟುಗಳು ನಾಶವಾಗಿದ್ದನ್ನು ನಾವೆಲ್ಲ ಟಿ.ವಿಗಳಲ್ಲಿ ಕಂಡಾಗ ಜೀವ ಬಾಯಿಗೆ ಬಂದಿತ್ತು.ಜೋರಾದ ಗಾಳಿ,ಮಳೆಗೆ ಅಡಿಕೆ,ತೆಂಗು,ಬಾಳೆಗಿಡಗಳು ನೆಲಕ್ಕಪ್ಪಳಿಸಿದ್ದು  ಕಂಡಾಗಂತೂ ನಾವು ಎಷ್ಟು ಸುರಕ್ಷಿತರು ಪ್ರಕೃತಿಯ ಮುಂದೆ! ಅನ್ನಿಸದಿರದು!.ಸುನಾಮಿ ಅಪ್ಪಳಿಸಿದಾಗ ಬದುಕು ಕೊಚ್ಚಿಕೊಂಡು ಹೋಗುವ ನಶ್ವರ ಉಸಿರಿಗೆ ಸ್ವಾರ್ಥದ ಹುಚ್ಚು ನೆಲಕೆಚ್ಚಿಸದೆ ಬಿಟ್ಟಿತಾ?..ನೋಡಿ,ನೋಡಿ…ಮತ್ತೆ ಮರೆಯುವ ನಾವುಗಳು.. ಇನ್ನೊಂದು ಘಟನೆ ಘಟಿಸಿದಾಗ ಮಾತ್ರ ಮತ್ತೆ ಎಚ್ಚೆತ್ತುಕೊಳ್ಳುವುದು..ಕಾರಣ  ಆ ಘಟನೆಯಲ್ಲಿ ಮುಖ್ಯ ಪಾತ್ರ ಆಗದಿರುವುದೇ ಇದಕ್ಕೆಲ್ಲ ಕಾರಣ…ನಮ್ಮ  ವೇಗದ ಓಟದಲ್ಲಿ ಎಷ್ಟು ಗಳಿಸಿದಿವಿ,ಎಷ್ಟು ಕಳಕೊಂಡಿದ್ದಿವಿ ಎಂಬುದು ಪ್ರಕೃತಿಯ ನಿರ್ಧಾರ!.

ಕಲಿಯುಗದ ಕೊನೆಯಲ್ಲಿ ಪ್ರಾಣಿ ಪಕ್ಷಿಗಳು ಮಾತಾಡುತ್ತವೆ ಅಂತ ಹೇಳಿದ್ದು  ಕೇಳಿದ್ದೆ.ಕಲ್ಲಿನ ಕೋಳಿಗೆ ಜೀವ ಬರುತ್ತೆ….ಹೀಗೆ ಏನೇನೂ!.
ಆದ್ರೆ,”ಕಾಗೆ ಮಾತಾಡುತ್ತಿರುವುದು ಆಶ್ಚರ್ಯಕರ ಸಂಗತಿ”. ಮರಾಠಿ ಭಾಷೆ….ಇನ್ನೂ ಹಸುಗಳು,ನಾಯಿಗಳು,ಬೆಕ್ಕುಗಳು…. ಹೀಗೆ ಎಲ್ಲ ಪ್ರಾಣಿ ಪಕ್ಷಿಗಳು ಮಾತಾಡಿದರೆ ಆಶ್ಚರ್ಯ ಪಡಬೇಕಿಲ್ಲ…”ಗಿಳಿ” ಮಾತಾಡೋದು ಗೊತ್ತಿರುವ ವಿಷಯ!. ಯಾವುದನ್ನು ನಂಬಬೇಕು? ನಿಜವಾಗಲೂ ಕಾಗೆ ರೋಬೋಟ್ ಅಲ್ಲ ತಾನೆ?.. ಅಥವಾ ಯಾವ ತಂತ್ರಜ್ಞಾನ ಬಳಸಿರಬಹುದು? ವಿಸ್ಮಯ ಜಗತ್ತು ಇದು..ಯಾವಾಗ ಏನು ಉಧ್ಭವವಾಗುತ್ತದೆ ಎಂಬುದು ಅರ್ಥವಾಗದು.ವಿಜ್ಞಾನಿಗಳಿಗೆ ಇದೊಂದು ಸವಾಲು..ಇದರ ಉತ್ತರ ಕಂಡುಕೊಳ್ಳಬೇಕಿದೆ.ಇಂತಹ ಅನೇಕ ವಿಸ್ಮಯದ ತವರೂರು ಈ ಪ್ರಕೃತಿ!.

ಇಷ್ಟೆಲ್ಲ ಆಘಾತಕಾರಿ‌ ಘಟನೆ ನಡೆಯುತ್ತಿದ್ದರೂ,ಮನುಷ್ಯನ ಕೆಲವೊಂದು ಗುಣಗಳು ಮಾತ್ರ ಬದಲಾಗದಿರುವುದು..ದುರಂತ!. ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಇದೊಂದು ಯಾವ ರೀತಿ ಬೆಳವಣಿಗೆ ಅನ್ನಬೇಕು? ವಯಸ್ಸಿನ ಅಂತರವಿಲ್ಲ ಹುಟ್ಟಿದ ಮಗುವಿನಿಂದ ಸಾಯವ ವೃದ್ದೆಯ ತನಕ ಸುರಕ್ಷಿತ ವಿಲ್ಲ ಹಣ್ಣಿನ ಬದುಕು ಎಂಬಂತಾಗಿದೆ!. ಹೆಣ್ಣು ಒಂದೆಡೆಗೆ ಸಬಲೆಯ ಪಟ್ಟ ಧರಿಸುತ್ತಿರುವ ಹಿಂದೆ ಅಬಲೆ,ಅಸುರಕ್ಷಿತೆಯೆಂಬ ಸಂದೇಶ ರವಾನೆಯಾಗುತ್ತಿರುವುದು ಸದ್ದಿಲ್ಲದೆ ಹೆಣ್ಣು ಹುಟ್ಟಿಗೆ ಹೆಮ್ಮೆ ಪಡುವ ಬದಲು ಕಣ್ಣೀರು ಹಾಕು ಸ್ಥಿತಿ ಪಾಲಕರ ಪಾಲಿಗೆ ಬರುವ ಮುನ್ಸೂಚನೆ ಸಮಾಜ ಇಂಡೈರೆಟ್ಕಾಗಿ ನೀಡುತ್ತಿದೆಯಾ? ಅಪರಾಧಿಗಳಿಗೆ ಶಿಕ್ಷೆ ಭಯಾನಕವಾಗಿ,ಬಹಿರಂಗವಾಗಿ ನೀಡದೆ, ಅವರನ್ನು ಬೇಲ್ ಮೇಲೆ ಹೊರತರುತ್ತಿರುವುದು ದುರದೃಷ್ಟಕರ!.

ಮೊನ್ನೆ ಮೊನ್ನೆಯಷ್ಟೇ…ಒಂದನೇ ತರಗತಿ ಆರು ವರ್ಷದ ಮಗುವಿನ ಮೇಲೆ  ನಡೆದ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂತು….ಕಿರವತ್ತಿಯಲ್ಲಿ ಬ್ರಹತ್ ಪ್ರತಿಭಟನೆ ಸಾವಿರಾರು ಜನರು ಆಕ್ರೋಶ ವ್ಯಕ್ತಪಡಿಸಿದರು… ಅಪಾರಾಧಿಗೆ ಮರಣದಂಡನೆ ನೀಡಬೇಕು ಎಂಬ ಆಗ್ರಹ..ಮಗುವಿನ ಸ್ಥಿತಿ ಕರುಣಾಜನಕ…ಆ ಮಗುವಿನ ತಂದೆ ತಾಯಿಯ ಪರಿಸ್ಥಿತಿ ನೆನೆದರೆ ಕರುಳು ಚುರ್ ಅನ್ನುತ್ತದೆ.ನಾನು,ಶಂಕರ,ಸ್ನೇಹಿತೆಯರು ಕೂಡ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು..ಮೂಕ ರೋಧನೆ…ಇಲ್ಲಿ ಎಲ್ಲ ಜಾತಿ ಧರ್ಮದವರು ಸಮಾನ ಮನಸ್ಕರು ಈ ಅಹಿತಕರ ಘಟನೆಗೆ ದಿಕ್ಕಾರ ಕೂಗಿದ್ದು,ಅನ್ಯಾಯದ ವಿರುದ್ದ ತಮ್ಮ ನೋವನ್ನು ಹೊರಹಾಕುವ ತಾಯಂದಿರನ್ನು ಕಂಡು ಹೆತ್ತವಳು ಮಾತ್ರ ತಾಯಿಯಲ್ಲ….ಮಕ್ಕಳನ್ನು ಪ್ರೀತಿಸುವವರೆಲ್ಲರೂ  ತಾಯಿ ಕರುಳು ಉಳ್ಳವರು….ಇಂತಹ ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಪೈಶಾಚಿಕ ಕಾಮುಕರನ್ನು ಕಠಿಣವಾದ ಶಿಕ್ಷೆಗೆ ಒಳಪಡಿಸುವ ಮೂಲಕ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ಶಿಕ್ಷಿಸುವ ಕಾರ್ಯವಾದರೆ ಹೆಣ್ಣು ಮಕ್ಕಳು ಆತಂಕದಿಂದ ಬದುಕುವ ಬದಲು ನೆಮ್ಮದಿಯಿಂದ ಬದುಕಬಹುದು…ಮಹಾತ್ಮ ಗಾಂಧಿ ಕಂಡ ಕನಸು ರಾಮ ರಾಜ್ಯ…. ಅದು ನನಸಾಗುವುದು ಇನ್ನೂ ದೂರ ದೂರ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಕೃತಿ ಎಂದರೆ ಬದುಕು…ಆ ಬದುಕನ್ನೇ ಸರ್ವನಾಶ ಮಾಡಲು ಹೊಂಟವರ ಬದುಕಿನ ವಿಕೃತ ಮನಸ್ಸಿಗೆ ನಿರಪರಾಧಿಗಳು ಬಲಿಯಾಗುತ್ತಿರುವುದು ದುರದೃಷ್ಟಕರ. ಜಗತ್ತಿನಲ್ಲಿ ನಾವೊಂದು ನೆಪಮಾತ್ರ..ಯಾವಕ್ಷಣದಲ್ಲಾದರೂ ಉಸಿರು ನಿಂತು ಹೋಗುವ ಮೊದಲು ಒಂದಿಷ್ಟು ಒಳ್ಳೆಯ ಕೆಲಸ ಮಾಡಬೇಕು. ಭೂತಾಯಿಯ ತಾಪ ಕಡಿಮೆ ಮಾಡಿ ಹಸಿರಿಂದ ನಲಿಯುವಂತೆ ಮಾಡುವ ಕೈಗಳಿಗೆ ಕೈ ಜೋಡಿಸುವ ಮನಸ್ಸು ಅಂತರಾಳದಿಂದ ಬರಬೇಕು.ಇನ್ನೂ ಎಚ್ಚೆತ್ತುಕೊಳ್ಳುವ ಮನಸ್ಸು ಮಾಡದಿದ್ದರೆ ವಿನಾಶ ನಮ್ಮ ಮನೆಯ ಮುಂದೆ ನಿಂತಿರುತ್ತದೆ.. ಉಹಿಸಲು ಕಷ್ಟ.ಪ್ರಕೃತಿ ವಿಕೃತಿಯ ನಡುವೆ ಸಂಸ್ಕಾರ ಬೆಳೆಸಬೇಕಿದೆ… ಬದಲಾಗೋಣ..ನಮ್ಮೊಳಗೆ…ನಾನೊಬ್ಬಳು ಬದಲಾದರೆ ಪ್ರಪಂಚ ಬದಲಾಗಬಹುದೆಂಬ ನಿರೀಕ್ಷೆ ಅಷ್ಟೇ… ಎಲ್ಲರೂ ಒಂದೇ ಸಲ ಪರಿವರ್ತನೆ ಹೊಂದುವರೆಂಬ ಭ್ರಮೆ ನನಗಿಲ್ಲ…ಅಸಾಧ್ಯವಾದರೂ ಸಾಧ್ಯವಾಗಬಹುದು ನಮ್ಮ ತಲೆಮಾರು ಕಳೆದುಹೋದ ಮೇಲೆ….ಅಲ್ವಾ?.


2 thoughts on “

  1. ಅತೀ ಸುಂದರ ಬರವಣಿಗೆ,ನಮ್ಮ ನಾವೇ ಬದಲಿಸುವ ಸ್ವಂತಿಕೆ ಈ ಲೇಖನ ಓದಿದಾಗ ಜಾಗೃತಿ ಆಗುತ್ತೆ, ಪ್ರೇರಣೆ ಪಡಿತೇವೆ.ಎಂಬ ಆಶಯ

Leave a Reply

Back To Top