ಕಾವ್ಯ ಸಂಗಾತಿ
ಸವಿತಾ ದೇಶಮುಖ
ಚಿಗುರೊಡೆಯಲಿ ಮರ

ಚಲ್ಲು ಚಲ್ಲುವ.. ಹೂವಗಳ
ಸೂರಿವ ಹೊಂದಾವರೆಗಳ
ಹೃದಯ’ವೆಂಬ ಮರ ಸುಕ್ಕುಗಟ್ಟಿದೆ..!!೧!!
ಆತ್ಮ ವಂಚನೆಯ ಟಿಸಿಲುಗಳೊಡೆದು
ನೆರಳು ನೀಡುವ ಟೊಂಗೆಗಳ
ಎಲೆಗಳೆಲ್ಲ ಉದುರಿ -ಬೆದರಿ ನಿಂತಿವೆ ..!!೨!!
ಹಚ್ಚಹಸಿರಿನ ಎಲೆಗಳು ಬಾಡುತಿವೆ
ಹುಡುಕುತ್ತಿವೆ ಎಲ್ಲೆಲ್ಲೂ ಕಾಣದ
‘ನಂಬುಗೆಯ ಆಸರೆ ಎಲ್ಲೆಂದು…!!೩!!
ಸೂರ್ಯನ ಪ್ರಖರತೆಗಂಟಿ ಗ್ರಹಣ
ಝಳ ಝಳಪಿಸುವ ಪ್ರಖರ ಕಿರಣ
ಮರೆಮಾಚಿ ನಿಂತಿವೆ ಅರಿತು-ಮರೆತು..!!೪!!
ಅಸ್ಥಿರಗೊಂಡ ಬೇರುಗಳು ತಳಕ್ಕೆ
ಇಳಿದು ನಡುಗುತಿವೆ , ಹುಡುಕುತಿವೆ
ಕಿತ್ತೊಗೆದ ಚೈತನ್ಯ- ಹುರುಪು …!!೫!!
ಹೊಂದಾಣಿಕೆಯ ಫಂಟ್ಟಿಗಳಿಗೆ
ಕವಿದ ಕತ್ತಲೆ – ಅಂಧಕಾರಕೆ
ಹೊಸ ಆಶಯ ನೀರೆಯಬೇಕಿದೆ ..!!೬!!
ಸತ್ಯದಿಂದ ದೂರು ಸರಿದು ನಿಂತ
ಸೂರ್ಯನ ಕಿರಣಗಳ ಸುತ್ತ
ಮುಸುಕಿದ ಕಾರ್ಮೋಡಗಳ ಸರಿಸಿ ..!!೭!!
ಹೊಸ ಬೆಳಕಿನ ಹಸಿರಿನ ಸಿರಿಯೊಡನೆ
ಬೆಳೆದು ನಿರಾಳತಿ -ಶಾಂತಿ -ಪುಟಿದು
ಹೋದ ನಂಬುಗೆ-ಪ್ರೀತಿ ಪಸಲಿಯಲಿ…!!೮!!
ಹಸಿರು ಹೊಳೆವ ಬೆಳಕಿನಲಿ
ಮತ್ತೆ ಚಿಗುರೊಡೆದಯಲಿ
‘ಬುದ್ಧ ಬೋಧ’ ವೃಕ್ಷದಂತೆ…!!೯!!
ಹರಡಲಿ ಮನದೊಳಗಲು ಪ್ರತಿ
ಉಸಿರಿಗೊಂದು ಶಾಖೆಯಂತೆ…
ಅಂಕುರಿಸಲಿ ಶಾಂತಿ ಹೂಗಳು…!!೧೦!!
ನಂಬಿಕೆ ಮರಳಿ ಬಾಳಲಿ ಪ್ರತಿಯೊಂದು
ಎಲೆಯಲಿ, ಪ್ರೀತಿಯ ಮರಳು ಬಾಳದು
ಕೆಸರು ಮಣ್ಣು ಸಿಂಚಿಸಿ… !!೧೧!!
ನಿಶ್ಚಲ ನೆನೆಪಿನ ಮಳೆಬಿಲ್ಲು ಹಾರಲಿ
ಗಗನದಲಿ, ಬೋಧೆಯ ನೆರಳಲಿ
ಬೆಳೆದು ಬಾಳಲಿ- ಹೊಸ ತಲೆಮಾರಿಗೆ..!!೧೨!!
“ಚಿಗುರೊಡೆಯಲಿ ಮರ”
ಬುದ್ಧನ ಬೋಧೆಯಂತೆ… ಶಾಶ್ವತವಾಗಿ!
“ಹೆಮ್ಮರವಾಗಿ -ಹೊಸ ಚೈತನ್ಯದ
ಚಿಗುರೊಡೆಯಲಿ ಮರ
ಸವಿತಾ ದೇಶಮುಖ
ಚಿಗುರೋಡೆಯಲಿ ಮನ ಬಹಳ ಸೊಗಸಾಗಿ ವರ್ಣಿಸಲಾಗಿದೆ