ಮನ್ಸೂರ್ ಮೂಲ್ಕಿ ಅವರ ಕವಿತೆ-ಸಹನೆ

ಕರಗಳ ತೋರುತ ನಿಂತಿಹೆನು
ಕರುಣೆಯ ತೋರುವೆಯಾ
ಪರಮಾತ್ಮನೇ ನಿನ್ನಲ್ಲಿ ನಂಬಿಕೆಯು
ಸಹನೆಯ ನೀಡುವೆಯಾ

ಜಗದ ಸೃಷ್ಟಿಗಳೆಲ್ಲವೂ ನಿನ್ನದು
ತನು ಮನ ಪ್ರಾರ್ಥನೆ ಮಾಡುವೆವು
ನಿನ್ನದೇ ಧರ್ಮ ನಿನ್ನದೇ ನಿಯಮ
 ದಾನವನು ನೀಡುವೆವು.

ಕಂದನು ಅಳಲು ಕೋವಿಯ ಕೊಳಲು
ಉಸಿರನೇ ನಿಲ್ಲಿಸಿದೆ
ಕರುಣೆಯ ನೀಡುವ ಕರುಣಾಮಯಿಯೆ ಕಾರುಣ್ಯವ ಸುರಿಸಿಬಿಡು

ಬರಗಾಲವು ಬಾರದೆ ಬರಡಾಗಿದೆ ಭೂಮಿ ಮನುಜನ ಕೋಪದಲಿ
ನಿನ್ನದೆ ಸೃಷ್ಟಿಯು ಸೃಷ್ಟಿಯ ಕೊಲ್ಲುತ
ಜಗವನು ಆಳುತಿದೆ.

—————————————

Leave a Reply

Back To Top