ಅಂಕಣ ಸಂಗಾತಿ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ

ಮಧು ವಸ್ತ್ರದ
ಮುಂಬಯಿನ ಮಳೆಗಾಲ.

ಮಳೆ..
ಪ್ರಕೃತಿ ಮಾತೆ ನಮಗೆ ನೀಡಿದ ವರ
ಮಳೆ..
ರೈತ ಬಾಂಧವರ ಜೀವನದ ಆಧಾರ
ಮಳೆ..
ಉತ್ಸಾಹ ಖುಷಿ ಸ್ಪೂರ್ತಿಗಳ ಆಗರ

ಮುಂಬಯಿ ಮಹಾನಗರದಲ್ಲಿ ಮೊದಲ ಮಳೆ ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗುತ್ತದೆ.
ಹವಾಮಾನ ಇಲಾಖೆಯ ಪ್ರಕಾರ ಮುಂಬಯಿನ ಮೊದಲ ಮಳೆಯ ದಿನಾಂಕವನ್ನು ಜೂನ್ ೮ ಎಂದು ಪರಿಗಣಿಸಲಾಗುತ್ತದೆ.. ಈ ತಿಂಗಳಿನಲ್ಲಿ ಮುಂಬಯಿ ಮಹಾ ನಗರಕ್ಕೆ ಹೊಸ ಕಳೆ ಬರುತ್ತದೆ..ಮೊದಲ ಮಳೆಯಲ್ಲಿ ತೊಯ್ದು ಮೈಮೇಲಿನ ಧೂಳನ್ನು ತೊಳೆದುಕೊಂಡು ಸ್ವಚ್ಛವಾದ ಗಿಡ ಮರಗಳೆಲ್ಲ ಹೊಸ ಹಸಿರು ಉಡುಗೆಯನುಟ್ಟು ನಲಿಯುವಂತೆ ಭಾಸವಾಗುತ್ತದೆ..ಎಲ್ಲೆಡೆಯೂ ಆಕಾಶದೆತ್ತರದ ಬಿಲ್ಡಿಂಗ್ ಗಳನ್ನು, ಟವರ್ ಗಳನ್ನು ಹೊಂದಿ, ದೊಡ್ಡ ಕಾಂಕ್ರೀಟ್ ಕಾಡಿನಂತೆ ಕಾಣುವ ಮುಂಬಯಿ ನಗರ ಮುಂಗಾರು ಮಳೆಯ ಸ್ಪರ್ಶದಿಂದ ತನ್ನೊಳಗಿನ ಪ್ರಕೃತಿ ಸೌಂದರ್ಯವನ್ನು ಹೊರ ಹಾಕಿ ಹೊಸ ರೂಪದೊಂದಿಗೆ ಜನ ಮನಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತದೆ..
ಮುಂಬಯಿನ ಮಳೆ ಎಂದರೆ ಸಾಮಾನ್ಯವಲ್ಲ..ಕೆಲವರಿಗೆ ಕವಿತೆಯಾದರೆ,ಕೆಲವರಿಗೆ ಸಂಗೀತ, ಕೆಲವರಿಗೆ ಸಂಕಟಗಳನ್ನು ಹೊತ್ತು ತರುವ ಬಿರುಗಾಳಿ ಇದ್ದಂತೆ..ಎಲ್ಲರ ಜೀವನವೂ ಬದಲಾವಣೆ ಪಡೆಯುತ್ತದೆ..ಬಂದರುಗಳಲ್ಲಿ ಹಡಗುಗಳು ಚಲಿಸುವ ರೀತಿಯಲ್ಲಿ ಬದಲಾವಣೆ, ಲೋಕಲ್ ಟ್ರೈನ್ ಗಳ ಸಮಯ ಬದಲಾವಣೆ ಜೊತೆ ಆಕಸ್ಮಿಕವಾಗಿ ಬಂದ್ ಆಗುವುದು, ಚೌಪಾಟಿಗಳಲ್ಲಿ ಸಾಗರದಲೆಗಳ ಹುಚ್ವು ಓಟ, ಬಸ್ ಸ್ಟಾಪ್ ಗಳಲ್ಲಿ, ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಒದ್ದೆಯಾಗಿ, ಒಣಗುವ ಅವಕಾಶವಿಲ್ಲದೆ ನಿಂತ ಜನರ ಪರದಾಟ,ಬಣ್ಣ ಬಣ್ಣದ ರೈನ್ ಕೋಟ್ ಗಳನ್ನು ಧರಿಸಿ ಶಾಲೆಯ ಬಸ್ ನ ದಾರಿ ನೋಡುತ್ತ ನಿಂತ ಮಕ್ಕಳು,
ಇವೆಲ್ಲವೂ ಮುಂಬಯಿ ಮಳೆಗಾಲದಲ್ಲಿ ಸಹಜವಾಗಿಯೇ ಕಾಣಸಿಗುವ ದೃಶ್ಯಗಳು..
ವೈಶಾಖದ ಶಾಖದಿಂದ ಬಳಲಿ ಬೆಂಡಾಗಿದ್ದ ಮುಂಬಯಿನ ಜನರು ಜೂನ್ ಮೊದಲ ವಾರದಲ್ಲಿ ದರ್ಶನ ನೀಡುವ ತಮ್ಮ ಮೆಚ್ಚಿನ ವರುಣ ದೇವನಿಗಾಗಿ ಆತುರದಿಂದ ಕಾಯುತ್ತಾ ಇರುತ್ತಾರೆ.ಮಳೆಯ ಆಗಮನದೊಂದಿಗೆ ಮುಂಬಯಿಕರರ ಉತ್ಸಾಹ ಉಲ್ಲಾಸಗಳು ಗರಿ ಬಿಚ್ಚಿ ನರ್ತಿಸಲಾರಂಭಿಸುತ್ತವೆ..
ಮಕ್ಕಳ ಶಾಲೆ ಆರಂಭ (ಜೂನ್ ೧೪) ಆಗುವುದರೊಳಗೆ ಇಲ್ಲಿನ ಜನ ಒಂದೆರಡು ಮಳೆಗಾಲದ ಪಿಕ್ ನಿಕ್ ಗಳನ್ನು ಆಯೋಜಿಸುತ್ತಾರೆ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ಪ್ರವಾಸ ಮಾಡುತ್ತಾರೆ..
ಮುಂಬಯಿನ ಆಸುಪಾಸಿನಲ್ಲಿರುವ ಹಲವಾರು ನಿಸರ್ಗಧಾಮಗಳಿಗೆ ಭೇಟಿ ನೀಡಿ ಒಂದೆರಡು ದಿನಗಳ ಕಾಲ ಮೊದಲ ಮಳೆಯ ಆಹ್ಲಾದಕರ ಅನುಭವವನ್ನು ಪಡೆದು ಆನಂದಿಸುತ್ತಾರೆ..
ಮುಂಬೈ ಮತ್ತು ಠಾಣೆ ಈ ಎರಡು ಉಪನಗರಗಳ ನಡುವೆ ದಟ್ಟವಾಗಿ ಹರಡಿರುವ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಮಳೆಗಾಲದ ಪಿಕ್ನಿಕ್ ಮತ್ತು ವಾರಾಂತ್ಯದ ಚಿಕ್ಕ ಪ್ರವಾಸಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ.
ನಗರದ ಹೃದಯ ಭಾಗದಲ್ಲಿ ೧೦೫ ಚದರ ಕಿಲೋಮೀಟರ್ ಹರಡಿರುವ ಈ ವನದಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳನ್ನ ನೋಡಬಹುದು..ಇದಲ್ಲದೆ,ಉದ್ಯಾನವನದೊಳಗಿರುವ ೨000 ಸಾವಿರ ವರ್ಷಗಳಷ್ಟು ಪುರಾತನ ಕಾನ್ಹೇರಿ ಗುಹೆಗಳನ್ನೂ ನೋಡಬಹುದು.ಪ್ರವಾಸಿಗರು ಲಯನ್ ಸಫಾರಿಯೊಂದಿಗೆ ವನದೊಳಗಿನ ನೈಸರ್ಗಿಕ ಚಿಕ್ಕ ಪುಟ್ಟ ಜಲಪಾತಗಳು, ಬೆಟ್ಟ ಕಣಿವೆಗಳ ಸೌಂದರ್ಯವನ್ನು ಸವಿಯುತ್ತಾರೆ..

ತುಂತುರು ಮಳೆಯ ಸುಂದರ ಸಂಜೆಯಲ್ಲಿ ದಕ್ಷಿಣ ಮುಂಬಯಿನ ಮರೀನ್ ಲೈನ್ ತೀರದಲ್ಲಿ ಕುಳಿತು ಉಕ್ಕೇರುತ ಆಟವಾಡುವ ಬಿಳಿ ನೊರೆಯಲೆಗಳನ್ನು ನೋಡಿ ಆನಂದಿಸಲು ಜನ ಸಾಗರವಿಲ್ಲಿ ನೆರೆದಿರುತ್ತದೆ..ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ,ಗೇಟ್ ವೇ ಆಫ್ ಇಂಡಿಯಾ, ಜುಹೂ, ಗೋರಾಯಿ ಮುಂತಾದ ಸಮುದ್ರ ತೀರಗಳಲ್ಲಿ ಮಳೆಯಲ್ಲಿ ನೆನೆಯುತ್ತಾ, ರಸ್ತೆಯ ಪಕ್ಕದಲ್ಲಿನ ತಿನಿಸುಗಳನ್ನು ತಿನ್ನುತ್ತ ಸೂರ್ಯಾಸ್ತದ ಅಂದ ನೋಡಿ ಖುಷಿ ಪಡುತ್ತಾರೆ..ಈ ಬೀಚ್ ಗಳಲ್ಲಿ ಭೇಲ್ ಪುರಿ,ಪಾಣಿಪುರಿ, ಶೇವ್ ಪುರಿ, ರಗಡಾ ಪ್ಯಾಟಿಸ್ ಈ ತಿನಿಸುಗಳನ್ನು ಮಾರುವ ಚಿಕ್ಕ ಚಿಕ್ಕ ಕೈ ಗಾಡಿ,ಹೋಟೆಲ್ ಗಳಲ್ಲಿ ಜನ ಜಾತ್ರೆಯೇ ನೆರೆದಿರುತ್ತದೆ..
ಜೊತೆಗೆ ಮೆಕ್ಕೆಜೋಳದ ತೆನೆಯನ್ನು ಕೆಂಡದಮೇಲೆ ಹದವಾಗಿ ಸುಟ್ಟು ಉಪ್ಪು, ಖಾರ, ನಿಂಬೆಹುಳಿ ಸವರಿ ಮಾರುವವರು ಇರುತ್ತಾರೆ..ಈ ಮೆಕ್ಕೆಜೋಳದ ತೆನೆಗಳಿಗೆ ಇಲ್ಲಿ ಭುಟ್ಟಾ ಎನ್ನುತ್ತಾರೆ..ಇದು ಅತ್ಯಂತ ಬೇಡಿಕೆಯ, ಎಲ್ಲರೂ ಇಷ್ಟಪಡುವ ರುಚಿಕರ ತಿನಿಸು..ಸಮುದ್ರ ತೀರದ ತಂಪುಗಾಳಿಯಲ್ಲಿ ತುಂತುರುಮಳೆಯಲ್ಲಿ ನೆನೆಯುತ್ತ ಬಿಸಿ ಬಿಸಿಯಾದ ಈ ಮೆಕ್ಕೆಜೋಳವನ್ನು ತಿನ್ನುವುದರಲ್ಲಿ ಅದೆಂಥಾ ಮಜಾ ಇರುತ್ತೆ ಅಂತೀರಿ..ಆಹಾ..ಇದರ ಜೊತೆಗೆ
“ಚನಾ ಜೋ಼ರ್ ಗರಮ್” ತಿನಿಸನ್ನು ಸವಿಯುತ್ತ ತುಂತುರು ಮಳೆಯಲ್ಲಿ ರಸ್ತೆ ಬದಿಯಲ್ಲಿ,ಬೀಚ್ ಗಳಲ್ಲಿ ಅಡ್ಡಾಡುತ್ತ ಮೊದಲ ಮಳೆಯ ಆನಂದವನ್ನು ಅನುಭವಿಸುತ್ತಾರೆ…”ಚನಾ ಜೋ಼ರ್ ಗರಂ ” ಇದು ಮುಂಬಯಿನ ಬೀದಿಗಳಲ್ಲಿ ಮಾರುವ ಜನಪ್ರಿಯವಾದ ಒಂದು ತಿನಿಸು. ಬೇಯಿಸಿದ ಕಡಲೆಕಾಳಿಗೆ ಉಪ್ಪು, ಖಾರದಪುಡಿ, ಮತ್ತು ಲಿಂಬೆ ರಸವನ್ನು ಸೇರಿಸಿ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿಸೊಪ್ಪು ಹಾಕಿ ಕಾಗದದ ಪೊಟ್ಟಣಗಳಲ್ಲಿ ಹಾಕಿ ಮಾರುತ್ತಾರೆ…ಈ ಕುರುಕಲು ತಿನಿಸು ಮುಂಬಯಿನ ಬೀಚ್ ಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಮಳೆಗಾಲದ ವಾರಾಂತ್ಯದಲ್ಲಿ ಹೊರಗೆ ತಿರುಗಾಡಲು ಹೋಗುವ ಜನರಲ್ಲಿ ಮಕ್ಕಳಿಗೆ,ಯುವಕ ಯುವತಿಯರಿಗೆ ಅಚ್ಚುಮೆಚ್ಚಿನ ತಿನಿಸು ಇದು..
ಮುಂಬಯಿನ ಸುತ್ತಮುತ್ತಲೂ ೪೦ರಿಂದ ೫೦ ಕಿಮೀ ಅಂತರದಲ್ಲಿ ಹತ್ತಾರು ಅತ್ಯುತ್ತಮ ಪ್ರವಾಸಿ ತಾಣಗಳಿವೆ..
“ಭಾರತದ ಅತ್ಯಂತ ಮುದ್ದಾದ ಪುಟ್ಟ ಗಿರಿಧಾಮ” ಎಂದು ಕರೆಯಲ್ಪಡುವ ಮಾಥೆರಾನ್, ಪುಟ್ಟ ಪುಟ್ಟ ಜಲಪಾತ, ಝರಿ ತೊರೆಗಳಿಂದ ತುಂಬಿದ ಲೋಣಾವಳ,ಖಂಡಾಳ, ಕರ್ನಾಳ, ಅಲಿಬಾಗ್, ಮಹಾಬಲೇಶ್ವರ, ಭಂಡಾರಧರ ಇನ್ನೂ ಮುಂತಾದ ನಿಸರ್ಗ ರಮ್ಯ ಪ್ರದೇಶಗಳಿಗೆ ಇಲ್ಲಿಯ ಜನ ಭೇಟಿ ನೀಡಿ ಮುಂಗಾರು ಮಳೆಯ ಪ್ರವಾಸದ ಸುಖಾನುಭವದಲ್ಲಿ ತೇಲುತ್ತಾರೆ..

ಇಳೆಯ ಕೊಳೆ ತೊಳೆದು ಹೊಸ ಬದಲಾವಣೆ, ಹೊಸ ಭಾವ, ಭರವಸೆಗಳೊಂದಿಗೆ ಬಾಳಿನಲ್ಲಿ ಮುನ್ನಡೆಯಲು ಪ್ರೇರೇಪಿಸುವ ಈ ವರ್ಷಋತು ಕಾಲಚಕ್ರದ ಗತಿಗೆ ಪೂರಕವಾಗಿ ಬದುಕನ್ನು ಸ್ವೀಕರಿಸಬೇಕು ಎಂಬ ದಿವ್ಯ ಸಂದೇಶವನ್ನು ನೀಡುತ್ತದೆ..
*****

ಭಾಗ-2
ತಂಪು ನೀಡಿ ಮನ ತಣಿಸಿ,ಸುಂದರ ರೂಪದೊಡನೆ ಆರಂಭವಾಗುವ ಮುಂಬಯಿ ಮಳೆಗಾಲಕ್ಕೆ ಇನ್ನೊಂದು ರುದ್ರರೂಪವೂ ಇದೆ..ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿವ ಜಡಿ ಮಳೆ ನಗರದ ಜನಜೀವನವನ್ನು ಅಸ್ತವ್ಯಸ್ತ ಮಾಡಿಬಿಡುತ್ತದೆ..೨-೩ ದಿನಗಳ ಕಾಲ ಬಿಟ್ಟೂ ಬಿಡದೆ ಸುರಿವ ಮಳೆ ಮುಂಬಯಿ ಮಹಾನಗರದ ಸಂಚಾರ ವ್ಯವಸ್ಥೆಯನ್ನು ಏರುಪೇರಾಗಿಸುತ್ತದೆ..ರೈಲ್ವೆ ಹಳಿಗಳು ನೀರಿನಲ್ಲಿ ಮುಳುಗಿ ಲೋಕಲ್ ಟ್ರೈನ್ ಗಳು ಬಂದ್ ಆಗುವುದು..ಹೈವೇಗಳಲ್ಲಿ ನೀರು ತುಂಬಿ ಬಸ್,ಕಾರುಗಳ ಚಲನೆ ನಿಂತು ಟ್ರಾಫಿಕ್ ಬಂದ್ ಆಗುವುದು ಇವೆಲ್ಲವೂ ಸರ್ವೇ ಸಾಮಾನ್ಯ ವಿಷಯಗಳು..
೨೦೦೫ ಜುಲೈ ೨೬ ರಂದು ಸುರಿದ ಭಾರಿ ಮಳೆ, ತೀವ್ರ ಚಂಡಮಾರುತ ಮತ್ತು ನಂತರದ ಪ್ರವಾಹದಿಂದ ಮುಂಬಯಿ ಮಹಾನಗರ ತತ್ತರಿಸಿ ಹೋಗಿತ್ತು..ಆ ಸಮಯದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..
ದಿ ೨೬-ಜುಲೈ-೨೦೦೫ ಮುಂಬಯಿನ ಇತಿಹಾಸದಲ್ಲೇ ಎಂದೂ ಮರೆಯಲಾರದಂತಹ ಮಳೆಗಾಲ..
ಪ್ರಕೃತಿಯು ತನ್ನ ಮೌನವನ್ನು ಮುರಿದು ರೌದ್ರ ರೂಪವನ್ನು ತೋರಿಸಿದ ಕರಾಳ ದಿನವದು..

ಆ ದಿನ ಮುಂಬಯಿ ಮಹಾನಗರದ ಜನರು ಎಂದಿನಂತೆ ತಮ್ಮ ದೈನಂದಿನ ಕಾರ್ಯಗಳಲ್ಲಿ ಮಗ್ನರಾಗಿದ್ದರು..
ಬೆಳಗಿನಿಂದಲೂ ಸುರಿಯುತ್ತಲೇ ಇದ್ದ ಮಳೆಯ ರಭಸ ಮಧ್ಯಾಹ್ನ ೧-೨ ಗಂಟೆಯ ಹೊತ್ತಿಗೆ ಹೆಚ್ಚಾಗತೊಡಗಿತು..
ವಿಪರೀತ ಮಳೆಯ ಕಾರಣ ಶಾಲೆಗೆ ರಜೆ ಘೋಷಿಸಲಾಗಿದೆ, ನೀವೇ
ಬಂದು ನಿಮ್ಮ ಮಗನನ್ನು ಕರೆದೊಯ್ಯಿರೆಂದು ಮಗನ ಶಾಲೆಯಿಂದ ಫೋನ್ ಬಂತು..ಭೋರೆಂದು ಸುರಿವ ಮಳೆಯಲ್ಲಿ ರಿಕ್ಷಾ ಹಿಡಿದು ಮಗನ ಶಾಲೆಗೆ ಹೊರಟೆ, ಹೋಗುವ ದಾರಿಯಲ್ಲಿ ಪರಿಚಯದ ಮಂಗಳೂರು ಅಂಗಡಿಯ ಅಣ್ಣನಿಗೆ ಸಾಕಷ್ಟು ಕುರುಕಲು ತಿಂಡಿಗಳನ್ನು ಪ್ಯಾಕ್ ಮಾಡಿಡಲು ಹೇಳಿ ಮುಂದೆ ಹೋದೆ..ಮರಳಿ ಮಗನನ್ನು ಕರೆ ತರುವಾಗ ಅಣ್ಣ ಪ್ಯಾಕ್ ಮಾಡಿ ಇಟ್ಟಿದ್ದ ಬಿಸ್ಕತ್ತು, ಚಾಕೊಲೇಟ್, ಚಕ್ಕುಲಿ, ಕೋಡುಬಳೆ, ಬಾಳೆಕಾಯಿ ಚಿಪ್ಸ್, ಆಲೂ ಚಿಪ್ಸ್,ಬಾಳೆಹಣ್ಣು ಎಲ್ಲವನ್ನೂ ತುಂಬಿಕೊಂಡು, ಇನ್ನು ೨-೩ ದಿನ ಮನೆಯಲ್ಲೇ ಕೂರುವ ಮಕ್ಕಳಿಗೆ ತಿಂಡಿ ತಿನಿಸಿನ ವ್ಯವಸ್ಥೆ ಆಯಿತೆಂದು ನಿಶ್ಚಿಂತಳಾಗಿ ಮನೆಗೆ ಬಂದೆ..(ಅಂದ ಹಾಗೆ ಆಗ ನನ್ನಿಬ್ಬರು ಮಕ್ಕಳೂ ಸಿಕ್ಕಾಪಟ್ಟೆ ತಿಂಡಿಪೋತರಿದ್ದರು,

ಈಗ ಸಿಕ್ಜಾಪಟ್ಟೆ ಡಯಟ್ ಮಾಡ್ತಾರೆ..) ಮುಂದಿನ ಹತ್ತು ನಿಮಿಷಗಳಲ್ಲಿ ಮಗಳು ಅಪೂರ್ವ ಕಾಲೇಜಿನಿಂದ ಬರುವಾಗ ತನ್ನ ಮೂವರು ಗೆಳತಿಯರನ್ನೂ ಕರೆತಂದಳು..ಮಳೆ ಸ್ವಲ್ಪ ಕಡಿಮೆಯಾಗುವವರೆಗೂ
ನಮ್ಮ ಮನೆಯಲ್ಲಿ ತಂಗುವ ವಿಚಾರದಿಂದ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿನ ಬ್ಯಾಂಕ್ ಉದ್ಯೋಗಿ ನನ್ನ ಆಪ್ತ ಗೆಳತಿ ವಸುಂಧರ ತನ್ನ ೧೦ ವರ್ಷದ ಮಗನೊಡನೆ ನಮ್ಮಲ್ಲಿಗೆ ಬಂದಳು..ನಮ್ಮ ಮನೆ ಮೊದಲನೇ ಮಹಡಿಯಲ್ಲಿತ್ತು..ಮನೆಯ ಕೆಳಗೆ ಹೈಕೋರ್ಟ್ ನ ಜಡ್ಜ್ ಶ್ರೀ ದಹಿವಲ್ಕರ್ ಅವರ ಕುಟುಂಬ ಮತ್ತು ಅವರ ಎದುರಿಗೆ ಪಿ ಎಸ,ಐ ಶರ್ಮ ಅವರ ಕುಟುಂಬ ವಾಸವಾಗಿದ್ದರು..ಮಧ್ಯಾಹ್ನ ನಾಲ್ಕು ಗಂಟೆಯ ನಂತರ ಮಳೆ ಹೆಚ್ಚಾಗಿ ನಮ್ಮ ಕೆಳಗಿನ ಮನೆಗಳಲ್ಲಿ ನೀರಿನ ಮಟ್ಟ ಸೊಂಟದಿಂದ ಮೇಲೆ ಏರತೊಡಗಿದಾಗ ಆ ಎರಡೂ ಮನೆಯ ಗೃಹಿಣಿಯರು ಗಾಬರಿಗೊಂಡು ತಮ್ಮ ಪುಟ್ಟ ಪುಟ್ಟ ಮಕ್ಕಳೊಡನೆ ನಮ್ಮ ಮನೆಗೆ ಬಂದು ಸೇರಿದರು..ಮಳೆಯ ಕಾರಣದಿಂದ ಬೆಳಗ್ಗೆಯೇ ರಜಾ ಪಡೆದು ಮನೆಗೆ ಹೋಗಿದ್ದ ನಮ್ಮ ಡ್ರೈವರ್ ಸುರೇಶ್ ಪರದಾಡುತ್ತ ಮತ್ತೆ ವಾಪಸ್ ಬಂದು ಮನೆ ಸೇರಿದ.ಒಂದು ಬೆಡ್ ರೂಮ್, ಹಾಲ್, ಅಡುಗೆ ಮನೆ, ಪ್ಯಾಸೇಜ್,ಮತ್ತು ಬಾಲ್ಕನಿಗಳನ್ನು ಹೊಂದಿದ್ದ ಚಿಕ್ಕ ಮನೆಯಲ್ಲಿ ಆ ದಿನ ಒಟ್ಟು ೧೫ ಜನರು ಕೂಡಿ ಇರಬೇಕಾಯ್ತು…ಶಾಲೆ ಕಾಲೇಜಿನಿಂದ ಹಸಿದು ಬಂದ ಮಕ್ಕಳು ಮತ್ತು ಅತಿಥಿಗಳೊಡನೆ ಸಂಜೆ ಪಾವ್ ಭಾಜಿ, ಚಹಾ ಸೇವಿಸಿದ್ದಾಯ್ತು..ಹೊರಗೆ ಮಳೆಯ ಆರ್ಭಟ ಹೆಚ್ಚುತ್ತಲೇ ಇತ್ತು..ವಿದ್ಯುತ್ ಇಲ್ಲದ ಕಾರಣ ರಾತ್ರಿ ಅಡುಗೆ ಮಾಡಲಾಗಲಿಲ್ಲ..ಊಟಕ್ಕೆ ಮಂಗಳೂರು ಅಣ್ಣನ ಅಂಗಡಿಯಿಂದ ತಂದ ಎಲ್ಲ ತಿನಿಸುಗಳನ್ನೂ ಎಲ್ಲರೂ ಹಂಚಿಕೊಂಡು ತಿಂದೆವು..ರಾತ್ರಿ ಊಟದ ಚಿಂತೆ ಮುಗಿಯಿತು..ಆದರೆ ಲೈಟ್ ಇಲ್ಲದೆ ಫ್ಯಾನ್ ಇಲ್ಲದೆ ವಿಪರೀತ ಸೆಕೆಯಿಂದಾಗಿ ಯಾರಿಗೂ ನಿದ್ರೆ ಬಾರದಾಗಿತ್ತು ಮಲಗಬೇಕೆಂದರೆ ಜಾಗವೂ ಸಾಲದಾಗಿತ್ತು..ಹೇಗೋ ಮಾಡಿ ಪುಟ್ಟ ಮಕ್ಕಳನ್ನು ಮಲಗಿಸಿ ನಾವೆಲ್ಲರೂ ಅಂತಾಕ್ಷರಿ ಆಟ ಆಡುತ್ತಾ ಕುಳಿತು ಜಾಗರಣೆ ಮಾಡಿದೆವು..
ಬೆಳಗಿನಜಾವ ೫ ಗಂಟೆಗೇ ಡ್ಯೂಟಿಗೆ ಹೋಗಿದ್ದ ನನ್ನ ಪತಿರಾಯರಿಂದ ಫೋನ್ ಕರೆಯೂ ಇಲ್ಲದಾಗಿ ತಲ್ಲಣಗೊಂಡ ನನ್ನ ಮನಕ್ಕೆ ನಿದ್ರೆ ಬಾರದಾಗಿತ್ತು..ಬಾಲ್ಕನಿಯಿಂದ ಹೊರಗೆ ಹೈವೇ ಮೇಲೆ ನಡೆಯುತ್ತಿದ್ದ ಜನರ ಗಲಿಬಿಲಿ ಗೊಂದಲಗಳನ್ನು ನೋಡುತ್ತ ನಿಂತೇ ಇಡೀ ರಾತ್ರಿ ಕಳೆದೆ..ಮನೆಯ ಮುಂದಿನ ಗೈವೇ ಮೇಲಿನ ದೃಶ್ಯ ಬೆರಗಾಗಿಸುವಂತಿತ್ತು..
ಮಧ್ಯಾಹ್ನ ಆಫೀಸು ಬಿಟ್ಟ ನಂತರ ತಮ್ಮ ನೆಲೆ ಸೇರಲು ಬಸ್,ಟ್ರೈನ್ ಗಳಿಲ್ಲದೆ,ಆಸರೆಗೆ ತಾಣವೂ ಇಲ್ಲದೆ ಹತಾಶರಾಗಿ ತಮ್ಮ ಗೂಡಿನೆಡೆಗೆ ನಡೆಯುತ್ತಲೇ ಹೊರಟಿದ್ದ ಸಹಸ್ರಾರು ಜನರಿಗೆ ರಾತ್ರಿಯ ಚಂದ್ರನ ಬೆಳಕೊಂದೇ ಆಧಾರವಾಗಿತ್ತು..ಒಬ್ಬರು ಮತ್ತೊಬ್ಬರ ಕೈ ಹಿಡಿದು ಎದೆಯೆತ್ತರ ನೀರಿನಲ್ಲಿ ನಡೆಯುತ್ತ ಸಾಗುತ್ತಿದ್ದರು..ಹೆಣ್ಣು ಗಂಡು ಯುವಕರು,ವಯಸ್ಕರು ಎಂಬ ಬೇಧ ಭಾವವಿಲ್ಲದೆ ಮುನ್ನಡೆಯುತ್ತಿದ್ದ ಎಲ್ಲರ ಬಾಯಿಂದ ಗಣಪತಿ ಬಪ್ಪಾಮೋರಯಾ..ಗಣಪತಿ ಬಪ್ಪಾ ಮೋರಯಾ..ಈ ಕೂಗೊಂದೇ ಹೊರಬರುತ್ತಿತ್ತು..ಮಧ್ಯಾಹ್ನದಿಂದ ಕುಡಿಯಲು ನೀರು ಸಹ ಇಲ್ಲದೆ, ಹಸಿವಿನಿಂದ ಬಳಲುತ್ತ ಆ ಪ್ರವಾಹದ ನೀರಲ್ಲಿ ನಡೆಯುತ್ತ ಹೊರಟ ಜನರ ದಿಟ್ಟತನ ನಿಜಕ್ಕೂ ಮೆಚ್ಚುವಂತಿತ್ತು..(ಬೇರೇನೂ ದಾರಿ ಇರಲಿಲ್ಲ ಎಂಬುದೂ ಸತ್ಯ..)ಅವರೆಲ್ಲರೂ ಎದೆಯೆತ್ತರ ನೀರಿನಲ್ಲಿ ಇಡೀ ರಾತ್ರಿ ಪಾದಯಾತ್ರೆ ಮಾಡಿ ಯಾವಾಗ ತಮ್ಮ ತಮ್ಮ ಮನೆ ಮುಟ್ಟಿದರೋ ಅದು ಆ ದೇವರಿಗೇ ಗೊತ್ತು..ಹೈವೇ ಮೇಲೆಯೇ ಎದೆಯೆತ್ತರ ನೀರು ತುಂಬಿದ ಮೇಲೆ ಇನ್ನು ಸಣ್ಣ ಪುಟ್ಟ ಗಲ್ಲಿ, ಸಂದಿ ಗೊಂದಿಗಳಲ್ಲಿನ ಪರಿಸ್ಥಿತಿ ಏನಾಗಿರಬಹುದೋ ಆ ದೇವರೇ ಬಲ್ಲ..

ಹೇಗೋ ರಾತ್ರಿ ಕಳೆದಾಯ್ತು.ಬೆಳಗ್ಗೆಮನೆಯಲ್ಲಿನೀರಿಲ್ಲ,ಹಾಲಿಲ್ಲ..ಬೇಕೆಂದವರಿಗೆ ಕರಿ ಚಹಾ ಮಾಡಿಕೊಟ್ಟೆ..ನಂತರ ಫಿಲ್ಟರ್ನಲ್ಲಿ ತುಂಬಿಟ್ಟಿದ್ದ ನೀರನ್ನು ಬಳಸಿ ಹತ್ತು ಗಂಟೆಗೆ ದೊಡ್ಡ ಡಬರಿ ತುಂಬಾ ಬಿಸಿಬೇಳೆ ಭಾತ್ ಮಾಡಿ ಇಟ್ಟೆ..ಎದುರು ಮನೆಯವರಿಂದ ಪೇಪರ್ ಪ್ಲೇಟ್ ಗಳನ್ನು ಎರವಲು ಪಡೆದು ಬಿಸಿಬೇಳೆಭಾತ್ ತಿಂದಿದ್ದಾಯ್ತು..ಸಾಧಾರಣ ೧ ಗಂಟೆಯ ಸುಮಾರಿಗೆ ಮಳೆ ಸ್ವಲ್ಪ ಕಡಿಮೆ ಆಯ್ತು..ಮನೆಯಲ್ಲಿದ್ದ ಜನರೂ ಅವರವರ ಮನೆಗೆ ಹೋದರು..ಅಂತೂ ಆ ಎರಡು ದಿನಗಳಲ್ಲಿ ಮುಂಬಯಿಕರರು ಪಟ್ಟ ಪಾಡು ಅಷ್ಟಿಷ್ಟಲ್ಲ..ಮಳೆಗೆ ನೆನೆಯಬಾರದೆಂದು ಒಳಗಿಂದ ಲಾಕ್ ಮಾಡಿಕೊಂಡು ಕಾರಿನಲ್ಲೇ ಕುಳಿತು, ನಂತರ ಹೊರಬರಲಾರದೆ ಜಲಸಮಾಧಿಯಾದ ೫ ವಿದ್ಯಾರ್ಥಿಗಳು,ಕೈ ಹಿಡಿದು ನಡೆಯುತ್ತಲೇ ದೊಡ್ಡ ಗಟಾರದಲ್ಲಿ ಮುಳುಗಿ ಹೋದ ದಂಪತಿಗಳು,ಹೀಗೆ ನೂರಾರು ಸಾವು ನೋವುಗಳ ಸುದ್ದಿ ಕೇಳಿ ಮನ ಮುದುಡಿ ಹೋಗಿತ್ತು.. ಸಾವಿರಾರು ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾದರು,ಸಾವಿರಾರು ಜನರ ಅಮೂಲ್ಯ ಕಾಗದ ಪತ್ರಗಳು,ಸರ್ಟಿಫಿಕೇಟ್ ಗಳು ನೀರುಪಾಲಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯ್ತು..
ಪಶು,ಪಕ್ಷಿಗಳ ಸಾವು ನೋವು ಭೀಕರವಾಗಿದ್ದು, ಅತ್ಯಂತ ದುಃಖದಾಯಕವಾಗಿತ್ತು..ಇಂತಹ ಭೀಕರ ಪ್ರವಾಹ ಮತ್ತೆಂದೂ ಎಲ್ಲೂ ಬಾರದಿರಲೆಂಬ ಪ್ರಾರ್ಥನೆಯೊಡನೆ ನಿಧಾನವಾಗಿ ಮುಂಬಯಿ ಮಹಾನಗರ ಚೇತರಿಸಿಕೊಂಡಿತು..

ಇದು ನನ್ನದೊಂದು ಸಣ್ಣ ಅನುಭವ ಅಷ್ಟೇ..ಈ ಕಷ್ಟದಲ್ಲಿ ಸಿಲುಕಿದವರಿಗೆ ಸ್ಪಂದಿಸಿ ಹತ್ತು ಹಲವಾರು ರೀತಿಯಿಂದ ಸಹಾಯ ಮಾಡಿದ ಸಾರ್ವಜನಿಕರ,ಹಲವು ಸಂಘ,ಸಂಸ್ಥೆಗಳ ಹೃದಯವಂತಿಕೆಯನ್ನು ಹೇಳಲು ಶಬ್ದಗಳು ಕಡಿಮೆ ಆಗಬಹುದು..
ತಮ್ಮ ಜೀವದ ಕಾಳಜಿ ಇಲ್ಲದೆ ಅತ್ಯಂತ ದಕ್ಷತೆಯಿಂದ, ತಾಳ್ಮೆಯಿಂದ ಕಾರ್ಯ ನಿರ್ವಹಿಸಿದ NDRF ನ ಪೂರ್ಣ ಸಿಬ್ಬಂದಿ ವರ್ಗ, ಬೃಹನ್ಮುಂಬಯಿ ನಗರಪಾಲಿಕೆಯ ಸಿಬ್ಬಂದಿ ವರ್ಗ, ಮತ್ತು ಮುಂಬಯಿ ಪೋಲಿಸ್ ಸಿಬ್ಬಂದಿ ವರ್ಗದವರಿಗೆ ಮನದಾಳದಿಂದ ಶತ ಶತ ನಮನಗಳನ್ನು ಅರ್ಪಿಸಬೇಕು..
ಮಧು ವಸ್ತ್ರದ

ತಂಪು ನೀಡಿ ಮನ ತಣಿಸಿ,ಸುಂದರ ರೂಪದೊಡನೆ ಆರಂಭವಾಗುವ ಮುಂಬಯಿ ಮಳೆಗಾಲಕ್ಕೆ ಇನ್ನೊಂದು ರುದ್ರರೂಪವೂ ಇದೆ..ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿವ ಜಡಿ ಮಳೆ ನಗರದ ಜನಜೀವನವನ್ನು ಅಸ್ತವ್ಯಸ್ತ ಮಾಡಿಬಿಡುತ್ತದೆ..೨-೩ ದಿನಗಳ ಕಾಲ ಬಿಟ್ಟೂ ಬಿಡದೆ ಸುರಿವ ಮಳೆ ಮುಂಬಯಿ ಮಹಾನಗರದ ಸಂಚಾರ ವ್ಯವಸ್ಥೆಯನ್ನು ಏರುಪೇರಾಗಿಸುತ್ತದೆ..ರೈಲ್ವೆ ಹಳಿಗಳು ನೀರಿನಲ್ಲಿ ಮುಳುಗಿ ಲೋಕಲ್ ಟ್ರೈನ್ ಗಳು ಬಂದ್ ಆಗುವುದು..ಹೈವೇಗಳಲ್ಲಿ ನೀರು ತುಂಬಿ ಬಸ್,ಕಾರುಗಳ ಚಲನೆ ನಿಂತು ಟ್ರಾಫಿಕ್ ಬಂದ್ ಆಗುವುದು ಇವೆಲ್ಲವೂ ಸರ್ವೇ ಸಾಮಾನ್ಯ ವಿಷಯಗಳು..
೨೦೦೫ ಜುಲೈ ೨೬ ರಂದು ಸುರಿದ ಭಾರಿ ಮಳೆ, ತೀವ್ರ ಚಂಡಮಾರುತ ಮತ್ತು ನಂತರದ ಪ್ರವಾಹದಿಂದ ಮುಂಬಯಿ ಮಹಾನಗರ ತತ್ತರಿಸಿ ಹೋಗಿತ್ತು..ಆ ಸಮಯದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..
ದಿ ೨೬-ಜುಲೈ-೨೦೦೫ ಮುಂಬಯಿನ ಇತಿಹಾಸದಲ್ಲೇ ಎಂದೂ ಮರೆಯಲಾರದಂತಹ ಮಳೆಗಾಲ..
ಪ್ರಕೃತಿಯು ತನ್ನ ಮೌನವನ್ನು ಮುರಿದು ರೌದ್ರ ರೂಪವನ್ನು ತೋರಿಸಿದ ಕರಾಳ ದಿನವದು..
ಆ ದಿನ ಮುಂಬಯಿ ಮಹಾನಗರದ ಜನರು ಎಂದಿನಂತೆ ತಮ್ಮ ದೈನಂದಿನ ಕಾರ್ಯಗಳಲ್ಲಿ ಮಗ್ನರಾಗಿದ್ದರು..
ಬೆಳಗಿನಿಂದಲೂ ಸುರಿಯುತ್ತಲೇ ಇದ್ದ ಮಳೆಯ ರಭಸ ಮಧ್ಯಾಹ್ನ ೧-೨ ಗಂಟೆಯ ಹೊತ್ತಿಗೆ ಹೆಚ್ಚಾಗತೊಡಗಿತು..
ವಿಪರೀತ ಮಳೆಯ ಕಾರಣ ಶಾಲೆಗೆ ರಜೆ ಘೋಷಿಸಲಾಗಿದೆ, ನೀವೇ
ಬಂದು ನಿಮ್ಮ ಮಗನನ್ನು ಕರೆದೊಯ್ಯಿರೆಂದು ಮಗನ ಶಾಲೆಯಿಂದ ಫೋನ್ ಬಂತು..ಭೋರೆಂದು ಸುರಿವ ಮಳೆಯಲ್ಲಿ ರಿಕ್ಷಾ ಹಿಡಿದು ಮಗನ ಶಾಲೆಗೆ ಹೊರಟೆ, ಹೋಗುವ ದಾರಿಯಲ್ಲಿ ಪರಿಚಯದ ಮಂಗಳೂರು ಅಂಗಡಿಯ ಅಣ್ಣನಿಗೆ ಸಾಕಷ್ಟು ಕುರುಕಲು ತಿಂಡಿಗಳನ್ನು ಪ್ಯಾಕ್ ಮಾಡಿಡಲು ಹೇಳಿ ಮುಂದೆ ಹೋದೆ..ಮರಳಿ ಮಗನನ್ನು ಕರೆ ತರುವಾಗ ಅಣ್ಣ ಪ್ಯಾಕ್ ಮಾಡಿ ಇಟ್ಟಿದ್ದ ಬಿಸ್ಕತ್ತು, ಚಾಕೊಲೇಟ್, ಚಕ್ಕುಲಿ, ಕೋಡುಬಳೆ, ಬಾಳೆಕಾಯಿ ಚಿಪ್ಸ್, ಆಲೂ ಚಿಪ್ಸ್,ಬಾಳೆಹಣ್ಣು ಎಲ್ಲವನ್ನೂ ತುಂಬಿಕೊಂಡು, ಇನ್ನು ೨-೩ ದಿನ ಮನೆಯಲ್ಲೇ ಕೂರುವ ಮಕ್ಕಳಿಗೆ ತಿಂಡಿ ತಿನಿಸಿನ ವ್ಯವಸ್ಥೆ ಆಯಿತೆಂದು ನಿಶ್ಚಿಂತಳಾಗಿ ಮನೆಗೆ ಬಂದೆ..(ಅಂದ ಹಾಗೆ ಆಗ ನನ್ನಿಬ್ಬರು ಮಕ್ಕಳೂ ಸಿಕ್ಕಾಪಟ್ಟೆ ತಿಂಡಿಪೋತರಿದ್ದರು,
ಈಗ ಸಿಕ್ಜಾಪಟ್ಟೆ ಡಯಟ್ ಮಾಡ್ತಾರೆ..) ಮುಂದಿನ ಹತ್ತು ನಿಮಿಷಗಳಲ್ಲಿ ಮಗಳು ಅಪೂರ್ವ ಕಾಲೇಜಿನಿಂದ ಬರುವಾಗ ತನ್ನ ಮೂವರು ಗೆಳತಿಯರನ್ನೂ ಕರೆತಂದಳು..ಮಳೆ ಸ್ವಲ್ಪ ಕಡಿಮೆಯಾಗುವವರೆಗೂ
ನಮ್ಮ ಮನೆಯಲ್ಲಿ ತಂಗುವ ವಿಚಾರದಿಂದ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿನ ಬ್ಯಾಂಕ್ ಉದ್ಯೋಗಿ ನನ್ನ ಆಪ್ತ ಗೆಳತಿ ವಸುಂಧರ ತನ್ನ ೧೦ ವರ್ಷದ ಮಗನೊಡನೆ ನಮ್ಮಲ್ಲಿಗೆ ಬಂದಳು..ನಮ್ಮ ಮನೆ ಮೊದಲನೇ ಮಹಡಿಯಲ್ಲಿತ್ತು..ಮನೆಯ ಕೆಳಗೆ ಹೈಕೋರ್ಟ್ ನ ಜಡ್ಜ್ ಶ್ರೀ ದಹಿವಲ್ಕರ್ ಅವರ ಕುಟುಂಬ ಮತ್ತು ಅವರ ಎದುರಿಗೆ ಪಿ ಎಸ,ಐ ಶರ್ಮ ಅವರ ಕುಟುಂಬ ವಾಸವಾಗಿದ್ದರು..ಮಧ್ಯಾಹ್ನ ನಾಲ್ಕು ಗಂಟೆಯ ನಂತರ ಮಳೆ ಹೆಚ್ಚಾಗಿ ನಮ್ಮ ಕೆಳಗಿನ ಮನೆಗಳಲ್ಲಿ ನೀರಿನ ಮಟ್ಟ ಸೊಂಟದಿಂದ ಮೇಲೆ ಏರತೊಡಗಿದಾಗ ಆ ಎರಡೂ ಮನೆಯ ಗೃಹಿಣಿಯರು ಗಾಬರಿಗೊಂಡು ತಮ್ಮ ಪುಟ್ಟ ಪುಟ್ಟ ಮಕ್ಕಳೊಡನೆ ನಮ್ಮ ಮನೆಗೆ ಬಂದು ಸೇರಿದರು..ಮಳೆಯ ಕಾರಣದಿಂದ ಬೆಳಗ್ಗೆಯೇ ರಜಾ ಪಡೆದು ಮನೆಗೆ ಹೋಗಿದ್ದ ನಮ್ಮ ಡ್ರೈವರ್ ಸುರೇಶ್ ಪರದಾಡುತ್ತ ಮತ್ತೆ ವಾಪಸ್ ಬಂದು ಮನೆ ಸೇರಿದ.ಒಂದು ಬೆಡ್ ರೂಮ್, ಹಾಲ್, ಅಡುಗೆ ಮನೆ, ಪ್ಯಾಸೇಜ್,ಮತ್ತು ಬಾಲ್ಕನಿಗಳನ್ನು ಹೊಂದಿದ್ದ ಚಿಕ್ಕ ಮನೆಯಲ್ಲಿ ಆ ದಿನ ಒಟ್ಟು ೧೫ ಜನರು ಕೂಡಿ ಇರಬೇಕಾಯ್ತು…ಶಾಲೆ ಕಾಲೇಜಿನಿಂದ ಹಸಿದು ಬಂದ ಮಕ್ಕಳು ಮತ್ತು ಅತಿಥಿಗಳೊಡನೆ ಸಂಜೆ ಪಾವ್ ಭಾಜಿ, ಚಹಾ ಸೇವಿಸಿದ್ದಾಯ್ತು..ಹೊರಗೆ ಮಳೆಯ ಆರ್ಭಟ ಹೆಚ್ಚುತ್ತಲೇ ಇತ್ತು..ವಿದ್ಯುತ್ ಇಲ್ಲದ ಕಾರಣ ರಾತ್ರಿ ಅಡುಗೆ ಮಾಡಲಾಗಲಿಲ್ಲ..ಊಟಕ್ಕೆ ಮಂಗಳೂರು ಅಣ್ಣನ ಅಂಗಡಿಯಿಂದ ತಂದ ಎಲ್ಲ ತಿನಿಸುಗಳನ್ನೂ ಎಲ್ಲರೂ ಹಂಚಿಕೊಂಡು ತಿಂದೆವು..ರಾತ್ರಿ ಊಟದ ಚಿಂತೆ ಮುಗಿಯಿತು..ಆದರೆ ಲೈಟ್ ಇಲ್ಲದೆ ಫ್ಯಾನ್ ಇಲ್ಲದೆ ವಿಪರೀತ ಸೆಕೆಯಿಂದಾಗಿ ಯಾರಿಗೂ ನಿದ್ರೆ ಬಾರದಾಗಿತ್ತು ಮಲಗಬೇಕೆಂದರೆ ಜಾಗವೂ ಸಾಲದಾಗಿತ್ತು..ಹೇಗೋ ಮಾಡಿ ಪುಟ್ಟ ಮಕ್ಕಳನ್ನು ಮಲಗಿಸಿ ನಾವೆಲ್ಲರೂ ಅಂತಾಕ್ಷರಿ ಆಟ ಆಡುತ್ತಾ ಕುಳಿತು ಜಾಗರಣೆ ಮಾಡಿದೆವು..
ಬೆಳಗಿನಜಾವ ೫ ಗಂಟೆಗೇ ಡ್ಯೂಟಿಗೆ ಹೋಗಿದ್ದ ನನ್ನ ಪತಿರಾಯರಿಂದ ಫೋನ್ ಕರೆಯೂ ಇಲ್ಲದಾಗಿ ತಲ್ಲಣಗೊಂಡ ನನ್ನ ಮನಕ್ಕೆ ನಿದ್ರೆ ಬಾರದಾಗಿತ್ತು..
ಬಾಲ್ಕನಿಯಿಂದ ಹೊರಗೆ ಹೈವೇ ಮೇಲೆ ನಡೆಯುತ್ತಿದ್ದ ಜನರ ಗಲಿಬಿಲಿ ಗೊಂದಲಗಳನ್ನು ನೋಡುತ್ತ ನಿಂತೇ ಇಡೀ ರಾತ್ರಿ ಕಳೆದೆ..
ಮನೆಯ ಮುಂದಿನ ಗೈವೇ ಮೇಲಿನ ದೃಶ್ಯ ಬೆರಗಾಗಿಸುವಂತಿತ್ತು..
ಮಧ್ಯಾಹ್ನ ಆಫೀಸು ಬಿಟ್ಟ ನಂತರ ತಮ್ಮ ನೆಲೆ ಸೇರಲು ಬಸ್,ಟ್ರೈನ್ ಗಳಿಲ್ಲದೆ,ಆಸರೆಗೆ ತಾಣವೂ ಇಲ್ಲದೆ ಹತಾಶರಾಗಿ ತಮ್ಮ ಗೂಡಿನೆಡೆಗೆ ನಡೆಯುತ್ತಲೇ ಹೊರಟಿದ್ದ ಸಹಸ್ರಾರು ಜನರಿಗೆ ರಾತ್ರಿಯ ಚಂದ್ರನ ಬೆಳಕೊಂದೇ ಆಧಾರವಾಗಿತ್ತು..ಒಬ್ಬರು ಮತ್ತೊಬ್ಬರ ಕೈ ಹಿಡಿದು ಎದೆಯೆತ್ತರ ನೀರಿನಲ್ಲಿ ನಡೆಯುತ್ತ ಸಾಗುತ್ತಿದ್ದರು..ಹೆಣ್ಣು ಗಂಡು ಯುವಕರು,ವಯಸ್ಕರು ಎಂಬ ಬೇಧ ಭಾವವಿಲ್ಲದೆ ಮುನ್ನಡೆಯುತ್ತಿದ್ದ ಎಲ್ಲರ ಬಾಯಿಂದ ಗಣಪತಿ ಬಪ್ಪಾ ಮೋರಯಾ..ಗಣಪತಿ ಬಪ್ಪಾ ಮೋರಯಾ..ಈ ಕೂಗೊಂದೇ
ಹೊರಬರುತ್ತಿತ್ತು..ಮಧ್ಯಾಹ್ನದಿಂದ ಕುಡಿಯಲು ನೀರು ಸಹ ಇಲ್ಲದೆ, ಹಸಿವಿನಿಂದ ಬಳಲುತ್ತ ಆ ಪ್ರವಾಹದ ನೀರಲ್ಲಿ ನಡೆಯುತ್ತ ಹೊರಟ ಜನರ ದಿಟ್ಟತನ ನಿಜಕ್ಕೂ ಮೆಚ್ಚುವಂತಿತ್ತು..(ಬೇರೇನೂ ದಾರಿ ಇರಲಿಲ್ಲ ಎಂಬುದೂ ಸತ್ಯ..)ಅವರೆಲ್ಲರೂ ಎದೆಯೆತ್ತರ ನೀರಿನಲ್ಲಿ ಇಡೀ ರಾತ್ರಿ ಪಾದಯಾತ್ರೆ ಮಾಡಿ ಯಾವಾಗ ತಮ್ಮ ತಮ್ಮ ಮನೆ ಮುಟ್ಟಿದರೋ ಅದು ಆ ದೇವರಿಗೇ ಗೊತ್ತು..ಹೈವೇ ಮೇಲೆಯೇ ಎದೆಯೆತ್ತರ ನೀರು ತುಂಬಿದ ಮೇಲೆ ಇನ್ನು ಸಣ್ಣ ಪುಟ್ಟ ಗಲ್ಲಿ, ಸಂದಿ ಗೊಂದಿಗಳಲ್ಲಿನ ಪರಿಸ್ಥಿತಿ ಏನಾಗಿರಬಹುದೋ ಆ ದೇವರೇ ಬಲ್ಲ..ಹೇಗೋ ರಾತ್ರಿ ಕಳೆದಾಯ್ತು.ಬೆಳಗ್ಗೆ ಮನೆಯಲ್ಲಿ ನೀರಿಲ್ಲ,ಹಾಲಿಲ್ಲ..ಬೇಕೆಂದವರಿಗೆ ಕರಿ ಚಹಾ ಮಾಡಿಕೊಟ್ಟೆ..ನಂತರ ಫಿಲ್ಟರ್ನಲ್ಲಿ ತುಂಬಿಟ್ಟಿದ್ದ ನೀರನ್ನು ಬಳಸಿ ಹತ್ತು ಗಂಟೆಗೆ ದೊಡ್ಡ ಡಬರಿ ತುಂಬಾ ಬಿಸಿಬೇಳೆ ಭಾತ್ ಮಾಡಿ ಇಟ್ಟೆ..ಎದುರು ಮನೆಯವರಿಂದ ಪೇಪರ್ ಪ್ಲೇಟ್ ಗಳನ್ನು ಎರವಲು ಪಡೆದು ಬಿಸಿಬೇಳೆಭಾತ್ ತಿಂದಿದ್ದಾಯ್ತು..ಸಾಧಾರಣ ೧ ಗಂಟೆಯ ಸುಮಾರಿಗೆ ಮಳೆ ಸ್ವಲ್ಪ ಕಡಿಮೆ ಆಯ್ತು..ಮನೆಯಲ್ಲಿದ್ದ ಜನರೂ ಅವರವರ ಮನೆಗೆ ಹೋದರು..ಅಂತೂ ಆ ಎರಡು ದಿನಗಳಲ್ಲಿ ಮುಂಬಯಿಕರರು ಪಟ್ಟ ಪಾಡು ಅಷ್ಟಿಷ್ಟಲ್ಲ..ಮಳೆಗೆ ನೆನೆಯಬಾರದೆಂದು ಒಳಗಿಂದ ಲಾಕ್ ಮಾಡಿಕೊಂಡು ಕಾರಿನಲ್ಲೇ ಕುಳಿತು, ನಂತರ ಹೊರಬರಲಾರದೆ ಜಲಸಮಾಧಿಯಾದ ೫ ವಿದ್ಯಾರ್ಥಿಗಳು,ಕೈ ಹಿಡಿದು ನಡೆಯುತ್ತಲೇ ದೊಡ್ಡ ಗಟಾರದಲ್ಲಿ ಮುಳುಗಿ ಹೋದ ದಂಪತಿಗಳು,ಹೀಗೆ ನೂರಾರು ಸಾವು ನೋವುಗಳ ಸುದ್ದಿ ಕೇಳಿ ಮನ ಮುದುಡಿ ಹೋಗಿತ್ತು.. ಸಾವಿರಾರು ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾದರು,ಸಾವಿರಾರು ಜನರ ಅಮೂಲ್ಯ ಕಾಗದ ಪತ್ರಗಳು,ಸರ್ಟಿಫಿಕೇಟ್ ಗಳು ನೀರುಪಾಲಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯ್ತು..

ಉತ್ಸಾಹ ಖುಷಿ ಸ್ಪೂರ್ತಿಗಳ ಆಗರ..
ಭಾಗ-1
ಮುಂಬಯಿ ಮಹಾನಗರದಲ್ಲಿ ಮೊದಲ ಮಳೆ ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗುತ್ತದೆ.
ಹವಾಮಾನ ಇಲಾಖೆಯ ಪ್ರಕಾರ ಮುಂಬಯಿನ ಮೊದಲ ಮಳೆಯ ದಿನಾಂಕವನ್ನು ಜೂನ್ ೮ ಎಂದು ಪರಿಗಣಿಸಲಾಗುತ್ತದೆ.. ಈ ತಿಂಗಳಿನಲ್ಲಿ ಮುಂಬಯಿ ಮಹಾ ನಗರಕ್ಕೆ ಹೊಸ ಕಳೆ ಬರುತ್ತದೆ..ಮೊದಲ ಮಳೆಯಲ್ಲಿ ತೊಯ್ದು ಮೈಮೇಲಿನ ಧೂಳನ್ನು ತೊಳೆದುಕೊಂಡು ಸ್ವಚ್ಛವಾದ ಗಿಡ ಮರಗಳೆಲ್ಲ ಹೊಸ ಹಸಿರು ಉಡುಗೆಯನುಟ್ಟು ನಲಿಯುವಂತೆ ಭಾಸವಾಗುತ್ತದೆ..ಎಲ್ಲೆಡೆಯೂ ಆಕಾಶದೆತ್ತರದ ಬಿಲ್ಡಿಂಗ್ ಗಳನ್ನು, ಟವರ್ ಗಳನ್ನು ಹೊಂದಿ, ದೊಡ್ಡ ಕಾಂಕ್ರೀಟ್ ಕಾಡಿನಂತೆ ಕಾಣುವ ಮುಂಬಯಿ ನಗರ ಮುಂಗಾರು ಮಳೆಯ ಸ್ಪರ್ಶದಿಂದ ತನ್ನೊಳಗಿನ ಪ್ರಕೃತಿ ಸೌಂದರ್ಯವನ್ನು ಹೊರ ಹಾಕಿ ಹೊಸ ರೂಪದೊಂದಿಗೆ ಜನ ಮನಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತದೆ..
ಮುಂಬಯಿನ ಮಳೆ ಎಂದರೆ ಸಾಮಾನ್ಯವಲ್ಲ..ಕೆಲವರಿಗೆ ಕವಿತೆಯಾದರೆ,ಕೆಲವರಿಗೆ ಸಂಗೀತ, ಕೆಲವರಿಗೆ ಸಂಕಟಗಳನ್ನು ಹೊತ್ತು ತರುವ ಬಿರುಗಾಳಿ ಇದ್ದಂತೆ..ಎಲ್ಲರ ಜೀವನವೂ ಬದಲಾವಣೆ ಪಡೆಯುತ್ತದೆ..ಬಂದರುಗಳಲ್ಲಿ
ಹಡಗುಗಳು ಚಲಿಸುವ ರೀತಿಯಲ್ಲಿ ಬದಲಾವಣೆ, ಲೋಕಲ್ ಟ್ರೈನ್ ಗಳ ಸಮಯ ಬದಲಾವಣೆ ಜೊತೆ ಆಕಸ್ಮಿಕವಾಗಿ ಬಂದ್ ಆಗುವುದು, ಚೌಪಾಟಿಗಳಲ್ಲಿ ಸಾಗರದಲೆಗಳ ಹುಚ್ವು ಓಟ, ಬಸ್ ಸ್ಟಾಪ್ ಗಳಲ್ಲಿ, ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಒದ್ದೆಯಾಗಿ, ಒಣಗುವ ಅವಕಾಶವಿಲ್ಲದೆ ನಿಂತ ಜನರ ಪರದಾಟ,ಬಣ್ಣ ಬಣ್ಣದ ರೈನ್ ಕೋಟ್ ಗಳನ್ನು ಧರಿಸಿ ಶಾಲೆಯ ಬಸ್ ನ ದಾರಿ ನೋಡುತ್ತ ನಿಂತ ಮಕ್ಕಳು,
ಇವೆಲ್ಲವೂ ಮುಂಬಯಿ ಮಳೆಗಾಲದಲ್ಲಿ ಸಹಜವಾಗಿಯೇ ಕಾಣಸಿಗುವ ದೃಶ್ಯಗಳು..
ವೈಶಾಖದ ಶಾಖದಿಂದ ಬಳಲಿ ಬೆಂಡಾಗಿದ್ದ ಮುಂಬಯಿನ ಜನರು ಜೂನ್ ಮೊದಲ ವಾರದಲ್ಲಿ ದರ್ಶನ ನೀಡುವ ತಮ್ಮ ಮೆಚ್ಚಿನ ವರುಣ ದೇವನಿಗಾಗಿ ಆತುರದಿಂದ ಕಾಯುತ್ತಾ ಇರುತ್ತಾರೆ.ಮಳೆಯ ಆಗಮನದೊಂದಿಗೆ ಮುಂಬಯಿಕರರ ಉತ್ಸಾಹ ಉಲ್ಲಾಸಗಳು ಗರಿ ಬಿಚ್ಚಿ ನರ್ತಿಸಲಾರಂಭಿಸುತ್ತವೆ..
ಮಕ್ಕಳ ಶಾಲೆ ಆರಂಭ (ಜೂನ್ ೧೪) ಆಗುವುದರೊಳಗೆ ಇಲ್ಲಿನ ಜನ ಒಂದೆರಡು ಮಳೆಗಾಲದ ಪಿಕ್ ನಿಕ್ ಗಳನ್ನು ಆಯೋಜಿಸುತ್ತಾರೆ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ಪ್ರವಾಸ ಮಾಡುತ್ತಾರೆ..
ಮುಂಬಯಿನ ಆಸುಪಾಸಿನಲ್ಲಿರುವ ಹಲವಾರು ನಿಸರ್ಗಧಾಮಗಳಿಗೆ ಭೇಟಿ ನೀಡಿ ಒಂದೆರಡು ದಿನಗಳ ಕಾಲ ಮೊದಲ ಮಳೆಯ ಆಹ್ಲಾದಕರ ಅನುಭವವನ್ನು ಪಡೆದು ಆನಂದಿಸುತ್ತಾರೆ..
ಮುಂಬೈ ಮತ್ತು ಠಾಣೆ ಈ ಎರಡು ಉಪನಗರಗಳ ನಡುವೆ ದಟ್ಟವಾಗಿ ಹರಡಿರುವ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಮಳೆಗಾಲದ ಪಿಕ್ನಿಕ್ ಮತ್ತು ವಾರಾಂತ್ಯದ ಚಿಕ್ಕ ಪ್ರವಾಸಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ.
ನಗರದ ಹೃದಯ ಭಾಗದಲ್ಲಿ ೧೦೫ ಚದರ ಕಿಲೋಮೀಟರ್ ಹರಡಿರುವ ಈ ವನದಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳನ್ನ ನೋಡಬಹುದು..ಇದಲ್ಲದೆ,
ಉದ್ಯಾನವನದೊಳಗಿರುವ ೨000 ಸಾವಿರ ವರ್ಷಗಳಷ್ಟು ಪುರಾತನ ಕಾನ್ಹೇರಿ ಗುಹೆಗಳನ್ನೂ ನೋಡಬಹುದು.ಪ್ರವಾಸಿಗರು ಲಯನ್ ಸಫಾರಿಯೊಂದಿಗೆ ವನದೊಳಗಿನ ನೈಸರ್ಗಿಕ ಚಿಕ್ಕ ಪುಟ್ಟ ಜಲಪಾತಗಳು, ಬೆಟ್ಟ ಕಣಿವೆಗಳ ಸೌಂದರ್ಯವನ್ನು ಸವಿಯುತ್ತಾರೆ..
ತುಂತುರು ಮಳೆಯ ಸುಂದರ ಸಂಜೆಯಲ್ಲಿ ದಕ್ಷಿಣ ಮುಂಬಯಿನ ಮರೀನ್ ಲೈನ್ ತೀರದಲ್ಲಿ ಕುಳಿತು ಉಕ್ಕೇರುತ ಆಟವಾಡುವ ಬಿಳಿ ನೊರೆಯಲೆಗಳನ್ನು ನೋಡಿ ಆನಂದಿಸಲು ಜನ ಸಾಗರವಿಲ್ಲಿ ನೆರೆದಿರುತ್ತದೆ..ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ,ಗೇಟ್ ವೇ ಆಫ್ ಇಂಡಿಯಾ, ಜುಹೂ, ಗೋರಾಯಿ ಮುಂತಾದ ಸಮುದ್ರ ತೀರಗಳಲ್ಲಿ ಮಳೆಯಲ್ಲಿ ನೆನೆಯುತ್ತಾ, ರಸ್ತೆಯ ಪಕ್ಕದಲ್ಲಿನ ತಿನಿಸುಗಳನ್ನು ತಿನ್ನುತ್ತ ಸೂರ್ಯಾಸ್ತದ ಅಂದ ನೋಡಿ ಖುಷಿ ಪಡುತ್ತಾರೆ..ಈ ಬೀಚ್ ಗಳಲ್ಲಿ ಭೇಲ್ ಪುರಿ,ಪಾಣಿಪುರಿ, ಶೇವ್ ಪುರಿ, ರಗಡಾ ಪ್ಯಾಟಿಸ್ ಈ ತಿನಿಸುಗಳನ್ನು ಮಾರುವ ಚಿಕ್ಕ ಚಿಕ್ಕ ಕೈ ಗಾಡಿ,ಹೋಟೆಲ್ ಗಳಲ್ಲಿ ಜನ ಜಾತ್ರೆಯೇ ನೆರೆದಿರುತ್ತದೆ..
ಜೊತೆಗೆ ಮೆಕ್ಕೆಜೋಳದ ತೆನೆಯನ್ನು ಕೆಂಡದಮೇಲೆ ಹದವಾಗಿ ಸುಟ್ಟು ಉಪ್ಪು, ಖಾರ, ನಿಂಬೆಹುಳಿ ಸವರಿ ಮಾರುವವರು ಇರುತ್ತಾರೆ..ಈ ಮೆಕ್ಕೆಜೋಳದ ತೆನೆಗಳಿಗೆ ಇಲ್ಲಿ ಭುಟ್ಟಾ ಎನ್ನುತ್ತಾರೆ..ಇದು ಅತ್ಯಂತ ಬೇಡಿಕೆಯ, ಎಲ್ಲರೂ ಇಷ್ಟಪಡುವ ರುಚಿಕರ ತಿನಿಸು..ಸಮುದ್ರ ತೀರದ ತಂಪುಗಾಳಿಯಲ್ಲಿ ತುಂತುರುಮಳೆಯಲ್ಲಿ ನೆನೆಯುತ್ತ ಬಿಸಿ ಬಿಸಿಯಾದ ಈ ಮೆಕ್ಕೆಜೋಳವನ್ನು ತಿನ್ನುವುದರಲ್ಲಿ ಅದೆಂಥಾ ಮಜಾ ಇರುತ್ತೆ ಅಂತೀರಿ..
ಆಹಾ..ಇದರ ಜೊತೆಗೆ
“ಚನಾ ಜೋ಼ರ್ ಗರಮ್” ತಿನಿಸನ್ನು ಸವಿಯುತ್ತ ತುಂತುರು ಮಳೆಯಲ್ಲಿ ರಸ್ತೆ ಬದಿಯಲ್ಲಿ,ಬೀಚ್ ಗಳಲ್ಲಿ ಅಡ್ಡಾಡುತ್ತ ಮೊದಲ ಮಳೆಯ ಆನಂದವನ್ನು ಅನುಭವಿಸುತ್ತಾರೆ…
“ಚನಾ ಜೋ಼ರ್ ಗರಂ ” ಇದು ಮುಂಬಯಿನ ಬೀದಿಗಳಲ್ಲಿ ಮಾರುವ ಜನಪ್ರಿಯವಾದ ಒಂದು ತಿನಿಸು. ಬೇಯಿಸಿದ ಕಡಲೆಕಾಳಿಗೆ ಉಪ್ಪು, ಖಾರದಪುಡಿ, ಮತ್ತು ಲಿಂಬೆ ರಸವನ್ನು ಸೇರಿಸಿ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿಸೊಪ್ಪು ಹಾಕಿ ಕಾಗದದ ಪೊಟ್ಟಣಗಳಲ್ಲಿ ಹಾಕಿ ಮಾರುತ್ತಾರೆ…ಈ ಕುರುಕಲು ತಿನಿಸು ಮುಂಬಯಿನ ಬೀಚ್ ಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಮಳೆಗಾಲದ ವಾರಾಂತ್ಯದಲ್ಲಿ ಹೊರಗೆ ತಿರುಗಾಡಲು ಹೋಗುವ ಜನರಲ್ಲಿ ಮಕ್ಕಳಿಗೆ,ಯುವಕ ಯುವತಿಯರಿಗೆ ಅಚ್ಚುಮೆಚ್ಚಿನ ತಿನಿಸು ಇದು..
ಮುಂಬಯಿನ ಸುತ್ತಮುತ್ತಲೂ ೪೦ರಿಂದ ೫೦ ಕಿಮೀ ಅಂತರದಲ್ಲಿ ಹತ್ತಾರು ಅತ್ಯುತ್ತಮ ಪ್ರವಾಸಿ ತಾಣಗಳಿವೆ..
“ಭಾರತದ ಅತ್ಯಂತ ಮುದ್ದಾದ ಪುಟ್ಟ ಗಿರಿಧಾಮ” ಎಂದು ಕರೆಯಲ್ಪಡುವ ಮಾಥೆರಾನ್, ಪುಟ್ಟ ಪುಟ್ಟ ಜಲಪಾತ, ಝರಿ ತೊರೆಗಳಿಂದ ತುಂಬಿದ ಲೋಣಾವಳ,ಖಂಡಾಳ, ಕರ್ನಾಳ, ಅಲಿಬಾಗ್, ಮಹಾಬಲೇಶ್ವರ, ಭಂಡಾರಧರ ಇನ್ನೂ ಮುಂತಾದ ನಿಸರ್ಗ ರಮ್ಯ ಪ್ರದೇಶಗಳಿಗೆ ಇಲ್ಲಿಯ ಜನ ಭೇಟಿ ನೀಡಿ ಮುಂಗಾರು ಮಳೆಯ ಪ್ರವಾಸದ ಸುಖಾನುಭವದಲ್ಲಿ ತೇಲುತ್ತಾರೆ..
ಇಳೆಯ ಕೊಳೆ ತೊಳೆದು ಹೊಸ ಬದಲಾವಣೆ, ಹೊಸ ಭಾವ, ಭರವಸೆಗಳೊಂದಿಗೆ ಬಾಳಿನಲ್ಲಿ ಮುನ್ನಡೆಯಲು ಪ್ರೇರೇಪಿಸುವ ಈ ವರ್ಷಋತು ಕಾಲಚಕ್ರದ ಗತಿಗೆ ಪೂರಕವಾಗಿ ಬದುಕನ್ನು ಸ್ವೀಕರಿಸಬೇಕು ಎಂಬ ದಿವ್ಯ ಸಂದೇಶವನ್ನು ನೀಡುತ್ತದೆ..
******