ಕಾವ್ಯ ಸಂಗಾತಿ
ಭಾವ ಸುಧೆ(ರಾಧಾ ಶಂಕರ್ ವಾಲ್ಮೀಕಿ)
“ಜೀವನ ಅಸ್ತವ್ಯಸ್ತ”
ದತ್ತಪದ ಪ್ರಕೃತಿ ಮುನಿದಾಗ….!

ಪ್ರಕೃತಿ ಮುನಿದಾಗ ಭೂಮಿ ನಾಶವಾಗುವುದು
ಜನರ ಜೀವನ ಅಸ್ತವ್ಯಸ್ತವಾಗುವುದು
ಹಸಿವನಿಗಿಸಿಕೊಳ್ಳಲು ಅನ್ನವಿಲ್ಲದಾಗುವುದು
ಕುಡಿಯಲು ಸ್ವಚ್ಛವಾದ ನೀರು ಸಿಗಲಾಗದು//
ಹರಿವ ನೀರು ಹೊಲಗದ್ದೆಗಳ ಸೇರುವುದು
ರೈತ ಬೆಳೆದ ಬೆಳೆಯು ನಾಶವಾಗುವುದು
ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಬದುಕ ನಡೆಸಲಾಗದು
ಪ್ರಕೃತಿ ವಿನಾಶಕ್ಕೆ ಜನರೇ ಕಾರಣರಾಗಿರುವುದು//
ತನಗೆ ಬೇಕಾದ ಜೀವನ ಕಟ್ಟಿಕೊಳ್ಳುವುದು
ಪ್ರಕೃತಿಯ ನಡುವೆ ಅಸಾಧ್ಯವಾಗುವುದು
ಪ್ರಕೃತಿಯ ಮುನಿಸನ್ನು ತಣಿಸುವುದು
ಮರ-ಗಿಡಗಳನ್ನು ನೆಟ್ಟು ಬೆಳೆಸುವುದು//
ಸಕಲ ಜೀವ ರಾಶಿ ಹುಟ್ಟುವ ಧರೆಯಿದು
ಋಣಿಯಾಗಿರಬೇಕು ನಾಶಕ್ಕೆ ಮುಂದಾಗಬಾರದು
ಉಳಿಸಲು ಮುಂದಾಗಬೇಕು ವನಸಿರಿಗಳನ್ನು
ಬೆಳೆಸಲು ಪಣ ತೊಡಬೇಕು ಮರ-ಗಿಡಗಳನ್ನು//
ಮುಂದಿನ ಪೀಳಿಗೆಯ ಏಳಿಗೆಗೆ ಕೈಜೋಡಿಸಬೇಕು
ಎಲ್ಲರು ಒಂದಾಗಿ ಪ್ರಕೃತಿ ಮುನಿಸ ತೊರೆಯಬೇಕು
ಕಾಡುಗಳ ಕಡಿಯುವುದನ್ನು ಶೀಘ್ರ ನಿಲ್ಲಿಸಬೇಕು
ಬೆಟ್ಟಗುಡ್ಡಗಳ ನಾಶ ಮಾಡುವುದ ತಡೆಯಬೇಕು//
ಭಾವ ಸುಧೆ.
