ಬೆಳಗಿನ ಜಾವ ಎದ್ದು ನಿತ್ಯ ವಿಧಿಗಳನ್ನು ಪೂರೈಸುವ ಮುನ್ನ ಕೊಂಚ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಒಂದಷ್ಟು ಹನಿ ನಿಂಬೆರಸವನ್ನು ಸೇರಿಸಿ ಸೇವಿಸಿದರೆ ದೇಹದ ತೂಕ ಖಂಡಿತವಾಗಿ ಇಳಿಮುಖವಾಗುತ್ತದೆ…. ದೈನಂದಿನ ಈ ಕ್ರಿಯೆ ಮುಂದುವರೆದರೆ ಋತು ಸಹಜವಾಗಿ ಬರುವ ನೆಗಡಿ, ಕೆಮ್ಮು, ಜ್ವರ ಮತ್ತಿತರ ದೇಹ ಬಾಧೆಗಳನ್ನು ತಡೆಯುವಷ್ಟು ರೋಗ ನಿರೋಧಕ ಶಕ್ತಿ ನಮ್ಮಲ್ಲಿ ಉತ್ಪತ್ತಿಯಾಗುತ್ತದೆ.

ನವಜಾತ ಶಿಶುವಿಗೆ ಹುಟ್ಟಿದ ಕೂಡಲೇ ತಾಯಿಯ ಅಧರಾಮೃತವನ್ನು ಸವಿಯುವ ಮುನ್ನ ಒಂದು ಹನಿ ಜೇನುತುಪ್ಪವನ್ನು ನಾಲಿಗೆಗೆ ನೆಕ್ಕಿಸುತ್ತಾರೆ ಅಂದರೆ ಜೇನುತುಪ್ಪದ ಮಹತ್ವದ ಅರಿವಾದೀತು ನಮಗೆ.

 ನಮ್ಮ ಮನೆಯಲ್ಲಂತೂ ನೆಗಡಿ, ಕಫ,ಕೆಮ್ಮು ಗಂಟಲು ಕಿರಿಕಿರಿಗೆ ಒಂದು ಹಿಪ್ಪಲಿ ತುಂಡು ಮತ್ತು ಒಂದು ಲವಂಗವನ್ನು ಚೆನ್ನಾಗಿ ಅರೆದು ಒಂದು ಚಮಚ ಜೇನುತುಪ್ಪದಲ್ಲಿ ಬೆಳಗಿನ ಜಾವ ಸೇವಿಸಿದರೆ ಕೆಮ್ಮು ನೆಗಡಿಗಳು ಮಾಯವಾದರೆ ಕಫ ಕತ್ತರಿಸಿ ಹೋಗುತ್ತದೆ….. ತುಸು ಹೆಚ್ಚು ನೀರು ಸೇವಿಸಿದರೆ ಉಷ್ಣ ಕೂಡ ಬಾಧಿಸುವುದಿಲ್ಲ. ಬಹಳಷ್ಟು ತೊಂದರೆಗಳಿಗೆ ಜೇನುತುಪ್ಪ ರಾಮಬಾಣ.

 ನೀರನ್ನು ಕೂಡ ಸೇರಿಸದ ಕೇವಲ ಹೂವಿನ ಮಕರಂದದಿಂದ ತಯಾರಿಸಲ್ಪಡುವ ಜೇನುತುಪ್ಪ ನೈಸರ್ಗಿಕ ಸಿಹಿಕಾರಕವಾಗಿದೆ. ಜೇನು ಹುಳುಗಳಿಂದ ತಯಾರಿಸಲ್ಪಡುವ ಈ ಜೇನುತುಪ್ಪವನ್ನು ಆಯುರ್ವೇದ ಶಾಸ್ತ್ರದಲ್ಲಿ ಮಧುರವಾದ ಅಮೃತ ಎಂದು ಕರೆಯಲಾಗಿದೆ.
 ಅಧರಕ್ಕೆ ಸಿಹಿ, ಉದರಕ್ಕೆ ಔಷಧಿಯಾಗಿ ಪರಿಣಮಿಸುವ ಜೇನುತುಪ್ಪದ ಬಳಕೆ ಆಯುರ್ವೇದ ಔಷಧಿಗಳಲ್ಲಿ ಕಡ್ಡಾಯ ಎಂಬಂತೆ ಆಗಿದೆ. ಆಂಟಿ ಮೈಕ್ರೋಬಿಯಲ್, ಆಂಟಿ ಫಂಗಲ್ ಗುಣಗಳನ್ನು ಹೊಂದಿರುವ ಜೇನುತುಪ್ಪದ ಬಳಕೆ ಹಲವಾರು ದೈಹಿಕ ತೊಂದರೆಗಳಿಗೆ ಪರಿಹಾರ ನೀಡುತ್ತದೆ.

 ಜೇನು ಹುಳು ಹೂವಿನಿಂದ ಹೂವಿಗೆ ಸಾಗಿ ಅವುಗಳ ಮಕರಂದವನ್ನು ಮಾತ್ರ ಸೇವಿಸಿ ಮರಳಿ ತನ್ನ ಸ್ಥಳಕ್ಕೆ ಬಂದು ಗೂಡಿನಲ್ಲಿ ಜೇನನ್ನು ತಯಾರಿಸುತ್ತದೆ. ಈ ಜೇನುತುಪ್ಪ ಪರಿಶುದ್ಧವಾದುದು ಎಂದು ಪರಿಗಣಿಸಲ್ಪಡುತ್ತದೆ. ದೇವರ ಪೂಜೆ ಮಾಡುವಾಗ ಅಭಿಷೇಕಕ್ಕೆ ಬೇಕಾಗುವ ಪಂಚ ದ್ರವ್ಯಗಳಲ್ಲಿ ಜೇನುತುಪ್ಪವೂ ಒಂದು ಎಂಬುದು ಅದರ ಶ್ರೇಷ್ಠತೆಯನ್ನು ಹೇಳುತ್ತದೆ.

 ಅಂತಹ ಜೇನುತುಪ್ಪದ ಕೆಲ ಉಪಯೋಗಗಳನ್ನು  ನೋಡೋಣ.

* ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ತೆಗೆದು ಸೋಸಿದ  ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಔಷಧಿಯಂತೆ ಸೇವಿಸಿದರೆ ಕೆಮ್ಮು ಇನ್ನಿಲ್ಲದಂತೆ ಮಾಯವಾಗುತ್ತದೆ.
ಈರುಳ್ಳಿಯ ಘಾಟನ್ನು ತಡೆಯಲು, ಔಷಧಿಯುಕ್ತ ಗುಣದ ಉಪಯುಕ್ತತೆಯನ್ನು ಪಡೆಯಲು ಮಧುರ ರುಚಿಯನ್ನು ಹೊಂದಿರುವ ಜೇನ ಹನಿ ಸಹಾಯಕವಾಗುತ್ತದೆ.

* ಚೆನ್ನಾಗಿ ನಿದ್ದೆ ಬರುತ್ತಿಲ್ಲ ಎಂದು ಒದ್ದಾಡುವವರು ಯಾವುದಾದರೂ ಹರ್ಬಲ್ ಟೀ ಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಒಳ್ಳೆಯ ಸೊಂಪಾದ ನಿದ್ರೆ ಖಂಡಿತ.

 *ಹಲ್ಲು ನೋವಿದ್ದಾಗಲೂ ಕೂಡ ಒಂದು ಇಲ್ಲವೇ ಎರಡು ಲವಂಗಗಳನ್ನು ಜಜ್ಜಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇವಿಸಿದರೆ ಹಲ್ಲು ನೋವು ಶಮನವಾಗುತ್ತದೆ.

* ಒಂದು ಚಮಚ ಜೇನುತುಪ್ಪದೊಂದಿಗೆ ಕಾಲು ಹೋಳು ನಿಂಬೆ ರಸವನ್ನು ಬೆರೆಸಿ ಸೇವಿಸಿದರೆ ಗಂಟಲಿನ ಕಿರಿಕಿರಿ ಮಾಯವಾಗುತ್ತದೆ.

 *ಇನ್ನು ಆಗಾಗ ಅರೆ ತಲೆ ನೋವಿನಿಂದ ಬಳಲುವವರ ಸ್ಥಿತಿಯಂತೂ ಆ ದೇವರಿಗೇ ಪ್ರೀತಿ…. ಮುಖದ ಹಲವೆಡೆಗಳಲ್ಲಿ ಕಫದ ರೀತಿಯ ಶ್ಲೇಶ್ಮ ಸಂಗ್ರಹವಾಗಿ
ಒಂದೇ ಸಮನೆ ತಲೆಯ ಅರ್ಧಭಾಗ ಸಿಡಿದಂತೆ ಭಾಸವಾಗುವ ಈ ಅರೆ ತಲೇನೋವು ಜೀವನವೇ ಬೇಡ ಎಂಬಷ್ಟು ಬೇಸರಕ್ಕೆ, ನೋವಿಗೆ ಈಡು ಮಾಡುತ್ತದೆ. ಅಂತಹವರ ಅರೆತಲೆನೋವಿಗೆ ಒಂದರ್ಧ ಚಮಚ ವಿನೆಗರ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇವಿಸಿದರೆ ಸಾಕು… ಅರೆ ತಲೆನೋವಿನಿಂದ ಮುಕ್ತಿ ದೊರೆಯುತ್ತದೆ.

 ಶುಂಠಿ ರಸದೊಂದಿಗೆ ಜೇನುತುಪ್ಪವನ್ನು ಸೇವಿಸಿದರೂ ಕೂಡ ತಲೆನೋವಿನಿಂದ ಮುಕ್ತಿ ಪಡೆಯಬಹುದು.

ಜೇನುತುಪ್ಪವು ಹಲವಾರು ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕಾರ್ಬೋಹೈಡ್ರೇಟ್‌ಗಳು, ಕ್ಯಾಲೋರಿಗಳು, ರಿಬೋಫ್ಲಾವಿನ್ ಮತ್ತು ತಾಮ್ರದಿಂದ ಸಮೃದ್ಧವಾಗಿದೆ. ಜೇನುತುಪ್ಪವು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ ಆದ್ದರಿಂದ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರೋಟೀನ್ ಮತ್ತು ನಾರಿನ ಅಂಶದೊಂದಿಗೆ, ಜೇನುತುಪ್ಪವು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಆದಾಗ್ಯೂ, ಜೇನುತುಪ್ಪದಿಂದ ಹೆಚ್ಚಿನ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು, ನೀವು ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ನೀವು ಗಮನಿಸಬೇಕು, ಇದನ್ನು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ.

ಜೇನುತುಪ್ಪದಲ್ಲಿ ಇರುವ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಹೃದಯದ ಆರೋಗ್ಯಕ್ಕೆ ಉತ್ತಮ ಮೂಲವಾಗಿದೆ. ಇದು ಹೃದಯ ಕಾಯಿಲೆಗಳ ಅಪಾಯಗಳನ್ನು ತಡೆಗಟ್ಟಲು, ಹೃದಯ ಬಡಿತವನ್ನು ಸುಧಾರಿಸಲು, ರಕ್ತದೊತ್ತಡದ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ದೇಹದಲ್ಲಿನ ಕೆಟ್ಟ ಕೊಬ್ಬಿನಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಜೇನುತುಪ್ಪದ ಮಿತ ಸೇವನೆಯು ಆಕ್ಸಿಡೇಟಿವ್ ಒತ್ತಡದಿಂದ ನಿಮ್ಮನ್ನು ದೂರವಿಡುತ್ತದೆ.

ಪ್ರತಿದಿನ ಜೇನುತುಪ್ಪ ತಿನ್ನುವುದರಿಂದ ನರವೈಜ್ಞಾನಿಕ ಸಮಸ್ಯೆಗಳಿಗೂ ಪ್ರಯೋಜನವಿದೆ. ಆತಂಕ, ಖಿನ್ನತೆ ಅಥವಾ ಸ್ಮರಣಶಕ್ತಿ ನಷ್ಟದ ವಿರುದ್ಧ ಹೋರಾಡುವ ಜನರು ಜೇನುತುಪ್ಪ ಸೇವನೆಯಿಂದ ಪ್ರಯೋಜನ ಪಡೆಯಬಹುದು.

ಜೇನುತುಪ್ಪವನ್ನು ತಿನ್ನುವುದರ ಪ್ರಯೋಜನಗಳ ಜೊತೆಗೆ, ಇದು ಕೆಲ ಸ್ಥಳೀಯ ಉಪಯೋಗಗಳನ್ನು ಸಹ ಹೊಂದಿದೆ. ಯುಗಯುಗಗಳಿಂದ, ಜನರು ಸುಟ್ಟಗಾಯಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರದ ಗಾಯಗಳಿಗೆ ಚಿಕಿತ್ಸೆ ನೀಡಲು ಜೇನುತುಪ್ಪವನ್ನು ಬಳಸುತ್ತಿದ್ದಾರೆ.. ಜೇನುತುಪ್ಪದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಕಾರ್ಯಗಳು ಕ್ರಮೇಣ ಪ್ರಗತಿಗಾಗಿ ಸಕ್ರಿಯಗೊಳ್ಳುವ ಸುಟ್ಟಗಾಯಗಳು ಮತ್ತು ಗಾಯಗಳಿಗೆ ಇದನ್ನು ಅನ್ವಯಿಸಬಹುದು.

ಆದಾಗ್ಯೂ, ಗಂಭೀರವಾದ ಸುಟ್ಟಗಾಯಗಳಿಗೆ, ಮನೆಮದ್ದುಗಳ ತ್ವರಿತ ಪರಿಹಾರ ಮತ್ತು ಚಿಕಿತ್ಸೆಯನ್ನು ನೀಡದಿರಬಹುದು, ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ನಿಯಮಿತ ಸಕ್ಕರೆಗೆ ಪರ್ಯಾಯ
ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವ ಯಾರಾದರೂ ಜೇನುತುಪ್ಪ ಸೇವನೆಯಿಂದ ಪ್ರಯೋಜನ ಪಡೆಯಬಹುದು. ಜೇನುತುಪ್ಪ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಾಮಾನ್ಯ ಸಕ್ಕರೆಗೆ ಉತ್ತಮ ಪರ್ಯಾಯವಾಗಿದೆ.

ಕೆಮ್ಮು ಮತ್ತು ಶೀತಕ್ಕೆ ಪ್ರಾಚೀನ ಪರಿಹಾರ
ಜೇನುತುಪ್ಪವು ಹೆಚ್ಚು ಜನಪ್ರಿಯವಾಗಲು ಕಾರಣವೆಂದರೆ ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಜೇನುತುಪ್ಪದಲ್ಲಿರುವ ನಿವಾರಕ ಅಂಶ. ಕೆಮ್ಮು ಮತ್ತು ಶೀತದ ಸಮಯದಲ್ಲಿ ಜೇನುತುಪ್ಪವು ನಿಮ್ಮ ಗಂಟಲಿಗೆ ಶಮನಕಾರಿ ಪದರವನ್ನು ಸೇರಿಸುತ್ತದೆ ಮತ್ತು ಅದು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಜೇನುತುಪ್ಪವನ್ನು ತಿನ್ನುವುದರಿಂದ ಇದು ಒಂದು ಪ್ರಯೋಜನವಾಗಿದೆ.

ಜೇನುತುಪ್ಪದ ಅತ್ಯುತ್ತಮ ಭಾಗವೆಂದರೆ ಅದನ್ನು ಸೇವಿಸುವುದು ತುಂಬಾ ಸುಲಭ. ಇತರ ಯಾವುದೇ ಖಾದ್ಯಕ್ಕಿಂತ ಭಿನ್ನವಾಗಿ, ಜೇನುತುಪ್ಪವನ್ನು ತಿನ್ನುವುದು ಅಷ್ಟೇ ಖುಷಿಯನ್ನು ನೀಡುತ್ತದೆ. ನೀವು ಟೋಸ್ಟ್, ವೆನಿಲ್ಲಾ ಐಸ್ ಕ್ರೀಮ್, ಒಂದು ಬಟ್ಟಲು ಹಣ್ಣುಗಳು ಮತ್ತು ಕ್ರೀಮ್ ಅಥವಾ ಸಲಾಡ್‌ನಂತಹ ಹಲವಾರು ಖಾದ್ಯಗಳಿಗೆ ಜೇನುತುಪ್ಪವನ್ನು ಸೇರಿಸಬಹುದು. ಬೇರೇನೂ ಇಲ್ಲದಿದ್ದರೆ, ನೀವು ಅದನ್ನು ಸರಳವಾಗಿ ಅಥವಾ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಸೇವಿಸಬಹುದು.

 ಆಧರ ಮತ್ತು ಉದರಗಳಿಗೆ ಸಿಹಿಯಾಗಿರುವ ಜೇನುತುಪ್ಪದ ಹಲವಾರು ಉಪಯೋಗಗಳನ್ನು
 ಹರಿತಿರುವ ನಾವುಗಳು ನೈಸರ್ಗಿಕ ರುಚಿಕಾರಕವಾದ ಜೇನುತುಪ್ಪವನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳೋಣ… ಏನಂತೀರಾ?


One thought on “

Leave a Reply

Back To Top