ಅನುವಾದ ಸಂಗಾತಿ
ರಾತ್ರಿ
Francis William Bourdillon
ಅವರ ಇಂಗ್ಲೀಷ್ ಕವಿತೆಯ
ಕನ್ನಡಾನುವಾದ
ಸುಮಾ ರಮೇಶ್ ಅವರಿಂದ
ರಾತ್ರಿಗಿರುವುದು ಸಾವಿರ ಕಣ್ಣುಗಳು
ಮತ್ತು ದಿನಕ್ಕಾದರೆ ಒಂದೇ;
ಹೀಗಿದ್ದರೂ ಹೊಳೆಯುವ ಪ್ರಪಂಚದ
ಬೆಳಕು ನಂದಿಹೋಗುವುದು
ಸಾಯುವ ಸೂರ್ಯನೊಂದಿಗೆ ,
ಮನಸ್ಸಿಗಿರುವುದು ಸಾವಿರ ಕಣ್ಣುಗಳು,
ಮತ್ತು ಹೃದಯಕ್ಕಾದರೆ ಒಂದೇ;
ಹೀಗಿದ್ದರೂ ಇಡೀ ಬಾಳಿನ ಬೆಳಕು ನಂದಿಹೋಗುವುದು
ಪ್ರೀತಿಯು ಕೊನೆಗೊಂಡರೆ.
ಮೂಲ: Francis William Bourdillon (1852-1921)
ಕನ್ನಡಕ್ಕೆ: ಸುಮಾ ರಮೇಶ್
ಸುಮಾ ಅವರೇ ನಿಮ್ಮನ್ನ ಕಾಮನಬಿಲ್ಲು ಸದಸ್ಯನ್ನಾಗಿದ್ದಾಗಿನಿಂದ ಬಲ್ಲೆ ನಾನು, ನೀವ್ಯಾಕೆ ಒಂದಷ್ಟು ಕವಿತೆಗಳನ್ನ ಬರೆಯಬಾರದು
ನಿಮಗಿರೋ ಭಾಷಾ ಪ್ರೌಢಿಮೆಗೆ ಖಂಡಿತ ಸಾಧ್ಯವಾಗುತ್ತೆ ಕಾರಣ ನೀವು ಕನ್ನಡ ಟೀಚರ್ ಆಗಿದ್ದವರು ಪ್ರಯತ್ನ ಮಾಡಿ ಇನ್ನಾದರೂ ♂️