ಮಹಿಳಾ ಸಂಗಾತಿ
ಗಾಯತ್ರಿ ಸುಂಕದ ಬಾದಾಮಿʼ
ʼರಾಷ್ಟ್ರೀಯ ಹೆಣ್ಣು ಮಗುವಿನ ದಿನʼ
ಹೆಣ್ಣು ಮಗು ಎಂದರೆ ನಮಗೆ ನೆನಪಿಗೆ ಬರುವುದು, ಮುದ್ದಾದ, ಮುದ್ದು ಮಾತಿನಿಂದ ಜನರನ್ನು ಸೆಳೆಯುವ ಮುಖ.
ಜಗತ್ತಿನಲ್ಲಿ ಎಲ್ಲ ಕಡೆಗೆ “” ರಾಷ್ಟ್ರೀಯ ಹೆಣ್ಣು ಮಗುವಿನ ದಿನ”ವನ್ನು ಆಚರಿಸಲಾಗುತ್ತಿದೆ.
ನಮ್ಮದು ಮೂಲತಃ ಪುರುಷ ಪ್ರಧಾನ ಸಮಾಜ. ಹಾಗಾಗಿ ಹೆಣ್ಣು ಮಗು ಹುಟ್ಟಿದರೆ ಬೇರೆ ಮನೆಗೆ ಹೋಗುವವಳು,ಖರ್ಚಿಗೆ. ಮೂಲ,ಎಂಬ ಮನಸ್ಥಿತಿಯನ್ನು ತೋರಿಸುತ್ತದೆ.ಇದರಿಂದ ಹೆಣ್ಣು ಮಗಳನ್ನು ಮದುವೆ ಮಾಡಿ ಕಳಿಸಿ ಕೈ ತೊಳೆದು ಕೊಳ್ಳುವ ಆತುರದಲ್ಲಿ ಪ್ರತಿಯೊಬ್ಬ ತಂದೆ ತಾಯಿ ಚಿಂತಿಸುತ್ತಾರೆ.”” ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ”””. ಎಂಬ ಮನಸ್ಥಿತಿ ಇದ್ದಾಗ ಅವಳ ವೈವಾಹಿಕ ಜೀವನದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ಎಷ್ಟೋ ಹೆಣ್ಣು ಮಕ್ಕಳು ತಂದೆ ತಾಯಿಯ ನಿರ್ಲಕ್ಷ್ಯ ದಿಂದ ಕೌಟುಂಬಿಕ ದೌರ್ಜನ್ಯಕ್ಕೆ ಬಲಿ ಆಗುತ್ತಿದ್ದಾರೆ.
ಸ್ನಾತಕೋತ್ತರ ಮತ್ತು ಪಿಹೆಚ್.ಡಿ. ಸೇರುವವರು ಕೇವಲ ಶೆ,6ರಷ್ಟು ,ಎಂಬ ಅಂಶವನ್ನು ನೋಡಿದರೆ ನಾವು ಹೆಣ್ಣು ಮಕ್ಕಳ ಶಿಕ್ಷಣವನ್ನು ಹೇಗೆ ನೋಡುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ.
ಈಗಲೂ ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಎರಡನೇ ದರ್ಜೆಯ ನಾಗರೀಕಳಂತೆ ನೋಡಲಾಗುತ್ತದೆ.ಇದು ಈಗಲೂ ನಾಚಿಕೆಗೇಡಿನ ವಿಷಯ.
ನಮ್ಮಲ್ಲಿ ಗಂಡು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಷ್ಟು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ಕೂಡಲೇ ಅವಳ ಮದುವೆಗೆ ಹಣ ಹೊಂದಿಸಲು ಇನ್ಸೂರೆನ್ಸ್ ಪಾಲಿಸಿ ಮಾಡಿಸುತ್ತಾರೆ,ಆದರೆ ಅವಳ ಶಿಕ್ಷಣದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಡುವ ದೇವರ ಕಾಟದಂತೆ ಡಿಗ್ರಿ ಕೊನೆಯ ವರ್ಷದಲ್ಲಿ ಇರುವಾಗಲೇ ವರ ನೋಡಲು ಶುರು ಮಾಡುತ್ತಾರೆ.
ಮನೆಯಲ್ಲಿ ಹೆಣ್ಣು ಹುಟ್ಟಿದ ಕಾರಣಕ್ಕೆ ಹೆಂಡತಿಗೆ ಡೈವೋರ್ಸ್ ಕೊಟ್ಟ ಭೂಪರಿದ್ದಾರೆ.ಸೊಸೆ ಗಂಡು ಮಗು ಹೆತ್ತರೆ ಮಾತ್ರ ಅವಳನ್ನು ಚೆನ್ನಾಗಿ ನಡೆಸಿ ಕೊಳ್ಳುತ್ತಾರೆ ಮತ್ತು ಸಾಲು. ಸಾಲಾಗಿ ಹೆಣ್ಣು ಹೆತ್ತರೆ ತವರು ಮನೆಗೆ ಸೊಸೆಯನ್ನು ಅಟ್ಟಿದ ಎಷ್ಟೋ ಅತ್ತೆಯರು ಬೇಕಾದಷ್ಟು ಇದ್ದಾರೆ..ಅವರು ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಸರಳವಾಗಿ ತೋರಿಸಿ ಕೊಡುತ್ತಾರೆ.
ಒಂದು ಉತ್ತಮವಾದ ಹೆಣ್ಣು ಮಾತ್ರ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುತ್ತಾಳೆ.
ನಮ್ಮ ಹೆಣ್ಣು ಮಕ್ಕಳನ್ನು ಭ್ರೂಣ ಹತ್ಯೆಯಿಂದ ಪಾರುಮಾಡಿ ಸಮಾಜಕ್ಕೆ ಹೆಣ್ಣು ಮಕ್ಕಳ ಮಹತ್ವ ತೋರಿ ಸೋಣ.
————————————————.
ಗಾಯತ್ರಿ ಸುಂಕದ ಬಾದಾಮಿ