ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ ಅವರ ಕವಿತೆ-
ಸೂರ್ಯ ಪ್ರಕಾಶ
ಆಗಸದ ಅಂಚಿಂದ ಆ
ಸೂರ್ಯ ಬಂದಿಹನು
ಬೆಳಕ ಕೊಡುವ
ನಗುಮುಖದವನು!
ಆಕಾಂಕ್ಷೆ ಪ್ರೀತಿ ಎಲ್ಲರಲಿ
ಇಟ್ಟಿಹನು ಚಂದದ
ದೀಪ ದಂತಿರುವನು!
ಅಚ್ಚರಿಯ ಆಶ್ಚರ್ಯ
ಪ್ರಕಾಶ ಆ ಸೂರ್ಯ
ಮನದ ಕತ್ತಲೆಯ
ತೊಳೆಯುವನು!
ಬೆಳಗುವನು ಬೆಳಕ
ಕೊಡುವನು ನಗುವ
ನಗುಮೊಗದ
ಸೂರ್ಯ ನವನು!
ಗಾಯತ್ರಿ ಎಸ್ ಕೆ