Charlotte Zolotow ಅವರ ಇಂಗ್ಲೀಷ್‌ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್

ಕೆಲವರು ಪಟಪಟ ಮಾತನಾಡುತ್ತಲೇ ಇರುತ್ತಾರೆ
ಆದರೆ ಏನೊಂದು ವಿಷಯವನ್ನು ತಿಳಿಸುವುದೇ ಇಲ್ಲ.
ಕೆಲವರು ನಿಮ್ಮೆಡೆಗೆ ನೋಡಿದರೂ ಸಾಕು
ಹಕ್ಕಿಗಳು ಹಾಡಲಾರಂಭಿಸುತ್ತವೆ.

ಕೆಲವರು ಕಿಲಕಿಲ ನಗುತ್ತಲೇ ಇರುತ್ತಾರೆ
ಆದರೆ ನಿಮಗೆ ಅಳಬೇಕೆನಿಸುತ್ತಿರುತ್ತದೆ.
ಕೆಲವರು ನಿಮ್ಮ ಕೈಯನ್ನು ಸ್ಪರ್ಶಿಸಿದರೂ ಸಾಕು
ಬಾನ ತುಂಬಾ ಮಧುರ ಸಂಗೀತ ತುಂಬಿಕೊಳ್ಳುತ್ತದೆ.


Leave a Reply

Back To Top