ಕಾವ್ಯಸಂಗಾತಿ
ಚಂಪೂ ಅವರ
ಗಜಲ್
ಚಾವಡಿಯಲಿ ನನ್ನಜ್ಜ ಕಂಡ ನೆರಳೊಂದು ಈಗೀಗ ಕಳೆದ್ಹೊಯಿತು…|
ಕಪ್ಪುಕೈ ಬರೆದ ಸುತ್ತೋಲೆಗೆ ಬೆಳಕೊಂದು ಈಗೀಗ ಕಳೆದ್ಹೊಯಿತು..||
ಊಳಿಗದಾಳು ಹೆರುವ ಕೆಂಪು ಖಯಾಲಿ ಒಳಗೊಳಗೆ ಶುರುವಾಗಿದೆ…||
ಚಾಕರಿ ಮಾಡುತ ಕವಲಿರದ ಕನಸೊಂದು ಈಗೀಗ ಕಳೆದ್ಹೊಯಿತು..||
ರೆಕ್ಕೆ ಕತ್ತರಿಸಿದ ಕೈಗಳು ಬೇಡವಾದ ಗಿಡಕ್ಕೆ ಬಾಕು ಹಿಡಿದು ನಿಂತಿವೆ..||
ಸುತ್ತಿಗೆ ಸದ್ದಿಗೆ ಮೃದು ಭಾವನೆಯೊಂದು ಈಗೀಗ ಕಳೆದ್ಹೊಯಿತು..||
ಇರುವಿಕೆಯ ಕುರುಹನ್ನು ಮತ್ತೆ ಹೆಡೆಬಿಚ್ಚಿ ತೋರಿಸಬೇಕಿದೆ ಚೋಮ..|
ಮುಳ್ಳಿನ ಹಾಸಿಗೆ ತಬ್ಬಿದ ದೇಹವೊಂದು ಈಗೀಗ ಕಳೆದ್ಹೊಯಿತು..||
ಆಳದಲಿ ಆಡುವ ಮೀನಿಗೆ ಮುತ್ತು ಹವಳ ಕಾಣಲೇಬೇಕು ಹೀಲಿ.|
ಭಾವ ತರಂಗದ ‘ಚಂದ್ರ’ನ ಬಿಂಬವೊಂದು ಈಗೀಗ ಕಳೆದ್ಹೊಯಿತು…||
ಚಂಪೂ