ರಶ್ಮಿ ಸನಿಲ್ ಅವರ ಕವಿತೆ-ಮರು ಜನ್ಮ

ಕಡಿದರೂ ಮತ್ತೆ ಚಿಗುರಿ ನಿಂತಾದರೂ
ಹೆಮ್ಮರವಾಗಿ ಬೆಳೆಯುವಂತ ಕನಸು..!
ಗಿಡಕ್ಕೆ ಮನುಜನ ದುರಾಸೆ ಅರಿತರೂ
ಕ್ರೂರಿಗೆ ಉಸಿರು ಕೊಡುವಂತ ಮನಸು.!!

ಬುಡಸಮೇತವಾಗಿ ಅಳಿದು ಹೋದರೂ
ಬದುಕು ಉಳಿಯಲು ಅದೇನು ತಪಸ್ಸು?
ಬಡಪಾಯಿ ಜೀವವು ಇಲ್ಲಿ ಬರಡಾದರೂ
ಬದುಕಿ ತೋರಿಸಬೇಕೆನ್ನುವ ಹುಮ್ಮಸ್ಸು.!!

ಮರು ಜನ್ಮ ಪಡೆದ ಸಸ್ಯವ ನೋಡಿ ಕಲಿ
ಮರವಾಗಿ ಬೆಳೆದು ನಿಲ್ಲಲ್ಲೆಂದು ಆಶಿಸು.!
ವರುಣ ದೇವನ ಕೋಪಕ್ಕೆ ಆಗದೇ ಬಲಿ
ವರವಾಗಿ ಸಿಗುವಂತೆ ವೃಕ್ಷವ ಪೋಷಿಸು.!!


Leave a Reply

Back To Top