ಕಾವ್ಯ ಸಂಗಾತಿ
ಕಾವ್ಯ ಸುಧೆ(ರೇಖಾ)
‘ಕಲ್ಪನೆಯ ಕಡಲು’
ಕವಿತೆಗಳೆಲ್ಲ ಬರಿಯ ಕಲ್ಪನೆ
ವರ್ಣಮಯ ಮಾಯಾ ಲೋಕ
ವಾಸ್ತವದ ಅಲೆಗಳು ಹತ್ತಾದರೆ
ಕಲ್ಪನೆಯ ಕಡಲು ನೂರಾರು
ನಿರೀಕ್ಷೆಯ ರೆಕ್ಕೆಪುಕ್ಕ ಬಲಿತು
ಹಾರುವುದು ಬಾನೆತ್ತರ ಗರಿಬಿಚ್ಚಿ
ವಶಪಡಿಸಿ ಓದುಗರ ಮನವ
ಸೆಳೆದು ಅಮೇಲೆರಿಸಿ ಕೊಳ್ಳೆಹೊಡೆದಿತ್ತಾ
ಕನಸಿನ ಸೆರೆಯಲ್ಲಿ ಬಲೆ ನೇಯ್ದು
ತೀರದ ಭ್ರಮೆಯ ಸುಳಿಯಲ್ಲಿ ಮೀಯಿಸಿ
ಸಿಕ್ಕಿದ್ದನ್ನೆಲ್ಲ ಸಿಕ್ಕಸಿಕ್ಕಂತೆ ಸಿಕ್ಕಾಗಿಸಿ
ಉದರದ ಶಿಶುವಾಗಿಸಿ ನಗುತಿದೆ ಕವಿತೆ
———————-
ಕಾವ್ಯ ಸುಧೆ.