ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ನೀ ಇಲ್ಲದೆ ಒಬ್ಬನೆ
ನಾನಿರಲಾರೆ
ನಾ ನಿಲ್ಲದೆ ಒಬ್ಬಳೆ
ನೀನಿರಲಾರೆ
ನೀ ನನಗಿದ್ದರೆ ನಾ ನಿನಗೆ
ಗಾದೆ ಇದೆ
ಎಲ್ಲರಿಗೆ ತಿಳಿದದ್ದೇ ನೀನು
ಕೇಳಿರಲಾರೆ
ಜೊತೆಗೂಡಿ ನಾಲ್ಕು
ದಶಕವಾಯ್ತು
ಗಂಡು ಮಕ್ಕಳಿಲ್ಲೆಂದು
ಕೊರಗಿರಲಾರೆ
ಜೊತೆಯಲಿ ಕ್ರಮಿಸಿ
ದೂರ ಬಹಳ
ಯತ್ನಿಸಿದರೂ ಹಿಂದಿರುಗಿ
ಹೋಗಿರಲಾರೆ
ಕೃಷ್ಣಾ!ಹೊಂದಾಣಿಕೆಯದು
ಬಲುಕಷ್ಠ
ಆ ಗುಟ್ಟುನು ನೀ ಹೇಳ
ಇಚ್ಛಿಸಿರಲಾರೆ
ಬಾಗೇಪಲ್ಲಿ