ಸವಿತಾ ದೇಶಮುಖ ಅವರ ಕವಿತೆ-ನಿರಾಕಾರ

ಯಾವ ದೇವನ ಪೂಜಿಸಿದಡೇನು?
ಭಕ್ತಿ ಭಾವವು ಒಂದೇ ಅಯ್ಯಾ..
ಆವ ಜಾತಿಯ ತಾಯಿಯಾದರೇನು ?
ತುಳುಕುವ ಮಮಕಾರ ಒಂದೇ ಅಯ್ಯಾ…
ಆವ ಭೂವಿಯಲ್ಲಿ ಜನಿಸಿದಡೇನು?
ಭೂಮಾತೆಯ ಅಭಿಮಾನ ಒಂದೇ ಅಯ್ಯಾ…
ಯಾವ ಧರ್ಮವಾದಡೇನು?
ಸಾರುವ ಸಂದೇಶವು ಒಂದೇ ಅಯ್ಯಾ…

ಯಾವ ದೇಶದಲ್ಲಿ ನಿಂತು ನೆಸರನ ನೋಡಿದಡೇನು?
ಅವನು ಚೆಲ್ಲುವ ಬೆಳಕು ಒಂದೇ ಅಯ್ಯಾ….
ಮುಗಿಲಲ್ಲಿ ಮೂಡಿದ ಕೋಟಿ ಕೋಟಿ ತಾರೆಗಳು, ಚಂದ್ರಿಕೆಯ ಹೊಂಗಿಕಿರಣಗಳು ಒಂದೇ ಅಯ್ಯಾ .
ಆ ದೈವದ ಸಂಚಾರವು ಪ್ರತಿ ಮನುಜನ
ಕಣಕಣದಲ್ಲಿ ಮೂಡುತಿಹುದ ಅಯ್ಯಾ….
ಎದೆಯ ಮೀಟಿ ಮೀಟಿ ಹೇಳುತ್ತಿದೆ
ಸೃಷ್ಟಿಯ ಶಕ್ತಿಯು ಒಂದೇ ಅಯ್ಯಾ

ಅಗಮ್ಯ ಅಗೋಚರ ನಿರಾಕಾರ ರೂಪವಯ್ಯ….


Leave a Reply

Back To Top