ನಾಗರಾಜ ಬಿ.ನಾಯ್ಕ ಅವರ ಕವಿತೆ-ಉಸಿರಿನ ದಾರಿ

ಉಸಿರಿನ ದಾರಿಗೆ
ಎಲ್ಲೋ ಪಯಣ
ಸಾಗಿದಷ್ಟು ದೂರ ದೂರ
ಜೀವಕ್ಕೊಂದು ಉಸಿರು
ಭಾರ ನೋವೂ ಹಗುರ
ಹಸಿವೆಯ ಅಳಲು
ನಿದ್ದೆಯ ಮಂಪರು
ಗಾಳಿಯ ಮೌನ
ಜೀವವಾದ ಬಿಂದು
ಎಲ್ಲವೂ ಕಳೆದ ಗತ
ವರ್ತಮಾನ ಭವಿಷ್ಯ
ನೋಡಲು ಸಹಜತೆ
ಅರಿತಷ್ಟು ಇನ್ನೂ ಉಳಿವು
ಇಷ್ಟೇ ಎಂದರೂ
ಇನ್ನಷ್ಟು ಎನ್ನುವ ಮನಸು
ಕಾದು ನೊಂದು ಕನವರಿಸಿ
ಮತ್ತೊಮ್ಮೆ ನಿರ್ಲಿಪ್ತ ಭಾವ
ಭರವಸೆ ಪೂರ್ಣತೆ
ಪಯಣಕ್ಕೆ ಪರಿಚಯಕ್ಕೆ
ಇಷ್ಟೇ ಎಂದು ತುಂಬಿಕೊಳ್ಳುವ
ವಿಶೇಷತೆಗೆ ನಾಳೆಯ ಸಾಕ್ಷಿಗೆ


3 thoughts on “ನಾಗರಾಜ ಬಿ.ನಾಯ್ಕ ಅವರ ಕವಿತೆ-ಉಸಿರಿನ ದಾರಿ

Leave a Reply

Back To Top