ಕಾವ್ಯ ಸುಧೆ. ( ರೇಖಾ )ಅವರಕವಿತೆ- ಅವನಿಲ್ಲ

ನನ್ನದೇ ನುಡಿಮುತ್ತುಗಳನು
ನನಗೇ… ಪೋಣಿಸಿ
ಅನುಕ್ಷಣವೂ ಕವಿತೆಗಳ
ಕಂಠಾಭರಣ ಕಟ್ಟುತ್ತಿದ್ದ
ಕನಸುಕಂಗಳ ಹುಡುಗನಿಗೀಗ
ವೇಳೆಯಿಲ್ಲ

ಸರಿದಿರುಳು
ಕೊರಳ ಸೆರೆಯುಬ್ಬಿ ಬಂದದ್ದು
ಅವನು ಕಳಚಿಟ್ಟ ಆಭರಣದ
ಭಾರಕ್ಕೋ,
ಹೊರಬರಲಾಗದ ಮನದಂಗಳದ
ನುಡಿ ಜೇನಿಗೋ ತಿಳಿಯುತ್ತಿಲ್ಲ…

ಕೇಶ ನಾಗರವಂತೂ
ತಬ್ಬಿದೆ ಮಲ್ಲಿಗೆದಂಡೆಯ
ಅವನಿಲ್ಲ ಆಸ್ವಾದಿಸಲು
ಮಲ್ಲೆಯ ಘಮಲು

ಕಡೆಗೂ ಕಳೆದಿರುಳು
ಬೆನ್ನ ಮೇಲೆ
ಕವಿತೆಯ ಬರೆಯಲಿಲ್ಲ
ಅವನ ಬೆರಳು
ಸಮಯವಿಲ್ಲ ಕನಸುಕಂಗಳ
ಹುಡುಗನಿಗೆ !

———————-

Leave a Reply

Back To Top