ಕಾವ್ಯ ಸಂಗಾತಿ
ಶೃತಿ ರುದ್ರಾಗ್ನಿ
ಗುರು
ಕಾಣುವ ಕಣ್ಣೋಟದ ಒಂದೊಂದು ಅಂಶ ಅಹಿಂಸೆಯಲ್ಲೂ ಅವನಿದ್ದ. ತತ್ವಗಳ ಸಾರುವ ತ್ರೈಲೋಕ ಜ್ಞಾನಿಯಾಗಿ ತನ್ನೊಳಗೆ ತಾತ್ಪರ್ಯ ನುಡಿದು ಕಲಿಸಿದ್ದ.
ಗುರು… ಎರಡಕ್ಷರದ ಅಗಾಧ ಶಕ್ತಿಯಾಗಿ ಶಬ್ದವಾಗಿ ಬರಹವಾಗಿ ಅಕ್ಷರದ ಅಕ್ಕರೆಯ ಅನುಬಂಧವಾಗಿ ಕವಿಯಾಗಿದ್ದ…
ಗುರು…. ಗಮ್ಯ ವಿದ್ವತ್ ಎನ್ನುವ ಪ್ರಕೃತಿಯಾಗಿ ಪದ ಅನಿಕೇತನವಾಗಿ ಪವಿತ್ರ ಪುಷ್ಪ ಪರಿಮಳವಾಗಿ ಪುಸ್ತಕಗಳ ಪುಟಗಳಲ್ಲಿ ಅಡಗಿ ಓದು ಬಾ ಎಂದಿದ್ದ…
ಗುರು… ನೀನು/ನಾನು ನಡೆದ ಹಾದಿಗೆ ಹೂವಾಗುವ ಹಂಬಲದ ಚಿಟ್ಟೆಯಾಗಿ, ಬದುಕಿನ ಪಾಠವಾಗಿ ಕಲಿಕೆಯ ಸಾರಾಂಶವಾಗಿ, ತಿದ್ದಿ ತೀಡುವ ಶಿಲ್ಪಿಯಾಗಿದ್ದ.
ಗುರು… ತಾಯಿ ತಂದೆ ಶಿಕ್ಷಕ ಗೆಳೆಯ ಗೆಳತಿ ಅಜ್ಜಿ ಅಜ್ಜ ಎಲ್ಲ ಬಂಧಗಳನ್ನು ಹೊತ್ತು ನನ್ನೊಳಗೆ ನಾನಾಗಿದ್ದ… ಗುರು ವೆಂಬ ಮನಸಿನ ಮಾತು ಕಿವಿಗೆ ಅಪ್ಪಳಿಸಲು ಕಣ್ಣೆರಡು ಮುಚ್ಚಿ ಸ್ಮರಿಸಿದಾಗ ಕಾಣುವ ಸಾಲು ಸಾಲು ಪ್ರತಿರೂಪದ ಶಕ್ತಿಗಳಿಗೆ ನನ್ನ ಗುರುವಂದನೆ…
ಗುರು ನಮ್ಮೊಳಗೆ/ ನಿಮ್ಮೊಳಗೆ ಸದಾ ಕಾಲ
ದೇವಾರಾಗಿದ್ದ….
ಶಿವನಾಗಿದ್ದ. ಆದಿಯಾಗಿದ್ದ…
ರುದ್ರಾಗ್ನಿ