ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವವು

ಕೆನೆಗಟ್ಟಿದ ಭಾವವು
ಹೊರ ಹೊಮ್ಮಲಿ
ಹೊನಲಾಗಿ ಹಸಿರಾಗಿ
ಉಸಿರಾಗಿ- ಕವನವಾಗಿ,
ಮುಟ್ಟಿ ಎಲ್ಲರ ಮನಗಳಲಿ
ಶಬ್ದಾಂಕನಗೊಳ್ಳಲಿ,
ಕವಿ -ಸಹೃದಯದಿ…..

*ಕೆನೆಗಟ್ಟಿದ ಪ್ರೇಮ ಭಾವವು
ಹೆಪ್ಪಾಗಿ- ಅನುರಾಗದಲಿ,
ಅಂತರಂಗದ ಜೀವನಾಡಿಯಲಿ
ಪ್ರೀತಿಯೊಂದು- ರೂಪಗಿ,
ಚಿಮ್ಮಲಿ- ಹುಲಸಾಗಿ ಬೆಳೆಯಲಿ
ಪ್ರೇಮಿಗಳ ಉದರದಿ….

*ಕೆನೆಗಟ್ಟಿ ನಿಂದ
ದೇಶಾಭಿಮಾನದ ಭಾವವು
ಕಡೆದ ತುಪ್ಪಾಗಿ- ತೆಪ್ಪಗಿ ಕೂಡದಿರಲಿ, ಮಾತೃಭೂಮಿ ಅಭಿಮಾನವ ಮರೆಯದೆ,
ಧೈರ್ಯವ ತೊರೆಯದೆ,
ಸೊಂಟ ಕಟ್ಟಿ ನಿಂತು ಹೋರಾಡುವ
ದೇಶಪ್ರೇಮಿಗಳ- ಮೆರುಗಾಗಲಿ…..

ಕೆನೆಗಟ್ಟಿನಿಂದ ಹೆಣ್ಣಿನ ಭಾವಕ್ಕೆ
ಎರಕು ಹೊಯ್ದು ನೋಡು
ಅಬಲೆ ಬಾಳಿನಲ್ಲಿ ಬೆರೆತ
ಹಾಲಿನಂತೆ,ಕೆಂಗಟ್ಟಿ ನಿಂತ
ಅವಳಂತರಂಗದ…
ಆಳಕೊಮ್ಮೆಇಳಿದುನೋಡು,
ಕುಂದುಒಡೆಯದಥಂಹ ಹೊಳೆವ- ಕಾಂತಿ ,
ಕಾಣದೆ ದೀನಳಎದೆಯ ಒಲವು ….


3 thoughts on “ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವವು

  1. ಕೆನೆಗಟ್ಟಿದ ಭಾವ ಸುಂದರ, ಅರ್ಥಪೂರ್ಣ.

    ಶುಭಲಕ್ಷ್ಮಿ ನಾಯಕ

Leave a Reply

Back To Top