ಪಿ.ವೆಂಕಟಾಚಲಯ್ಯಅವರ ಕವಿತೆ-ಮೇಘ ದೂತ

ವಾಗರ್ಥವಿವ ಸಂಪೃಕ್ತೌ.
ವಾಗರ್ಥ: ಪ್ರತಿಪತ್ತಿಯೆ.
ಜಗತ: ಪಿತರೌ ವಂದೆ
ಪಾರ್ವತಿ ಪರಮೇಶ್ವರೌ.

ಪದನುಡಿಯು ಅದರ ಅರ್ಥ ಪರ ಸ್ಪರ ,
ಒಂದರೊಡನೊಂದುಮೇಲೈಸುವಂದದಿ
ಪೂಜನೀಯ, ಜಗದ, ಜನನಿ ಜನಕರು,
ಪಾರ್ವತಿ ಪರಮೇಶ್ವರನು,ವಂದಿಸುವೆ.

ಬದುಕಿನ ಅನಿಶ್ಚಿತ ಪ ರಿಸ್ಥಿತಿಯಲಿ,
ಜಡವಸ್ತುವು ಸಹ ಪ್ರಕೃತಿಯಲ್ಲಿ,
ಚೈತನ್ಯ ಬರಿಸಿ, ರಕ್ಷಕ ನಾಗುವುದು.
ನಿಶಕ್ತನು ಚೇತೋಹಾ ರಿಯಾಗುವನು.

ಪ್ರಕೃತಿ ದೃಶ್ಯಾವಳಿಗಳ ಗೀತ,
ಕಾಳಿದಾಸ ವಿರಚಿತ ಮೇಘದೂತ.
ರಮ್ಯ ರಸ ಕಾವ್ಯಮೆನೆ ಪೊಗಳ್ಪದು,
ಕಾವ್ಯದಕಥಾವಳಿಯು ಇಂತಿರ್ಪದು.

ನೀಲ ಗಗನದಲಿ ತೇ ಲುತ ಸಾಗುವ,
ಗಾಢ ಕಪ್ಪು ಮೋಡಗ ಳ ಸಮೂಹ.
ತರುಲತಚ್ಚಾದಿತ ಬೆ ಟ್ಟದ ಸಾಲು.
ಹಸಿರನು ಚಾಪಿತ ಹೊ ಲ ಗದ್ದೆ ಬ ಯಲು.
ಸ್ಥಿತಿಯಿಂತಿರೆ ಶ್ರಾವಣ ಮಾಸದಲಿ.
ರಾಮಗಿರಿ ಆಶ್ರಮದ ಪರಿಸರದಲಿ.

ಎಳೆ ಬಿಸಿಲು ಬೀಳುವ ತಂಪಿನ ವೇಳೆ,
ಕಾದು ಅಡರದ ಸಮ ಬಂಡೆಯ ಮೇಲೆ,
ಯಕ್ಷನೋರ್ವ ನಿಡಿದು ಮಲಗಿ ಹನಲ್ಲಿ.
ವಿರಹ ವೇದನೆಯ ಕಡು ಚಿಂತೆಯಲ್ಲಿ.

ಅಲಕಾಪುರಿಯಲಿ ಪ್ರಭು ಕುಬೇರನ,
ಒಡ್ಡೋಲಗದಲ್ಲಿ ಆ ಒಂದು ದಿನ,
ಕೋಪದ ಭರದಲಿ ಯಕ್ಷನೋರ್ವನಿಗೆ,
ಒಡೆಯನಿತ್ತನು,ಶಾಪವನು ಎಂತನೆ.

ಸತಿಯನಗಲೊಂದು ವರ್ಷ ಕಾಲವನು,
ದೇಶಾಂತರದಲಿರಲಾಜ್ಞಾಪಿಸಿದನು.
ರಾಮಗಿರಿಯ ಆಶ್ರಮದಲಿ ಯಕ್ಷನು,
ವಿರಹದಲಿ, ಪರಿತಪಿಸುತಲಿದ್ದನು .

ಬಂಡೆಯ ಮೇಲೆ ಅಂ ಗಾತ ಮಲಗಿ,
ಮಡದಿಯ ನೆನೆಯುತಲಿ ಚಿಂತಿಸಿ ಸೊ ರಗಿ,
ಎಂತಿರುವಳೊ ಹೇಗೊ? ತನ್ನ ಪ್ರೇಯಿಸಿ,
ಯೋಗ ಕ್ಷೇಮವನರಿ ಯುವುದೆಂ ತೆನಿಸಿ?

ಸತಿಯನು ಅಗಲಿ ತಿಂಗಳೆಂಟಾ ಯಿತು.
ಅವಳನೆನಪು ಯಕ್ಷನ ಕಾಡು ತಿರಲು,
ತನ್ನಿರುವಿಕವಳಿಗೆ ತಲಪಿಸುವ ದೆಂತು?
ದೂತನಾರನು ಕಳಿಸಲಿ ಈ ಸ್ಥಿತಿಯೊಳು?

ಎಂದೆನುತ ನೋಡಿದ ನಾಕಾಶ ದೆಡೆಗೆ.
ದೂರದಲಿ ಕಾಣ್ವ ಕಾರ್ಮೋಡ ದೆಡೆಗೆ,
ಬಡಗದಿಕ್ಕಿಗೆ ಚಲಿಸುತಿರೊ ಮೇಘವ,
ದೂತನೆಂದೆನಿಸಿ ಪರಿ ಪರಿ ಬೇಡಿದ.

“ಎಲೈ ಬಂಧುವೆ, ಮೇ ಘವೇ ಕುಶಲವೆ?
ನಿನ್ನ ಸತಿಯಾದ ಮಿಂ ಚು ಕುಶಲವೇ?
ನನಗೆ ಬಂದಿರುವ ವಿ ರಹದ ಬಾಧೆಯು,
ನಿನಗೆ ಬಾರದಿರಲಿ ಎಂದಾಶಿಸುವೆ.

ಸತಿಯನಗಲಿ ದೂರ ದೇಶದಲಿರುವೆ.
ಕುಶಲವ ತಿಳಿಯಲಸ ಮರ್ಥನಾಗಿರುವೆ.
ದೂತನಾಗು,ನನ್ನ ಮ ಡದಿಯ ಕಾಣು.
ಕುಶಲವನು ತಿಳಿಸು” ಎಂದು ನು ಡಿದನು.

ವಿರಹ ಬಾಧೆಯಲಿ ನಲುಗಿರೊ ಯಕ್ಷನು,
ದೂತನೆನೆ ಭ್ರಮಿಸಿದ ಜಡ ಮೇಘವನು,
ತಾನಿರುವಲ್ಲಿಂದ ಅಲಕಾಪುರಿಗೆ,
ಸಾಗುವ ಹಾದಿಯ ತಿಳಿಸಿದನೆಂತನೆ.

“ಮಾರ್ಗಮಧ್ಯೆ ಆಮ್ರ ಕೂಟ ಸಿಗುವುದು.
ಅಲ್ಲಿ,ವನದಲ್ಲಿ ಮಳೆ ಯನು ಸುರಿಸು.
ವಿಂಧ್ಯದ ತಪ್ಪಲಲಿ, ನ ರ್ಮದ ನದಿಯು,
ಅದರ ಸುವಾಸಿತ ನೀ ರನು ಸೇವಿಸು.

ವನ,ಉಪವನಗಳಲಿ,ತಂಪಿನ ವೇಳೆ,
ಸಾರಂಗಮೃಗ,ನವಿಲುಗಳ ಗುಂಪು,
ದಶಾರ್ಣ ಉಪವನದಲಿ ರಾಜಹಂ ಸವ,
ನೋಡುತಾ,ನಲಿಯುತಾ,ಸಾಗುವೆ ನೀನು.

ದಶಾರ್ಣದ ರಾಜಧಾನಿಯದು ವಿಧಿಶೆ.
ಸನಿಹದಿ ಹರಿಯುತಿದೆ ನದಿ ವೇ ತ್ರಾವತಿ.
ಮಾಧವೀ ತೋಟಗಳಲಿ ಮಿಶ್ರಮಿಸು.
ಸಾಗುತ ಸೇರುವೆ ನೀನು ಉಜ್ಜಯಿನಿ.

ನಗರವಿದು ಸುಂದರ, ವಿದ್ವಜ್ಜರ ನೆಲೆ.
ನಗರದಲಿ ಸುತ್ತುತ ವಿನೋದವ ಪಡೆ.
ಕುಣಿದು ಕುಪ್ಪಳಿಸುವ ನವಿಲನು ನೋ ಡು.
ಚಂಡೀಶ್ವರ ದೇಗುಲಕೆ ಬೇಟಿ ನೀಡು.

ಪ್ರಿಯ ಸ್ಕಂದನಿರುವ ದೇವಗಿರಿಯಲಿ.
ಅವನ ಮೇಲೆ ಹೂವ ಮಳೆಯನು ಸು ರಿಸು.
ಸನಿಹವೆ ಹರಿಯುವ ಚರ್ಮಣ್ವತಿ ನದಿ,
ಪುಣ್ಯ ನದಿಗೆ ಭಕ್ತಿಭಾ ವದಿ ನಮಿಸು.

ಮೇಘವೇ,ನದಿಯದೇನು ಅದ್ಭು ತವು!
ನೋಡು,ಅದೆಂತು ಕಾಣುತಿದೆ ದೂರಕೆ!
ಇಂದ್ರನೀಲಮಣಿ ಹುದಗಿದ ಮುತ್ತಿನ –
ಹಾರವನುಭೂಮಿಯು ಧರಿಸಿ ದಂತಿದೆ.

ಬ್ರಹ್ಮಾವರ್ತ, ಕುರು ಕ್ಷೇತ್ರವ ದಾಟಿ,
ಸರಸ್ವತಿ ನದಿಯನು ನೀನು ಸೇರುವೆ.
ನದಿಯ ನೀರನು ಸೇ ವಿಸು, ಶುದ್ಧ ನಾಗು,
ಮುಂದಿನ ಹಾದಿ ಹಿಮಾಲಯ ದೆಡೆಗೆ.

ಕಸ್ತೂರಿ ಮೃಗಗಳ ನೆಲೆವೀಡು,
ಪರಮ ಪವಿತ್ರ ಹಿಮಾ ಲಯದ ಬೀಡು.
ಬಂಡೆಬಂಡೆಗಳು ಸು ವಾಸನೆ ಭರಿತ.
ಸಾಗುತ ನೀನಾಗುವೆ ಉಲ್ಲಾಸಿತ.

ಅಲ್ಲಿ ಹಿಮಾಲಯದಲ್ಲಿ, ಕಾಡ್ಗಿಚ್ಚು-
ಕಂಡರೆ,ಅದನು ಹನಿ ಗೆರದು ಆರಿಸು.
ಬಂಡೆಯ ಮೇಲೆ ಕೆತ್ತಿ ರುವ “ಹರಪದ”-
-ನ್ಯಾಸಕೆ,ಭಕ್ತಿಯಿಂದ ನಮಿಸು.

ಮಾನಸ ಸರೋವರದೆಡಗೆ ಸಾಗುವ,
ಹಂಸಗಳು ಮಾರ್ಗವು, ಕ್ರೌಂಚ ರಂ ದ್ರವು,
ಅದರುತ್ತರಕೆ ಕೈಲಾಸ ಪರ್ವತ,
ಗೌರೀ ಈಶನ ವಾಸದ ಸ್ಥಳವು.

ಕುಬೇರ ಭವನದ ಬಡಗಣ ದಿ
ಕ್ಕಿಗೆ,
ನನ್ನಯ ಭವನವು ಕಾಣುವುದು
ನೋಡು.
ಕಾಮನಬಿಲ್ಲಿನಾಕಾರದ ತೋರಣ,
ಪುಷ್ಕರಣಿಯ ಪಚ್ಚೆಗಳ ಸೋಪಾನ

ಪತ್ನಿ ಬೆಳೆಸಿದ ಮಂದಾರ ಗಿಡವಿದೆ.
ಕೊಳದ ದಡದಲಿ ಕ್ರೀ ಡಾ ಶೈಲವಿದೆ.
ಇದೆಲ್ಲವನು ಗುರುತಿಸಿ ಮನೆಯ ಹು ಡುಕು.
ಮುಂದಿನದು ಹೇಳುವೆನು ನೀ ಕೇ ಳು.

ನಾನಿಲ್ಲದ ಮನೆಯಲಿ ಶೋಭೆ ಎಲ್ಲಿ?
ಬರಗೊಟ್ಟಿದೆ ಆನಂದ ಪತ್ನಿಯಲಿ.
ಮಲಿನ ಸೀರೆಯಲಿ ಪೂಜೆಗೈಯ್ಯು ತಲಿ.
ಕಾಣಿಸುವಳು ಬತ್ತಿದ ಶರೀರದಲಿ.

ಮಲಗಿ ನಿದ್ರಿಸುತ ಕನಸು ಕಾಣುತಿರೆ,
ಅವಳ ಸುಖ ನಿದ್ರೆಗೆ ಭಂಗ ತಾರ ದಿರು.
ತಂಪುಗಾಳಿ ಬೀಸಿ ಎಚ್ಚರಗೊಳಿಸು,
ನನ್ನ ಸಂದೇಶವನವಳಿಗೆ ಮುಟ್ಟಿಸು.

ನೀ ನನ್ನ ಮಿತ್ರನೆಂದು ಪರಿಚಯಿ ಸಿಕೊ.
ರಾಮಗಿರಿ ಆಶ್ರಮದಲಿ ನಿನ್ನ ಪತಿ,
ಕ್ಷೇಮದಿಂದಿರುವನೆಂಬುದಾಗಿ ತಿಳಿಸು.
ಅವಳು ಕ್ಷೇಮವೆ? ಎಂಬುದ ವಿಚಾರಿಸು.

ಶಾಪವಿಮೋಚನೆ ದೂರವೇನಿಲ್ಲ.
ಕೂಡಲೆ ಜೊತೆಯಾಗುವಿರೆಂದು ತಿಳಿಸು.”
ಎಂದ ಯಕ್ಷ,ಮೇಘದ ಪತ್ನಿ ಮಿಂ ಚು-
-ಳೊಂದಿಗೆ‌ ಸುಖಿಸುವಂತೆ ಹಾರೈಸಿದನು.

ಸತ್ಯದ ಮರೆಯಲಿ, ಕಲ್ಪನೆಯ ಮೂಸೆ ಯಲಿ.
ಪುಟಗೊಳಿಸಿ,ಹದಗೊಳಿಸಿದಜೀವನಕಥೆಯು,
ಕಲ್ಪನೆಯೊ!ಇದು ಕವಿಯ ಬದುಕಿನ ವ್ಯ ಥೆಯೊ!
ಓದುಗರೆ,ಹೊರಗೆಡವಿ ನಿಮ್ಮ ಇಂಗಿತ.


One thought on “ಪಿ.ವೆಂಕಟಾಚಲಯ್ಯಅವರ ಕವಿತೆ-ಮೇಘ ದೂತ

  1. Keep it up . Good job literally very good. I’m proud to be your colleague for more than three decades. Kesarinalli aralida kamala. My hearty congratulations….. S. Ramachandra reddy.

Leave a Reply

Back To Top