ಶೋಭಾಮಲ್ಲಿಕಾರ್ಜುನ್ ಅವರ ಗಜಲ್

ಅಂಧಕಾರದ ಜಗವ ಪೊರೆಯಲೆಂದೇ ಜನಿಸಿದವ ನೀ ಬಸವ
ಜಾತ್ಯಾತೀತತೆ ಮೆರೆಯಲೆಂದೇ ಬೆಳಕ ಹನಿಸಿದವ ನೀ ಬಸವ

ಅವಿರತ ಅರಿವಿನ ಸುಜ್ಞಾನಿ ನೀನು
ತ್ರಿವಿಧ ದಾಸೋಹಗಳ ತಿಳುಹಲೆಂದೇ ಅವತರಿಸಿದವ ನೀ ಬಸವ

ನಡೆನುಡಿಯೊಂದೇ ಆದವ ನೀನು
ಭೇದ ಭಾವಗಳ ತೊಳೆಯಲೆಂದೇ ಬುವಿಗಿಳಿದವ ನೀ ಬಸವ

ಕಾಯಕವೇ ಕೈಲಾಸ ಎಂದರುಹಿದವ ನೀನು
ಕಷ್ಟವನೀಗಿ ಉಲ್ಲಾಸ ನೀಡಿ ಅನುಭಾವ ಮೊಳೆಯಲೆಂದೇ
ಮೇಳೈಸಿದವ ನೀ ಬಸವ

ಮಾನವೀಯ ಸಂಸ್ಕೃತಿಯ ಕುಲ ಗೌರವ ನೀನು
ವಿಶ್ವ ಗುರುವಾಗಿ ಹೊಳೆಯಲೆಂದೇ ಶಾಶ್ವತ ಶೋಭೆ”ಯಾದವ ನೀ ಬಸವ


3 thoughts on “ಶೋಭಾಮಲ್ಲಿಕಾರ್ಜುನ್ ಅವರ ಗಜಲ್

  1. ಜಗದ ಗುರು, ಯುಗದ ಗುರು ಬಸವಣ್ಣನ ಸ್ಮರಣೆ. ಮಲ್ಲಿಕಾರ್ಜುನನ ಪ್ರೇರಣೆ.

Leave a Reply

Back To Top