ಲಲಿತಾ ಪ್ರಭು ಅಂಗಡಿ ಅವರ ಎರಡುಕವಿತೆಗಳು

ಗರಿಕೆ ಹುಲ್ಲು
ತಿಂದು ಕೊಡುವ
ಪಶು
ಸೊರಗಿದರೂ
ಕೊಡುವುದು
ಕ್ಷೀರ ರಸ
ಹಾಲು ಮೊಸರು
ಹೈನು ತಿಂದ
ಗಟ್ಟಿಯಾದ
ಮನುಜ
ಕಕ್ಕುವನು ವಿಷ.

******

ಮರವೊಂದು
ಬೆಳೆದರೆ
ಪ್ರಾಣಿ ಪಕ್ಷಿ
ಆಶ್ರಯದ
ಗೂಡು
ಕಾಯಿ ಎಲೆ
ಹೂ ಹಣ್ಣು
ನೆರಳು
ಗಾಳಿ
ಮನುಜ ಕುಲಕೆ
ಉಸಿರಿನ
ಬೀಡು
ನಾಡಿಗೆ
ಹಸಿರಿನ
ಸೊಬಗಿನ
ಐಸಿರಿಯ
ಸೊಗಡು


Leave a Reply

Back To Top