ಕುಸುಮಾ.ಜಿ.ಭಟ್ಅವರ ಕವಿತೆ-ವೃಷ್ಟಿ ಲೀಲೆ

ಮಳೆಯು ಸುರಿದಿದೆ
ದಿವದ ಪರದೆ ಸರಿದಿದೆ
ಹಸಿದ ಧಾತ್ರಿಗೆ ಉದಕ ಕುಡಿಸಿ
ಬರಡು ಬಂಜರಲಿ ಬೀಜ ಮೊಳೆಸಿ
ಮಳೆಯು ಸುರಿದಿದೆ
ಇಳೆಯ ಕೊಳೆಯ ತೊಳೆದಿದೆ
ಬರದ ಭಯವ ದೂರ ಸರಿಸಿ
ಕೆಸರ ಬಯಲಲಿ ಹಸಿರ ಮೆರೆಸಿ
ಮಳೆಯು ಸುರಿದಿದೆ


ಧರಣಿ ಸಮೃದ್ಧವಾಗಿದೆ
ಧರೆಯು ಉಕ್ಕಿ ತಂದಿತೆ ಕುತ್ತು
ಮುರುಕು ಗುಡಿಸಲ
ಬುಡವ ಕಿತ್ತು
ಹರುಕು ಬಟ್ಟೆಯ ಹೆಣವ ಹೊತ್ತು
ಮರುಕುವಿಲ್ಲದ ಪರಿಹಾರ ತೆತ್ತು
ಮಳೆಯು ಸುರಿದಿದೆ
ಮರಣ ಮೃದಂಗ ನುಡಿಸಿದೆ
ಪ್ರಕೃತಿ ಮುನಿಯಿತೇ ?
ಮನುಜ ವಿಕೃತಿ ಮೆರೆದನೇ?!
ಮಳೆಯು ಸುರಿದಿದೆ
ಜಲಧಿ ಉಕ್ಕಿ ಹರಿದಿದೆ…..


One thought on “ಕುಸುಮಾ.ಜಿ.ಭಟ್ಅವರ ಕವಿತೆ-ವೃಷ್ಟಿ ಲೀಲೆ

Leave a Reply

Back To Top